ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಜುಲೈ 12ರಂದು ಚಾಮರಾಜಪೇಟೆ ಬಂದ್ಗೆ ಕರೆ
ಮುಸ್ಲಿಂ ಸಮುದಾಯ ಈದ್ಗಾ ಮೈದಾನ ನಮ್ಮದು ಎಂದು ಹೇಳುತ್ತಿದ್ದರೆ, ಬಿಬಿಎಂಪಿ ಇದು ಆಟದ ಮೈದಾನ. ಬಿಬಿಎಂಪಿಗೆ ಸೇರಿದ್ದು ಅಂತ ಹೇಳಿದೆ. ಈ ವಿವಾದ ಹಿನ್ನೆಲೆಯಲ್ಲಿ ಜುಲೈ 12ರಂದು ಚಾಮರಾಜಪೇಟೆ ಬಂದ್ಗೆ ಕರೆ ನೀಡಲಾಗಿದೆ.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Chamrajpet Idgah Maidan) ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಮುಸ್ಲಿಂ ಸಮುದಾಯ ಈದ್ಗಾ ಮೈದಾನ ನಮ್ಮದು ಎಂದು ಹೇಳುತ್ತಿದ್ದರೆ, ಬಿಬಿಎಂಪಿ ಇದು ಆಟದ ಮೈದಾನ, ಬಿಬಿಎಂಪಿಗೆ ಸೇರಿದ್ದು ಅಂತ ಹೇಳಿದೆ. ಈ ವಿವಾದ ಹಿನ್ನೆಲೆಯಲ್ಲಿ ಜುಲೈ 12ರಂದು ಚಾಮರಾಜಪೇಟೆ ಬಂದ್ಗೆ ಕರೆ ನೀಡಲಾಗಿದೆ. ಬಕ್ರೀದ್ ಹಬ್ಬದ ಬಳಿಕ ನಾಗರಿಕರ ಒಕ್ಕೂಟ ಬಂದ್ಗೆ ಕರೆ ನೀಡಿದೆ.
ಜುಲೈ 12ರಂದು ಅಂಗಡಿ ಮುಂಗಟ್ಟು ಮುಚ್ಚಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಅಂದು ಶಾಂತಿಯುತ ಮೆರವಣಿಗೆ ಮಾಡಲು ನಿರ್ಧರಿಸಿದ್ದು, ಆಗಸ್ಟ್ 15ರಂದು ಮೈದಾನದಲ್ಲಿ ಧ್ವಜಾರೋಹಣ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಆಟದ ಮೈದಾನ ಬಿಬಿಎಂಪಿ ಸ್ವತ್ತು ಎಂದು ಸಭೆಯಲ್ಲಿ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಪಾಲಿಕೆ ಸದಸ್ಯ ಬಿ.ವಿ ಗಣೇಶ್, ಕ್ಷೇತ್ರದಲ್ಲಿ 20 ಶಾಲೆಗಳಿದ್ದರೂ ಆಟದ ಮೈದಾನವಿಲ್ಲ. ಹೀಗಾಗಿ ಆಟದ ಮೈದಾನವಾಗಿಯೇ ಉಳಿಯಬೇಕು. ಬಂದ್, ರ್ಯಾಲಿ ಮಾಡುತ್ತೇವೆ. ಶಾಂತಿಯುತವಾಗಿ ಬಂದ್ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಮರುಮದುವೆಗೆ ಸಿದ್ಧರಾದ ಅಥರ್ ಅಮೀರ್ ಖಾನ್, ನಿಶ್ಚಿತಾರ್ಥ ಫೋಟೋ ಹಂಚಿಕೊಂಡ 2015ರ UPSC 2ನೇ ಟಾಪರ್ ಆಥರ್ ಅಮೀರ್
ಬಂದ್ ಮಾಡೇ ಮಾಡ್ತೀವಿ: ಪ್ರತಿಕ್ರಿಯೆ ನೀಡಿರುವ ನಾಗರೀಕರ ಒಕ್ಕೂಟ ವೇದಿಕೆಯ ಸಂಚಾಲಕ ರುಕ್ಮಾಂಗದ, ಶಾಸಕರು, ಅಧಿಕಾರಿಗಳು ಅಡ್ಡಿ ಪಡಿಸಿದರೂ ಬಂದ್ ನಿಲ್ಲಲ್ಲ. ಯಾರೇ ಅಡ್ಡಿ ಮಾಡಿದ್ರೂ ನಾವು ಬಂದ್ ಮಾಡೇ ಮಾಡೇ ಮಾಡ್ತೀವಿ. ನಮ್ಮ ಬಂದ್ನನ್ನ ಯಾರೂ ನಿಲ್ಲಿಸೋಕೆ ಸಾಧ್ಯವಿಲ್ಲ. ಸಂವಿಧಾನದಲ್ಲಿ ಪ್ರತಿಭಟನೆ, ರ್ಯಾಲಿಗಳಿಗೆ ಅವಕಾಶ ಇದೆ. ಇದನ್ನ ಯಾರೂ ತಡಿಯೋಕೆ ಸಾಧ್ಯವಿಲ್ಲ. ಜುಲೈ 12ರಂದು ಚಾಮರಾಜಪೇಟೆ ಬಂದ್ ನಿಶ್ಚಯವಾಗಿದೆ. ಇಡೀ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿರುತ್ತವೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದ್ಗೆ ಬೆಂಬಲಿಸಬೇಕು. ಆಟದ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಅಂತ ಹೆಸರಿಡಬೇಕು. ಬಿಬಿಎಂಪಿ ದ್ವಂದ್ವ ಹೇಳಿಕೆ ನೀಡೋದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಗಲಾಟೆ: ಮೈದಾನ ವಿವಾದಕ್ಕೆ ಸಂಬಂಧಿಸಿ ಇಂದು ಸ್ಥಳೀಯರು ಸಭೆ ನಡೆಸಿದ್ದರು. ಈ ವೇಳೆ ಸಭೆಗೆ ಶಾಸಕ ಜಮೀರ್ ಆಹ್ವಾನಿಸಿದ ವಿಚಾರವಾಗಿ ಗಲಾಟೆ ನಡೆಯಿತು. ಜಮೀರ್ ಸಭೆಗೆ ಬರಬಾರದು ಎಂದು ಕೆಲವರು ಆಕ್ರೋಶ ಹೊರಹಾಕಿದರು. ಜಮೀರ್ ಬಂದರೆ ನಾವೆಲ್ಲರೂ ಎದ್ದು ಹೋಗುತ್ತೇವೆ. ಶಾಸಕರಿಂದಲೇ ವಿವಾದ ಆಗುತ್ತಿದೆ. ಅವರನ್ನೇಕೆ ಆಹ್ವಾನ ನೀಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ.
Published On - 12:30 pm, Sun, 3 July 22