ಬೆಂಗಳೂರು, ಸೆ.10: ರೀಲ್ಸ್ ಸ್ಟಾರ್ ಡಿಜೆ ದೀಪು(Reels Star Deepu) ಹೆಸರಲ್ಲಿ ವಂಚನೆ(Cheating) ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರದೀಪ್ನ ಮತ್ತೊಂದು ಮುಖವಾಡ ಬಯಲಾಗಿದೆ. ಆರೋಪಿ ಪ್ರದೀಪ್ ಇನ್ಸ್ಟಾಗ್ರಾಮ್ನಲ್ಲಿ ಯುವತಿಯರಿಗೆ ವಂಚನೆ ಮಾಡುವ ಮುಂಚೆಯೇ ಬೈಕ್ ಕಳ್ಳತನ ಮಾಡುತ್ತಿದ್ದ(Bike Theft). ಈತ ಓಎಲ್ ಎಕ್ಸ್ ಪ್ರದೀಪ್ ಅಂತಲೇ ಫೇಮಸ್ ಆಗಿದ್ದಾನೆ(OLX Fraud). ಇದಕ್ಕೆ ಕಾರಣ, ಈತ ಓ ಎಲ್ ಎಕ್ಸ್ ಗ್ರಾಹಕರನ್ನ ಟಾರ್ಗೆಟ್ ಮಾಡುತ್ತಿದ್ದ. ಈತನ ಮೇಲೆ ಬರೊಬ್ಬರಿ 8 ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ 8 ಬೈಕ್ ಕಳವು ಪ್ರಕರಣಗಳು ಆರೋಪಿ ಪ್ರದೀಪ್ ಹೆಸರಲ್ಲಿ ದಾಖಲಾಗಿವೆ.
ಓಎಲ್ಎಕ್ಸ್ ನಲ್ಲಿ ಬೈಕ್ ಮಾರಾಟಕ್ಕಿದೆ ಎಂಬ ಜಾಹಿರಾತುಗಳನ್ನ ಗಮನಿಸುತ್ತಿದ್ದ ಆರೋಪಿ ಪ್ರದೀಪ್, ಅವುಗಳ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಪಡೆದು ಎಸ್ಕೇಪ್ ಆಗುತ್ತಿದ್ದ. ಓಎಲ್ಎಕ್ಸ್ನಲ್ಲಿ ಜಾಹಿರಾತು ನೋಡಿ ಮಾಲೀಕರಿಗೆ ಕರೆ ಮಾಡಿ ನಂತರ ನಿಮ್ಮ ಬೈಕ್ ನೋಡಬೇಕು ಎಂದು ವಿಳಾಸ ಪಡೆದು ಮಾಲೀಕರ ಮನೆ ಬಳಿ ಹೋಗುತ್ತಿದ್ದ. ಒಂದು ರೌಂಡ್ ಹೋಗಿ ಬರ್ತೀನಿ ಅಂತ ಬೈಕ್ ಏರಿ ಹೋದ್ರೆ ವಾಪಸ್ಸು ಬರ್ತಾ ಇರಲಿಲ್ಲ. ನಂತರ ಬೈಕ್ ಮಾರಿ ಬಂದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದ. ಇದೀಗ ಬೈಕ್ ಕಳ್ಳತನ ಬಿಟ್ಟು ಇನ್ಸ್ಟಾಗ್ರಾಮ್ ಯುವತಿಯರಿಗೆ ವಂಚನೆ ಮಾಡುತ್ತಿದ್ದ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಿನಲ್ಲಿ ಯುವತಿಯರಿಗೆ ಗಾಳ, ವಂಚನೆ; ದೂರು ದಾಖಲು
ರೀಲ್ಸ್ ಸ್ಟಾರ್ಗಳ ಖಾತೆಯಿಂದ ಫೋಟೋ ವಿಡಿಯೋಗಳನ್ನ ಕದ್ದು ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸುತ್ತಿದ್ದ ಆರೋಪಿ ಪ್ರದೀಪ್, ರೀಲ್ಸ್ ಸ್ಟಾರ್ ದೀಪು ಇನ್ಸ್ಟಾಗ್ರಾಮ್ ನಿಂದ ಫೋಟೋಸ್, ವಿಡಿಯೋಸ್ ಕದ್ದು ಅವುಗಳನ್ನು ಬಳಸಿ ಯುವತಿಯರಿಗೆ ಗಾಳ ಹಾಕುತ್ತಿದ್ದ. ನೇರವಾಗಿ ಭೇಟಿಯಾಗದೇ ಇನ್ಸ್ಟಾಗ್ರಾಮ್ನಲ್ಲೇ ಯುವತಿಯರ ಜೊತೆ ಚಾಟ್ ಮಾಡುತ್ತ ಸ್ನೇಹ ಬೆಳೆಸುತ್ತಿದ್ದ. ಹಲವು ಯುವತಿಯರಿಗೆ ಮೀಟ್ ಆಗ್ತೀನಿ, ಲವ್ ಮಾಡ್ತೀನಿ ಎಂದು ಹಣ ಪಡೆದಿದ್ದ. ಕೆಲ ದಿನಗಳ ಹಿಂದಷ್ಟೇ ನನ್ನ ಹೆಸರು ಬಳಸಿಕೊಂಡು ಡಿಜೆ ದೀಪು ಎಂಬ ಹೆಸರನಲ್ಲಿ ವಂಚನೆ ಆಗುತ್ತಿರುವ ಬಗ್ಗೆ ದೀಪು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಪ್ರದೀಪ್ ಮತ್ತೆ ಆಕ್ಟಿವ್ ಆಗಿರುವ ಕುರಿತು ಪೀಣ್ಯ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ