ಡಬಲ್ ಡೆಕ್ಕರ್ ಪ್ಲೈಓವರ್ ರಸ್ತೆಯಲ್ಲಿ ಗುಂಡಿ, ಚೂರು ಯಾಮಾರಿದರೂ ಹೋಗುತ್ತೆ ಪ್ರಾಣ: ಕಳಪೆ ಕಾಮಗಾರಿ ಆರೋಪ

ಇಡೀ ದೇಶದಲ್ಲೇ ಡಬಲ್ ಡೆಕ್ಕರ್ ಪ್ಲೈಓವರ್ ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು. ಇದು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಡಬಲ್ ಡೆಕ್ಕರ್ ಪ್ಲೈ ಓವರ್ ಕೂಡ ಹೌದು. ಈ ಮೇಲ್ಸೇತುವೆ ಕಾರ್ಯಾರಂಭವಾಗಿ ಇನ್ನೂ 5 ತಿಂಗಳು ಕೂಡ ಆಗಿಲ್ಲ, ಆಗಲೇ ರಸ್ತೆಯಲ್ಲಿ ಗುಂಡಿ ಬಿದ್ದಿದೆ.

ಡಬಲ್ ಡೆಕ್ಕರ್ ಪ್ಲೈಓವರ್ ರಸ್ತೆಯಲ್ಲಿ ಗುಂಡಿ, ಚೂರು ಯಾಮಾರಿದರೂ ಹೋಗುತ್ತೆ ಪ್ರಾಣ: ಕಳಪೆ ಕಾಮಗಾರಿ ಆರೋಪ
ಡಬಲ್ ಡೆಕ್ಕರ್ ಪ್ಲೈಓವರ್ ರಸ್ತೆಯಲ್ಲಿ ಗುಂಡಿ
Follow us
Kiran Surya
| Updated By: Ganapathi Sharma

Updated on:Jan 27, 2025 | 8:09 AM

ಬೆಂಗಳೂರು, ಜನವರಿ 27: ಬೆಂಗಳೂರಿನ‌ ದಕ್ಷಿಣ ಭಾಗದ ಟ್ರಾಫಿಕ್ ಕಿರಿಕಿರಿಗೆ, ಅದರಲ್ಲೂ ಬನಶಂಕರಿ, ಜಯನಗರ ಜೆಪಿ ನಗರದಿಂದ ಸಿಲ್ಕ್ ಬೋರ್ಡ್, ಮಾರತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಭಾಗಕ್ಕೆ ಹೋಗುವ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಿಸಿರುವ ಡಬಲ್ ಡೆಕ್ಕರ್ ಪ್ಲೈಓವರ್ ವರದಾನವಾಗಿದೆ. ಸ್ಥಳೀಯ ಶಾಸಕರು, ಸಚಿವರು ಆಗಿರುವ ರಾಮಲಿಂಗಾ ರೆಡ್ಡಿ ಅವರ ಪರಿಶ್ರಮದಿಂದ ಈ ಪ್ಲೈಓವರ್ ರೆಡಿಯಾಗಿದ್ದು, ಇದನ್ನು ರಾಮಲಿಂಗರೆಡ್ಡಿ ಮಾದರಿ ಎಂದೇ ಕರೆಯುತ್ತಿದ್ದಾರೆ.

ಪ್ಲೈ ಓವರ್ ಓಪನ್ ಆಗಿ 5 ತಿಂಗಳಷ್ಟೇ ಆಗುತ್ತಿದೆ. ಮತ್ತೊಂದು ಮಾರ್ಗದ ಪ್ಲೈ ಓವರ್ ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ. ಆದರೆ, ಈಗಾಗಲೇ ಈ ರಸ್ತೆಯಲ್ಲಿ ಎರಡು ಕಡೆ ಡಾಂಬರ್ ಕಿತ್ತು ಗುಂಡಿಗಳಾಗಿದ್ದು, ವಾಹನ ಸವಾರರಿಗೆ, ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕರವಾಗಿ ಪರಿಣಮಿಸಿದೆ.

ಗುಂಡಿ ಬಗ್ಗೆ ವಾಹನ ಸವಾರರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಮಟ್ಟಕ್ಕೆ ಅಪಾಯಕರವಾಗಿದೆ ಎಂಬುದನ್ನೂ ತಿಳಿಸಿದ್ದಾರೆ.

Double Decker Flyover

ಡಬಲ್ ಡೆಕ್ಕರ್ ಪ್ಲೈಓವರ್

ಈಗಲೇ ರಸ್ತೆ ಗುಂಡಿಯನ್ನು ಸರಿ ಮಾಡದೇ ಹೋದರೆ ಮುಂದೆ ದೊಡ್ಡ ಗುಂಡಿಗಳಾಗಿ ಇಡೀ ರಸ್ತೆಯೇ ಗುಂಡಿಮಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ದಕ್ಷಿಣ ಭಾರತದ ಫಸ್ಟ್ ಡಬಲ್ ಡೆಕ್ಕರ್ ಫ್ಲೈಓವರ್ ಲೋಕಾರ್ಪಣೆ, ಇದರ ವಿಶೇಷತೆಗಳೇನು?

ಡಬಲ್ ಡೆಕ್ಕರ್ ಪ್ಲೈಓವರ್ ರಸ್ತೆ ಮೇಲಿನ ಮೇಲಿನ ಗುಂಡಿ ಬಗ್ಗೆ ಸಚಿವ ರಾಮಲಿಂಗರೆಡ್ಡಿ ಮಾತಾನಾಡಿದ್ದು, ಕೂಡಲೇ ಗುಂಡಿಯನ್ನು ಮುಚ್ಚಿ ಸರಿಯಾದ ವ್ಯವಸ್ಥೆ ಮಾಡಿ ಎಂದು ಬಿಎಂಆರ್​ಸಿಎಲ್​ಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಡಬಲ್ ಡೆಕ್ಕರ್ ಪ್ಲೈಓವರ್ ಆರಂಭ ಆಗಿ ಕೆಲವೇ ದಿನಗಳು ಆಗಿದ್ದು, ಈ ರೀತಿ ಡಾಂಬರ್ ಕಿತ್ತು ಬರುತ್ತಿರುವುದು ಕಳಪೆ ಕಾಮಗಾರಿ ನಡೆದಿರುವ ಅನುಮಾನ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:09 am, Mon, 27 January 25

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ