AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್ ಇನ್ನೇನು ಹೇಳಬೇಕು? ಮೊದಲು ರಾಜೀನಾಮೆ ನೀಡಿ: ಸಿಎಂಗೆ ಜೋಶಿ ಆಗ್ರಹ

ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ​ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿದೆ. ಇದರ ಬೆನ್ನಲ್ಲೇ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ‘ಕಾಂಗ್ರೆಸ್ ಡಿಎನ್‌ಎ ನಲ್ಲಿಯೇ ಭ್ರಷ್ಟಾಚಾರ ಇದೆ ಎಂದು ಹೇಳಿದ್ದೆ. ಅದೇ ರೀತಿ ಹೈಕೋರ್ಟ್ ಇಂದು ತೀರ್ಪು ನೀಡಿದೆ ಎಂದಿದ್ದಾರೆ.

ಕೋರ್ಟ್ ಇನ್ನೇನು ಹೇಳಬೇಕು? ಮೊದಲು ರಾಜೀನಾಮೆ ನೀಡಿ: ಸಿಎಂಗೆ ಜೋಶಿ ಆಗ್ರಹ
ಪ್ರಲ್ಹಾದ್‌ ಜೋಶಿ -ಸಿದ್ದರಾಮಯ್ಯ
ಹರೀಶ್ ಜಿ.ಆರ್​.
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 24, 2024 | 4:01 PM

Share

ನವದೆಹಲಿ, ಸೆ.24: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ​ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿದೆ. ಇದರ ಬೆನ್ನಲ್ಲೇ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi), ‘ಕೋರ್ಟ್ ಇದು ಷಡ್ಯಂತ್ರ ಅಲ್ಲ ಎಂದು ಹೇಳಿದೆ. ಇನ್ನೇನು ಹೇಳಬೇಕು?. ಮೊದಲ ರಾಜೀನಾಮೆ ನೀಡಿ ಎಂದು ಸಿಎಂ ಸಿದ್ದರಾಮಯ್ಯರಿಗೆ ಆಗ್ರಹಿಸಿದರು.

ಕಾಂಗ್ರೆಸ್ ಡಿಎನ್‌ಎ ನಲ್ಲಿಯೇ ಭ್ರಷ್ಟಾಚಾರದ ಇದೆ ಎಂದು ಹೇಳಿದ್ದೆ. ಅದೆ ರೀತಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಮೇಲ್ನೋಟಕ್ಕೆ ಅಧಿಕಾರ ದುರುಪಯೋಗ ಎಂದು ಹೈಕೋರ್ಟ್ ಹೇಳಿದೆ. ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಮಾಡಲಾಗಿದೆ. ಈ ಹಿನ್ನಲೆ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಈ ಹಿಂದೆ ಯಡಿಯೂರಪ್ಪರ ಮೇಲೆ‌ ಏನು ಹೇಳಿದ್ದಿರಿ ಎಂದು ನೆನಪುಮಾಡಿಕೊಳ್ಳಿ ಎಂದರು.

ಇದನ್ನೂ ಓದಿ:ಕೋರ್ಟ್​​ ತೀರ್ಪಿನ ಬೆನ್ನಲ್ಲೇ ಡಿಸಿಎಂ, ಸಚಿವರ ಜತೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ

ರಾಜ್ಯಪಾಲರನ್ನು ಅವಹೇಳನ, ಅಪಮಾನ ಮಾಡಿದರು. ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ದಲಿತ ನಾಯಕ ಪೋಟೋಗೆ ಚಪ್ಪಲಿಯಲ್ಲಿ ಹೊಡೆಸಿದ್ದೀರಿ. ತಕ್ಷಣ ಸಿದ್ದರಾಮಯ್ಯ ರಾಜ್ಯಪಾಲರನ್ನು ಕ್ಷಮೆ ಕೇಳಬೇಕು. ಒಂದು ನಿಮಿಷವೂ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ರಾಹುಲ್‌ಗಾಂಧಿ ಡೋಂಗಿ ನೈತಿಕತೆ‌ ಹೇಳುತ್ತಾರೆ. ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡುವಂತೆ ಸೂಚಿಸಬೇಕು. ನಾವು ಹೋರಾಟ ಮಾಡಿ ಒತ್ತಡ ಹೇರುತ್ತೇವೆ ಎಂದರು.

ಮುಡಾ ಕೇಸ್​ನಲ್ಲಿ ಸಿದ್ದರಾಮಯ್ಯ ಅಪರಾಧಿ ಎನ್ನುವುದು ಸಾಭೀತು- ಶೋಭಾ ಕರಂದ್ಲಾಜೆ

ಸಿಎಂ ಸಿದ್ದರಾಮಯ್ಯರ​ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ​ಹಿನ್ನಲೆ ನವದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅಪರಾಧಿ ಎನ್ನುವುದು ಸಾಬೀತಾಗಿದೆ. ದಲಿತರ ಜಮೀನು ಖರೀದಿ ಮಾಡಿದ್ದು ಸಿದ್ದರಾಮಯ್ಯನವರ ಮೊದಲ ತಪ್ಪು. ಎರಡನೇಯದಾಗಿ ಸೈಟು ಹಂಚಿಕೆಯಲ್ಲೂ ಅಕ್ರಮ ನಡೆದಿದೆ. ಎಲ್ಲ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂವಿಧಾನದ ಸ್ಥಾನದಲ್ಲಿದ್ದರು. ಮುಡಾದಲ್ಲಿ ನಡೆದಿರುವುದು ಎಲ್ಲಾ ಗೊತ್ತಿತ್ತು. ಆದರೂ ಗವರ್ನರ್ ಬಗ್ಗೆ ಹೀನಾಯವಾಗಿ ಮಾತನಾಡಿದರು.

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು

ಇನ್ನು ಸಿದ್ದರಾಮಯ್ಯ ತನಿಖೆಯನ್ನು ಲೋಕಾಯುಕ್ತ ಮಾಡಬೇಕು. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿ ಇದ್ದರೆ ಲೋಕಾಯುಕ್ತ ತನಿಖೆ ಮೇಲೆ ಪ್ರಭಾವ ಬೀರಬಹುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ