ಅಜಾನ್ ನಿರ್ಬಂಧಿಸಲು ಏಪ್ರಿಲ್ 13ರವರೆಗೆ ಕರ್ನಾಟಕ ಸರ್ಕಾರಕ್ಕೆ ಡೆಡ್​ಲೈನ್ ನೀಡಿದ ಪ್ರಮೋದ್ ಮುತಾಲಿಕ್

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದಲಿಂಗ ಸ್ವಾಮೀಜಿ, ಕರ್ನಾಟಕವನ್ನು ಉತ್ತರ ಪ್ರದೇಶ ಮಾಡಬೇಡಿ ಅಂತ ಹೇಳಿದ್ದಾರೆ. ಅಲ್ಲಿನ ಸಿಎಂ ಸ್ವಚ್ಛ ಆಡಳಿತ ನೀಡಿದ್ದಾರೆ.

ಅಜಾನ್ ನಿರ್ಬಂಧಿಸಲು ಏಪ್ರಿಲ್ 13ರವರೆಗೆ ಕರ್ನಾಟಕ ಸರ್ಕಾರಕ್ಕೆ ಡೆಡ್​ಲೈನ್ ನೀಡಿದ ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್
Edited By: sandhya thejappa

Updated on: Apr 05, 2022 | 9:13 AM

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ನಿಂದ ಆರಂಭವಾದ ವಿವಾದ ಅಜಾನ್ ವರೆಗೂ ಬಂದು ನಿಂತಿದೆ. ಮಸೀದಿಯಲ್ಲಿ ಧ್ವನಿವರ್ಧಕ ಬಳಸಲು ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿವೆ. ಧ್ವನಿವರ್ಧಕದಿಂದ ಶಬ್ದ ಮಾಲೀನ್ಯವಾಗುತ್ತದೆ. ಹೀಗಾಗಿ ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ಇನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಏಪ್ರಿಲ್ 13ರವರೆಗೆ ಡೆಡ್​ಲೈನ್ ನೀಡಿದ್ದಾರೆ. ಕೂಡಲೇ ಅಜಾನ್ ನಿರ್ಬಂಧ ಕೈಗೊಳ್ಳಬೇಕು. ಸರ್ಕಾರ ಕ್ರಮಕೈಗೊಳ್ಳದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಬೃಹತ್ ಪ್ರತಿಭಟನೆಗೆ ನಿರ್ಧಾರ:
ಏಪ್ರಿಲ್ 14 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಅಂತ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮಸೀದಿಗಳ ಮೇಲೆ ಮೈಕಾಸುರರ ಹಾವಳಿ ಬಹಳ ಜೋರಾಗಿದೆ. ಮಸೀದಿಗಳಲ್ಲಿ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮೈಕ್ ಹಚ್ಚದಂತೆ ಆದೇಶ ಆದರೂ ಕೂಡ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ. ಸರ್ಕಾರ ಕೂಡ ಈ ನಿಯಮವನ್ನು ಜಾರಿಗೆ ತರುತ್ತಿಲ್ಲ. ಇನ್ನಾದ್ರು ನ್ಯಾಯಾಲಯದ ಆದೇಶ ಜಾರಿಗೊಳಿಸಬೇಕು. ಮಸೀದಿಗಳು ಧ್ವನಿವರ್ಧಕ ಬಳಕೆಗೆ ಪರವಾನಗಿ ಪಡೆದಿಲ್ಲ ಅಂತ ಕಲಬುರಗಿ ನಗರದಲ್ಲಿ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ:
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದಲಿಂಗ ಸ್ವಾಮೀಜಿ, ಕರ್ನಾಟಕವನ್ನು ಉತ್ತರ ಪ್ರದೇಶ ಮಾಡಬೇಡಿ ಅಂತ ಹೇಳಿದ್ದಾರೆ. ಅಲ್ಲಿನ ಸಿಎಂ ಸ್ವಚ್ಛ ಆಡಳಿತ ನೀಡಿದ್ದಾರೆ. ಹೀಗಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ನೀವು ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದೀರಿ. ಆದರೂ ಜನ ನಿಮಗೆ ಬಹುಮತ ನೀಡಿಲ್ಲ. ಇದಕ್ಕೆ ಕಾರಣ ನೀವು ಹಿಂದು ವಿರೋಧಿಗಳಾಗಿದ್ದೀರಿ. ಪದೇ ಪದೇ ಉತ್ತರ ಪ್ರದೇಶ ಮಾಡಲು ಹೊರಟಿದ್ದಾರೆ ಅಂತ ಹೇಳುತ್ತೀರಿ. ನೀವು ಮಮತಾ ಬ್ಯಾನರ್ಜಿ ಜೊತೆ ಸೇರಿ ಕರ್ನಾಟಕವನ್ನು ಪಶ್ಚಿಮ ಬಂಗಾಳ ಮಾಡಲು ಹೊರಟಿದ್ದೀರಿ. ಹಿಂದೂ ಸಂಘಟನೆಗಳಿಗೆ ಬಿಜೆಪಿ ಸರ್ಕಾರದ ಬೆಂಬಲವಿದೆ ಅನ್ನೋದು ಸುಳ್ಳು ಎಂದರು.

ಇದನ್ನೂ ಓದಿ

ಜಾನಪದ ಕಲಾವಿದ ದಕ್ಕಲ ಮುನಿಸ್ವಾಮಿ ಸೇರಿ ಐವರಿಗೆ ಬಾಬು ಜಗಜೀವನ್ ರಾಂ ಪ್ರಶಸ್ತಿ

Crime News: ಹಣಕಾಸಿನ ವಿಚಾರಕ್ಕೆ ನಡೆದ ಜಗಳದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

Web contact

TV9 Kannada

Read More
Follow Us