BBMP ವಾರ್ಡ್ ಮರು ವಿಂಗಡಣೆ ಬಳಿಕ RTE ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳು, ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Dec 13, 2023 | 12:43 PM

ಲಕ್ಷಾಂತರ ಬಡ ಪೋಷಕರಿಗೆ ಮಕ್ಕಳನ್ನ ಒಳ್ಳೆ ಶಾಲೆಗೆ ಸೇರಿಸಬೇಕು ಹೈಟೆಕ್ ಶಿಕ್ಷಣ ಕೊಡಿಸಬೇಕು ಅಂತಾ ನೂರಾರು ಆಸೆ ಕನಸ್ಸು ಹೋತ್ತಿರ್ತಾರೆ. ಇಷ್ಟು ದಿನ ಕೈಯಲ್ಲಿ ಕಾಸಿಲ್ಲದ ಬಡ ಪೋಷಕರು ಆರ್​ಟಿಇ ಅಡಿಯಲ್ಲಿ ಒಳ್ಳೆ ಖಾಸಗಿ ಶಾಲೆಗೆ ಸೇರಿಸಿ ಮಕ್ಕಳಿಗೆ ಹೈಟೆಕ್ ಶಿಕ್ಷಣ ಕೊಡಿಸ್ತಾ ಇದ್ರೂ ಆದರೆ ಪೋಷಕರ ಈ ಆಸೆಗೂ ಈಗ ಕತ್ತರಿ ಬೀದಿದ್ದು ಹೋರಾಟದ ಹಾದಿ ಹಿಡಿದಿದ್ದಾರೆ.

BBMP ವಾರ್ಡ್ ಮರು ವಿಂಗಡಣೆ ಬಳಿಕ RTE ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳು, ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.13: ಸಾವಿರಾರೂ ಬಡ ಪೋಷಕರು ಆರ್​ಟಿಇ (RTE) ಅಡಿಯಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಅದರಲ್ಲೂ ಬೆಂಗಳೂರಿನಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳಿಗೆ (Private Schools) ಮಕ್ಕಳ ದಾಖಲಾತಿ ಅಂತೂ ದೂರದ ಮಾತು. ಹೀಗಾಗಿ ಸರ್ಕಾರಿ ಶಾಲೆಗಳು (Government Schools)  ಇಲ್ಲದ ವಾರ್ಡ್ ಗಳಲ್ಲಿ ಮಕ್ಕಳಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಆರ್​ಟಿಇ ಕಾಯ್ದೆಯಡಿಯಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾತಿ ನೀಡಲಾಗುತಿತ್ತು. ಆದರೆ ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ 2019 ರಲ್ಲಿ ಸಿಎಂ ಆದ ವೇಳೆ ಶಿಕ್ಷಣ ಕಾಯ್ದೆಗೆ ತಂದ ತಿದ್ದುಪಡಿಯಿಂದ ಬೆಂಗಳೂರಿನಲ್ಲಿ ಆರ್​ಟಿಇ ಕೇವಲ ಬೆರಳೆಣೆಕೆಯಷ್ಟು ವಾರ್ಡ್​ಗಳಲ್ಲಿ ಮಾತ್ರ ಸಿಮೀತವಾಗಿದೆ. ಪೋಷಕರ ಕನಸಿಗೆ ಎಳ್ಳು ನೀರು ಬಿಡುವಂತಾಗಿದೆ.

ಸಾವಿರಾರು ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯುವಂತಾಗಿದೆ. ಹೀಗಾಗಿ ರಾಜ್ಯದಲ್ಲಿ RTE ಕಾಯ್ದೆಗೆ ಮರು ತಿದ್ದುಪಡಿಗೆ ಎಲ್ಲೆಡೆ ಒತ್ತಾಯ ಶುರುವಾಗಿದೆ. ಖಾಸಗಿ ಶಾಲೆಗಳು ರಾಜ್ಯದಲ್ಲಿ ಆರ್​ಟಿಇ ಮರು ಜಾರಿಗೆ ಒತ್ತಾಯ ಶುರುಮಾಡಿ ಪ್ರತಿಭಟನೆಗೆ ಮುಂದಾಗಿವೆ. ಆರ್​ಟಿಇ ಕಾಯ್ದೆಯ ಮರು ತಿದ್ದುಪಡಿಗೆ ಅಗ್ರಹಿಸಿ ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆದಿದೆ.

ಈ ಹಿಂದೆ ತಂದ ತಿದ್ದುಪಡಿಯಿಂದ ಆರ್​ಟಿಇ ಕಾಯ್ದೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪ್ರಯೋಜನವಿಲ್ಲದಂತಾಗಿದೆ. ಬಿಬಿಎಂಪಿ ವಾರ್ಡ್ ವಿಗಂಡಣೆಯ ಬಳಿಕ ಇದಕ್ಕೂ ಬ್ರೇಕ್ ಹಾಕಿದ್ದಂತಾಗಿದೆ. ಬಿಜೆಪಿ ಸರ್ಕಾರ ಬಂದ ಬಳಿಕ 198 ವಾರ್ಡ್‌ಗಳಿಂದ 245 ವಾರ್ಡ್‌ಗಳಿಗೆ ಪುನರ್‌ವಿಂಗಡಣೆ ಮಾಡಿ ಸರ್ಕಾರ ‌ ಅಧಿಸೂಚನೆ ಬಳಿಕ ಸದ್ಯ ಬೆಂಗಳೂರಿನ ಯಾವದೇ ವಾರ್ಡ್ ಗಳಲ್ಲಿಯೂ ಆರ್​ಟಿಇ ಇಲ್ಲದಂತಾಗಿದೆ. ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಪಡೆದು ಉತ್ತಮ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ಬೆಂಗಳೂರಿನ ಯಾವ ವಾರ್ಡ್ ಗಳಲ್ಲಿಯೂ ಆರ್​ಟಿಇ ಸೀಟು ಸದ್ಯ ಸಿಗುತ್ತಿಲ್ಲ.

ಇದನ್ನೂ ಓದಿ: ಕನಕಪುರ ಸರ್ಕಾರಿ ಶಾಲೆಯಲ್ಲಿದೆಂತ ಸ್ಥಿತಿ, ಮಕ್ಕಳ ಕೈಯಿಂದಲೇ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲ್, ಮಲ ಸ್ವಚ್ಛ ಕಾರ್ಯ

ಬಿಬಿಎಂಪಿ ವಾರ್ಡ್ ವಿಭಜನೆಯ ಕಾರಣ ನೀಡಿ ಶಿಕ್ಷಣ ಇಲಾಖೆ ಬೆಂಗಳೂರಿನ ಎಲ್ಲ ವಾರ್ಡ್ ಗಳಿಂದಲೂ ಆರ್​ಟಿಇ ಅವಕಾಶ ತಗೆದು ಹಾಕಲಾಗಿದೆ. ಇಲಾಖೆ ಬೆಂಗಳೂರಿನಿಂದ ಕಂಪ್ಲೀಟ್ ಆರ್​ಟಿಇ ಅಡಿಯ ಖಾಸಗಿ ಶಾಲೆಗಳ ಅರ್ಜಿ ಮೂಲಕ ದಾಖಲಾತಿಗೆ ಬ್ರೇಕ್ ಹಾಕಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಗಣೇಶ ಗೂಡಿ ವಾರ್ಡ್ ಹೊರತುಪಡಿಸಿ ಬೇರೆ ಯಾವ ವಾರ್ಡ್ಗಳಲ್ಲಿಯೂ ಆರ್​ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುತ್ತಿಲ್ಲ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈಗ ಪೋಷಕರು ಹಾಗೂ ಖಾಸಗಿ ಶಾಲೆಗಳು ಕಾಯ್ದೆಯ ಮರು ತಿದ್ದುಪಡಿಗೆ ಒತ್ತಾಯಸಿವೆ. ಆರ್​ಟಿಇ ಕಾಯ್ದೆ ಸರಿಪಡಿಸಿ ಬಡ ಮಕ್ಕಳ ಉಚಿತ ಶಿಕ್ಷಣಕ್ಕೆ ಅವಕಾಶ ನೀಡುವಂತೆ ಒತ್ತಾಯ ಕೇಳಿ ಬಂದಿದೆ.

ಈ ಹಿಂದೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಿಎಂ ಆದ ವೇಳೆ ಶಿಕ್ಷಣ ಕಾಯ್ದೆಗೆ ತಂದ ತಿದ್ದುಪಡಿಯಿಂದ ಬೆಂಗಳೂರಿನಲ್ಲಿ ಆರ್​ಟಿಇ ಕೇವಲ ಬೆರಳಣೆಕಯಷ್ಟು ವಾರ್ಡ್​ಗಳಲ್ಲಿ ಮಾತ್ರ ಸಿಮೀತವಾಗಿತ್ತು. ಆದರೆ ಬಿಬಿಎಂಪಿ ವಾರ್ಡ್ ವಿಗಂಡಣೆಯ ಬಳಿಕ ಇದಕ್ಕೂ ಬ್ರೇಕ್ ಹಾಕಿದ್ದಂತಾಗಿದೆ. ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಪಡೆದು ಉತ್ತಮ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ಇನ್ನು ಬೆಂಗಳೂರಿನ ಯಾವ ವಾರ್ಡ್​ಗಳಲ್ಲಿಯೂ ಆರ್​ಟಿಇ ಸೀಟು ಸಿಗುತ್ತಿಲ್ಲ. ಶಿಕ್ಷಣ ಇಲಾಖೆ ಬೆಂಗಳೂರಿನಿಂದ ಆರ್​ಟಿಇ ಅಡಿಯ ಖಾಸಗಿ ಶಾಲೆಗಳ ಅರ್ಜಿ ಮೂಲಕ ದಾಖಲಾತಿಗೆ ಬ್ರೇಕ್ ಹಾಕಿದೆ.

ರಾಜ್ಯದಲ್ಲಿ ಆರ್​ಟಿಇ ಲಭ್ಯ ಇಲ್ಲದೆ ಇರುವುದು ಬಡ ಪೋಷಕರ ಮಕ್ಕಳ ಶಿಕ್ಷಣದ ಕನಸಿಗೆ ಬೆಂಕಿ ಬಿದ್ದಂತಾಗಿದೆ. ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಈ ಕಾಯ್ದೆಗೆ ಕೊಂಚ ಬದಲಾವಣ ತಂದು ಬಡ ಪೋಷಕರಿಗೆ ಆಸರೆಯಾಗಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ