Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ?

ಕೆಪಿಟಿಸಿಎಲ್‌ನಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಆಗಸ್ಟ್ 20 ರಂದು ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ನಗರದ 90ಕ್ಕೂ ಹೆಚ್ಚು ಬಡಾವಣೆಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆತವರೆಗೂ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ವಿನಂತಿಸಿದೆ. ಹಾಗಾದ್ರೆ, ಯಾವೆಲ್ಲಾ ಏರಿಯಾಗಳಲ್ಲಿ ನಾಳೆ ವಿದ್ಯುತ್ ಇರುವುದಿಲ್ಲ ಎನ್ನುವ ವಿವರ ಈ ಕೆಳಗಿನಂತಿದೆ.

Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ,  ಎಲ್ಲೆಲ್ಲಿ?
Bengaluru Power Cut

Updated on: Aug 19, 2025 | 6:13 PM

ಬೆಂಗಳೂರು, (ಆಗಸ್ಟ್ 19): ವಿದ್ಯುತ್ ನಿರ್ವಹಣಾ ಸ್ಟೇಷನ್‌ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆ ಅಂದರೆ ಆಗಸ್ಟ್‌ 20 (ಬುಧವಾರ) ಬೆಂಗಳೂರಿನ ಕೋರಮಂಗಲ, ಎಚ್‌ಬಿಆರ್‌ ಲೇಔಟ್‌ ಸೇರಿದಂತೆ 90ಕ್ಕೂ ಹೆಚ್ಚು ಬಡಾವಣೆಗಳಲ್ಲಿ ವಿದ್ಯುತ್ ಕಡಿತವಾಗಲಿದೆ (Bengaluru Power Cut) . ಈ ಬಗ್ಗೆ ಬೆಸ್ಕಾಂ (BESCOM) ಮಾಹಿತಿ ನೀಡಿದ್ದು, ” ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆ.ವಿ. ಕೋರಮಂಗಲ ಉಪಕೇಂದ್ರ ವ್ಯಾಪ್ತಿಯಲ್ಲಿ ಬುಧವಾರರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 5ರ ವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ?

66/11ಕೆ.ವಿ. ಮತ್ತಿಕೆರೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.20ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಲೊಟ್ಟೆಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಆರ್.ಕೆ. ಉದ್ಯಾನ, ಸಂಜೀವಪ್ಪ ಕಾಲೋನಿ, ಎಂಎಲ್ಎ ಲೇಔಟ್, ನೇತಾಜಿ ನಗರ, ಪೈಪ್ ಲೈನ್ ರಸ್ತೆ, ಮತ್ತಿಕೆರೆ, ಮೋಹನ್ ಕುಮಾರ್ ನಗರ, ಜೆಪಿ ಪಾರ್ಕ್‌, ಅಕ್ಕಿಯಪ್ಪ ಉದ್ಯಾನ, ಬಿಕೆ ನಗರ, ಎಲ್ಐಸಿ ಕಾಲೋನಿ, ಪಂಪ ನಗರ, ಮತ್ತಿಕೆರೆ, 1ನೇ ಮುಖ್ಯ ರಸ್ತೆ ಯಶವಂತಪುರ, ಎಚ್ಎಂಟಿ ಲೇಔಟ್, ಎಲ್‌ಸಿಆರ್ ಶಾಲಾ ರಸ್ತೆ, ಗೋಕುಲ 1ನೇ ಹಂತ, ಕೆಎನ್ ವಿಸ್ತರಣೆ, ಮತ್ತಿಕೆರೆ, ಎಸ್‌ಬಿಎಂ ಕಾಲೋನಿ, ಬೃಂದಾವನ ನಗರ, ಎಚ್ಎಂಟಿ ಮುಖ್ಯ ರಸ್ತೆ, ಎಂರ‍್ಜೆ ಕಾಲೋನಿ, ಸಂಜೀವಪ್ಪ ಕಾಲೋನಿ, 3ನೇ ಮುಖ್ಯ ರಸ್ತೆ, ಮತ್ತಿಕೆರೆ 2ನೇ ಮುಖ್ಯ ರಸ್ತೆಯಿಂದ 10ನೇ ಮುಖ್ಯ ರಸ್ತೆ, ವಿಆರ್ ಲೇಔಟ್, ಟ್ಯಾಂಕ್ ಬಂಡ್ ರಸ್ತೆ, ಜೆಪಿ ಪಾರ್ಕ್‌, ಎಸ್‌ಬಿಎಂ ಕಾಲೋನಿ, ಬೃಂದಾವನ ನಗರ, ಎಚ್ಎಂಟಿ ಲೇಔಟ್, ಮತ್ತಿಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Karnataka Rains: ಮುಂದಿನ 2 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ವಿಪರೀತ ಮಳೆ, ರೆಡ್ ಅಲರ್ಟ್​

66/11ಕೆ.ವಿ ಎಚ್.ಬಿ.ಆರ್ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.20ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಚ್.ಬಿ.ಆರ್. 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್‌ನಗರ, ಸುಭಾಷ್‌ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀರ‍್ಸ್ ಕಾಲೋನಿ, ಎಚ್.ಬಿ.ಆರ್. 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ. ಹಳ್ಳಿ ಗ್ರಾಮ, ಸಿ.ಎಂ.ಆರ್. ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶ. ಎಚ್.ಬಿ.ಆರ್. ಲೇಔಟ್ 4ನೇ ಬ್ಲಾಕ್, ಯಾಸಿನ್ನಗರ, 5ನೇ ಬ್ಲಾಕ್, ಎಚ್.ಬಿ.ಆರ್. ನಾಗವಾರ ಮುಖ್ಯರಸ್ತೆ.

ನಾಗವಾರ, ಎನ್.ಜೆ.ಕೆ. ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಎಚ್.ಕೆ.ಬಿ.ಕೆ ಕಾಲೇಜ್, 4ನೇ ಮತ್ತು 5ನೇ ಹೆಚ್.ಬಿ.ಆರ್. ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆ ನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್. ಲೇಔಟ್, ಕೆ.ಕೆ. ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಎಚ್.ಆರ್.ಬಿ.ಆರ್. 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಎ.ಕೆ.ಕಾಲೋನಿ, ಎಚ್.ಆರ್.ಬಿ.ಆರ್. 1ನೇ ಬ್ಲಾಕ್, 80 ಅಡಿರಸ್ತೆ, ಸಿ.ಎಂ.ಆರ್. ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ. ಲೇಔಟ್, ಭಾರತೀಯ ಸಿಟಿ, ಭಾರತ ಮಾತ ಲೇಔಟ್, ಭಾರತ ಮಾತ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ, ಬಿ.ಎಂ.ಆರ್.ಸಿ.ಎಲ್, ಗಾಂಧಿನಗರ, ಕುಶಾಲನಗರ, ಶಾಂಪುರ ಮೇನ್ ರೋಡ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ