ಪಿಎಸ್​ಐ ನೇಮಕಾತಿ ಅಕ್ರಮ: 4ನೇ ಶ್ರೇಣಿ ಬಂದಿದ್ದ ಅಭ್ಯರ್ಥಿಯನ್ನೂ ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದರು! ಯಾಕೆ ಗೊತ್ತಾ?

| Updated By: ವಿವೇಕ ಬಿರಾದಾರ

Updated on: Jul 02, 2022 | 10:47 PM

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್​​ನ್ನು ಸಿಐಡಿ ಡಿವೈಎಸ್​ಪಿ ಬಿ.ಕೆ.ಶೇಖರ್ ತಂಡ ಚನ್ನಪಟ್ಟಣದಲ್ಲಿ ಬಂಧಿಸಿದೆ.

ಪಿಎಸ್​ಐ ನೇಮಕಾತಿ ಅಕ್ರಮ: 4ನೇ ಶ್ರೇಣಿ ಬಂದಿದ್ದ ಅಭ್ಯರ್ಥಿಯನ್ನೂ ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದರು! ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 545 ಪಿಎಸ್​ಐ (PSI) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ (Recruitment scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್​​ನ್ನು ಸಿಐಡಿ (CID) ಡಿವೈಎಸ್​ಪಿ ಬಿ.ಕೆ.ಶೇಖರ್ ತಂಡ ಚನ್ನಪಟ್ಟಣದಲ್ಲಿ (Channapattana)  ಬಂಧಿಸಿದೆ. ಎಸ್.ಜಾಗೃತ್ PSI ಪರೀಕ್ಷೆಯಲ್ಲಿ 4ನೇ ರ್ಯಾಂಕ್​​ ಬಂದಿದ್ದನು. ಎಸ್.ಜಾಗೃತ್ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಫ್​​ಐಆರ್ ಹಾಕಿರುವುದನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಈ ಜಾಗೃತನೂ ಒಬ್ಬ.

ಇದನ್ನು ಓದಿ: ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಮಾಜಿ ಸಚಿವೆ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ

ಪಿಎಸ್​​ಐ ನೇಮಕಾತಿ ಪರೀಕ್ಷೆ ರದ್ದ ಮಾಡಿದ್ದ ಬಳಿಕ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ನಾಯಕತ್ವ ವಹಿಸಿದ್ದ ಅರೋಪಿ ಕೇಸ್ ದಾಖಲಾಗಿದ್ದ ಬಳಿಕ ಎಸ್ಕೇಪ್ ಅಗಿದ್ದನು. ಕೇರಳ ಹಾಗು ಬೇರೆ ಬೇರೆ ಕಡೆ ತಲೆಮರೆಸಿಕೊಂಡು ತಿರುಗುತಿದ್ದನು.  ಆಗ ಆರೋಪಿ ಮೊದಲ ಹಂತದಲ್ಲೆ ಹಣ ಕೊಟ್ಟು ಒ.ಎಂ.ಆರ್ ಶೀಟ್ ತಿದ್ದಿಸಿದ್ದು ಪತ್ತೆಯಾಗಿತ್ತು. ಎಫ್​​ಎಸ್​​ಎಲ್ ವರದಿ ಅನ್ವಯ ಕೇಸ್​​ನಲ್ಲಿ ಅರೋಪಿಯಾಗಿದ್ದನು. ಹಣ ನೀಡಿ ಮಧ್ಯವರ್ತಿ ಹಾಗು ಎಫ್ ಡಿ ಎ ಹರ್ಷ ಮೂಲಕ ವ್ಯವಹಾರ ಮಾಡಿದ್ದನು.

ಇದನ್ನು ಓದಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ಡಿಜಿಪಿ ಶ್ರೀಕುಮಾರ್​​ಗೆ ನ್ಯಾಯಾಂಗ ಬಂಧನ

ಸದ್ಯ  ಅರೋಪಿಯನ್ನು ಅರೆಸ್ಟ್ ಮಾಡಿ ಸಿಐಡಿ ಅಧಿಕಾರಿಗಳು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.  ವಿಚಾರಣೆಗೆ ಅರೋಪಿಯನ್ನು ಹತ್ತು ದಿನ ಸಿಐಡಿ ವಶಕ್ಕೆ ಪಡೆಯಲಾಗಿದೆ.