ನಾಗರ ಪಂಚಮಿಗೆ ತಟ್ಟಿದ ಬೆಲೆ ಏರಿಕೆ ಎಫೆಕ್ಟ್; ಕೆಆರ್ ಮಾರುಕಟ್ಟೆಯಲ್ಲಿ ಹೂ, ಹಣ್ಣು ದರ ಏಷ್ಟಿದೆ? ಬೆಲೆ ವಿವರ

ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಏಲಕ್ಕಿ ಬಾಳೆ ಹಣ್ಣು 140 ರಿಂದ 150 ರೂಪಾಯಿ ಆಗಿದೆ. ನಾಗಪ್ಪನಿಗೆ ಹಾಲಿನ ಅಭಿಷೇಕ ‌ಮಾಡೋಣ ಅಂದರೆ ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ, ಅರ್ಧ ಲೀಟರ್‌ ಗೆ ಎರಡು ‌ರೂಪಾಯಿ ಏರಿಕೆ ಆಗಿದೆ. ಹಾಗಾದ್ರೆ ಕೆ.ಆರ್​. ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ನಾಗರ ಪಂಚಮಿಗೆ ತಟ್ಟಿದ ಬೆಲೆ ಏರಿಕೆ ಎಫೆಕ್ಟ್; ಕೆಆರ್ ಮಾರುಕಟ್ಟೆಯಲ್ಲಿ ಹೂ, ಹಣ್ಣು ದರ ಏಷ್ಟಿದೆ? ಬೆಲೆ ವಿವರ
ಕೆಆರ್ ಮಾರುಕಟ್ಟೆ
Follow us
Kiran Surya
| Updated By: ಆಯೇಷಾ ಬಾನು

Updated on: Aug 21, 2023 | 6:56 AM

ಬೆಂಗಳೂರು, ಆ.20: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ(Naga Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಗರ ಪಂಚಮಿ ಹಿನ್ನೆಲೆ ನಿನ್ನೆ ಯಿಂದಲೇ ಜನ ಕೆ.ಆರ್. ಮಾರ್ಕೆಟ್​ನಲ್ಲಿ(KR Market) ಹೂವು ಹಣ್ಣು ಕಾಯಿ ಖರೀದಿ ಮಾಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಿಂದ ಸಾವಿರಾರು ಜನರು ಹೂವು, ಹಣ್ಣು, ಕಾಯಿ ಹಾಗೂ ತರಕಾರಿ ಖರೀದಿಸಿದ್ದಾರೆ. ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್​ನಲ್ಲಿ ದರ ಏರಿಕೆ ಆಗಿದೆ. ದರ ಏರಿಕೆ ನಡುವೆಯೇ ಜನ ಹಬ್ಬಕ್ಕಾಗಿ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಹಾಗಾದ್ರೆ ಕೆ.ಆರ್​. ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಏಲಕ್ಕಿ ಬಾಳೆ ಹಣ್ಣು 140 ರಿಂದ 150 ರೂಪಾಯಿ ಆಗಿದೆ. ನಾಗಪ್ಪನಿಗೆ ಹಾಲಿನ ಅಭಿಷೇಕ ‌ಮಾಡೋಣ ಅಂದರೆ ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ, ಅರ್ಧ ಲೀಟರ್‌ ಗೆ ಎರಡು ‌ರೂಪಾಯಿ ಏರಿಕೆ ಆಗಿದೆ. ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಮಲ್ಲಿಗೆ ಮಾರು, ಹಬ್ಬಕ್ಕೆ ಬರೋಬ್ಬರಿ 200 ರಿಂದ 250 ರೂಪಾಯಿ ಆಗಿದೆ. ತೆಂಗಿನಕಾಯಿ 20 ರೂಪಾಯಿ ಇದ್ದಿದ್ದು 35 ರಿಂದ 40 ರೂಪಾಯಿ ಆಗಿದೆ. ಇಷ್ಟೇ ಅಲ್ಲದೇ ಅಡಿಕೆ, ವಿಳ್ಳೆದೆಳೆ ಬಾಳೆಕಂದು, ಮಾವಿನಸೊಪ್ಪಿನ ದರವು ಏರಿಕೆ ಆಗಿದ್ದು ಈ ಬಾರಿ‌ ಹಬ್ಬ ಮಾಡುವವರ ಜೇಬು ಸುಡಲಿದೆ.

ಇದನ್ನೂ ಓದಿ: ಗದಗ: ನಾಗರ ಪಂಚಮಿ ಹಬ್ಬದಂದು ಎರಡು ಹಾವು ಪ್ರತ್ಯಕ್ಷ: ನೀರು ಕುಡಿಸಿ ಸೆರೆ ಹಿಡಿದ ಸ್ನೇಕ ಸಾಗರ

ದರ ಏರಿಕೆಯ ಪಟ್ಟಿ ನೋಡುವುದಾದರೆ

  • ತೆಂಗಿನಕಾಯಿ ಒಂದಕ್ಕೆ- ದೊಡ್ಡದಕ್ಕೆ- 40 ರೂಪಾಯಿ, ಸಣ್ಣದು- 25 ರಿಂದ 30
  • ಪೈನಾಪಲ್ -ಕಳೆದ ವಾರ 32ರೂ. ಕೆಜಿ. ಈ ವಾರ 65 ರೂ.
  • ನುಗ್ಗೆಕಾಯಿ -ಕಳೆದ ವಾರ 40ರೂ. ಈ ವಾರ  60ರೂ.
  • ಬಾಳೆಕಾಯಿ -ಕಳೆದ ವಾರ 8 ರಿಂದ ರಿಂದ 10 ರೂಪಾಯಿ. ಈ ವಾರ 15 ರೂಪಾಯಿ
  • ಸಿಹಿ ಕುಂಬಳಕಾಯಿ -ಕಳೆದ ವಾರ ಕೆಜಿಗೆ 20ರೂ. ಈ ವಾರ 40 ರೂಪಾಯಿ
  • ಬಿಳಿ ಕುಂಬಳಕಾಯಿ -30ರೂ ಕೆಜಿ. ಈಗ 40 ರೂ
  • ಆ್ಯಪಲ್  – ಕಳೆದ ವಾರ 180 ರಿಂದ 200 ರೂ. ಈಗ 250 ರೂ.
  • ದಾಳಿಂಬೆ – ಕಳೆದ ವಾರ 150 ರೂ, ಈಗ 200 ರೂಪಾಯಿ
  • ಕಪ್ಪು ದ್ರಾಕ್ಷಿ -ಕಳೆದ ವಾರ 100 ರಿಂದ 110 ರೂ, ಈಗ 160 ರೂ
  • ಹಸಿರು ದ್ರಾಕ್ಷಿ -ಕಳೆದ ವಾರ 140 ರಿಂದ 150 ರೂ, ಈಗ 200 ರೂ
  • ಸಪೋಟ – ಕಳೆದ 150 ರಿಂದ ‌160 ರೂ, ಈಗ 200 ರೂ
  • ಸಿತಾಫಲ -ಕಳೆದ ವಾರ 60 ರಿಂದ 70 ರೂ ಇತ್ತು, ಈಗ 100 ರೂ
  • ಏಲಕ್ಕಿ ಬಾಳೆಹಣ್ಣು -ಕಳೆದ ವಾರ 80 ರಿಂದ 90ರೂ, ಈಗ  130 ರಿಂದ 140ರೂ
  • ವಿಳ್ಳೆದೆಳೆ ಕಟ್ಟು – ಕಳೆದ ವಾರ 100 ರಿಂದ 110 ರೂ, ಈಗ 140 ರಿಂದ 160 ರೂ
  • ಕಮಲದ ಹೂವು ಜೋಡಿ 30 ರಿಂದ ‌40 ರುಪಾಯಿ, ಸಾವಂತಿಗೆ  ಕೆಜಿ – 280 ರಿಂದ ‌300 ರೂ ಇದೆ
  • ಮಲ್ಲಿಗೆ ಕೆಜಿ -ಕಳೆದ ವಾರ 250 ರಿಂದ 300 ರೂ. ಮಾರು 80 ರಿಂದ 100 ರುಪಾಯಿ ಇತ್ತು. ಈಗ 500 ರಿಂದ 600 ರೂ ಇದೆ.
  • ಕನಕಾಂಬರ -ಕಳೆದ ವಾರ 60 ರಿಂದ 70ರೂ ಇತ್ತು. ಈಗ -100 ರೂ.
  • ಸ್ಮಾಲ್ ರೋಜ್ -ಕಳೆದ ವಾರ 100 ರಿಂದ 120ರೂ. ಈಗ ಕೆಜಿಗೆ 200 ರೂ
  • ಸೂಜಿ ಮಲ್ಲಿಗೆ – ಕಳೆದ ವಾರ 130 ರಿಂದ 140ರೂ ಇತ್ತು. ಈಗ 240 ರೂ
  • ಕಲ್ಲಂಗಡಿ -ಕಳೆದ ವಾರ 30 ರಿಂದ 40ರೂ. ಈಗ ಕೆಜಿಗೆ 40 ರಿಂದ 50ರೂ

    ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್