Bengaluru Power Cut: ಇಂದಿನಿಂದ ಮೂರು ದಿನ ಬೆಂಗಳೂರಿನ ಹಲವು ಕಡೆ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಇದೆಯಾ?
ಆಗಸ್ಟ್ 22 ರಿಂದ 24 ರವರೆಗೆ ಅಂದರೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಎದುರಾಗಲಿದೆ. ಬೆಸ್ಕಾಂ ಹಾಘೂ ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಂಗಳೂರು, ಆ.22: ಬೆಸ್ಕಾಂ(BESCOM) ಹಾಘೂ ಕೆಪಿಟಿಸಿಎಲ್(KPTCL) ನಿರ್ವಹಣಾ ಕಾಮಗಾರಿ ಹಿನ್ನೆಲೆ ಆಗಸ್ಟ್ 22 ರಿಂದ 24 ರವರೆಗೆ ಅಂದರೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಎದುರಾಗಲಿದೆ(Bengaluru Power Cut). ಆಗಸ್ಟ್ 22 ರಂದು ಮಹಾಲಕ್ಷ್ಮಿ ಲೇಔಟ್, ಕಮ್ಮನಹಳ್ಳಿ, ಶಾಂತಿನಿಕೇತನ, ದೊಡ್ಡಮ್ಮ ಲೇಔಟ್, ಪಾಂಡುರಂಗನಗರ ಲೇಔಟ್, ಬಿಡಬ್ಲ್ಯುಎಸ್ಎಸ್ಬಿ ಕೊತ್ತನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆಗಸ್ಟ್ 23 ರಂದು ಯಲಹಂಕ ನ್ಯೂ ಟೌನ್, ವಿದ್ಯಾರಣ್ಯಪುರ, ಉಣ್ಣಿಕೃಷ್ಣ ಡಬಲ್ ರೋಡ್, ಶೇಷಾದ್ರಿಪುರಂ, ಡೈರಿ ಸರ್ಕಲ್, ಸೋಮೇಶ್ವರ ನಗರ, ನ್ಯಾಯಾಂಗ ಬಡಾವಣೆ, ಚೌಡೇಶ್ವರಿ ಲೇಔಟ್, ಜಿಕೆವಿಕೆ, ಎನ್‌ಸಿಬಿಎಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಇದನ್ನೂ ಓದಿ: ಗೃಹ ಜ್ಯೋತಿ ಯೊಜನೆಯಡಿ ವಿದ್ಯುತ್ ನಿಗಮಗಳಿಗೆ ಹಣ ಬಿಡುಗಡೆ ಮಾಡಿದ ಸರ್ಕಾರ: ಯಾವ ನಿಗಮಕ್ಕೆ ಎಷ್ಟು ಸಿಕ್ತು?
ಆಗಸ್ಟ್ 24 ರಂದು ಸಹಕಾರನಗರ, ಬ್ಯಾಟರಾಯನಪುರ, ತಲಕಾವೇರಿ ಲೇಔಟ್, ಅಮೃತಹಳ್ಳಿ, ಜಕ್ಕೂರು, ಭುವನೇಶ್ವರಿನಗರ, ಅಮೃತನಗರ, ಶಿವರಾಮ ಕಾರಂತನಗರ, ನವ್ಯನಗರ, ಕೊಡಿಗೇಹಳ್ಳಿ ಮುಖ್ಯರಸ್ತೆ, ರಕ್ಷಣಾ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಇರುವುದಿಲ್ಲ.
ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೆಚ್‌ಎಸ್‌ಆರ್ ಲೇಔಟ್, ಜಕ್ಕಸಂದ್ರ, ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್, ಟೀಚರ್ಸ್ ಕಾಲೋನಿ, ವೆಂಕಟಾಪುರ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್, ಎಂಎಲ್‌ಎ ಲೇಔಟ್, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಅಗರ ಫ್ಲೈಓವರ್, ಹೊಸೂರು ಮುಖ್ಯರಸ್ತೆ, ಅಂಬೇಡ್ಕರ್ ನಗರ, ಐಟಿಐ ಲೇಔಟ್, ಬೇಗೂರುಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೊಮ್ಮನಹಳ್ಳಿ, ಕೂಡ್ಲು, ಮಾರುತಿ ಲೇಔಟ್, ಕೋರಮಂಗಲ, ವೀವರ್ಸ್ ಕಾಲೋನಿ, ಮಾರುತಿ ನಗರ, ಪಿಲ್ಲಗಾನಹಳ್ಳಿ, ಗೊಟ್ಟಿಗೆರೆ, ಎಂಎಲ್‌ಎ ಲೇಔಟ್, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರ, ತೇಜಶ್ವಿನಿನಗರ ಹಂತ-2, ಮೈಲಸಂದರ, ಹೊಮ್ಮೇದಡ್ಡಹಳ್ಳಿ, ಪ್ರಭಾವನ ರೆಡ್ಡಿ ಬೇಟದಾಸಪುರ, ಹುಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ದೂರುಗಳನ್ನು ಸಲ್ಲಿಸಲು 1912 ನಂಬರ್ಗೆ ಕಾಲ್ ಮಾಡಬಹುದು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ