ಪುನೀತ್ ರಾಜ್‍ಕುಮಾರ್ ಹೃದಯಜ್ಯೋತಿ ಯೋಜನೆ: ಗೋಲ್ಡನ್ ಅವರ್​ನಲ್ಲಿ ಉಳಿಯಿತು 10 ಜನರ ಪ್ರಾಣ

ಹಠಾತ್‌ ಹೃದಯಾಘಾತದ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ರಾಜ್ಯ ಸರಕಾರ ಜಾರಿಗೆ ತಂದಿರುವ ಪುನೀತ್ ರಾಜ್‍ಕುಮಾರ್ ಹೃದಯಜ್ಯೋತಿ ಯೋಜನೆಯಡಿಯಲ್ಲಿ 11 ಸಾವಿರ ಜನರಲ್ಲಿ ಗಂಭೀರವಾಗಿರುವ ಸಮಸ್ಯೆ ಪತ್ತೆ ಮಾಡಲಾಗಿದ್ದು, ನಾಲ್ಕು ತಿಂಗಳಲ್ಲಿ ಅಮೂಲ್ಯ ಸಮಯದಲ್ಲಿ 10 ಜೀವ ರಕ್ಷಣೆ ಮಾಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.

ಪುನೀತ್ ರಾಜ್‍ಕುಮಾರ್ ಹೃದಯಜ್ಯೋತಿ ಯೋಜನೆ: ಗೋಲ್ಡನ್ ಅವರ್​ನಲ್ಲಿ ಉಳಿಯಿತು 10 ಜನರ ಪ್ರಾಣ
ಪುನೀತ್ ರಾಜ್‍ಕುಮಾರ್ ಹೃದಯಜ್ಯೋತಿ ಯೋಜನೆ: ಗೋಲ್ಡನ್ ಅವರ್​ನಲ್ಲಿ ಉಳಿಯಿತು 10 ಜನರ ಪ್ರಾಣ
Follow us
Poornima Agali Nagaraj
| Updated By: Ganapathi Sharma

Updated on: Jul 03, 2024 | 7:20 AM

ಬೆಂಗಳೂರು, ಜುಲೈ 3: ಪುನೀತ್‌ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ ಹಬ್‌ ಸ್ಪೋಕ್‌ ಮಾದರಿಯನ್ನು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿತ್ತು. ಆದರೆ, ಮೊದಲ ಹಂತದ ಯೋಜನೆಯಲ್ಲಿ ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್‌ ಲಭ್ಯವಿರಲಿಲ್ಲ. 2024ರ ಮಾರ್ಚ್​​ನಿಂದ ಈ ಚುಚ್ಚು ಮದ್ದು ಲಭ್ಯವಾಗುತ್ತಿದ್ದು, ಇದುವರೆಗೆ ಗೋಲ್ಡನ್​ ಅವರ್​ನಲ್ಲಿ 10 ಜನರಿಗೆ ಈ ಚುಚ್ಚು ಮದ್ದು ನೀಡಿ ಜೀವ ಉಳಿಸಲಾಗಿದೆ.

ಏನಿದು ಹಬ್‌ ಸ್ಪೋಕ್‌ ಮಾದರಿ?

ಹಬ್‌ ಮತ್ತು ಸ್ಪೋಕ್‌ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನು ಸ್ಪೋಕ್‌ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್‌ ಕೇಂದ್ರಗಳನ್ನಾಗಿ ರಚಿಸಲಾಗಿತ್ತು. ಎದೆನೋವು ಕಾಣಿಸಿಕೊಂಡವರು ಸ್ಪೋಕ್‌ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ 6 ನಿಮಿಷದೊಳಗೆ ಅವರ ಸ್ಥಿತಿ ಹೇಗಿದೆ ಎಂಬುದನ್ನು ಎಐ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲಾಗುತ್ತದೆ. ಎಐ ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರಿಗೆ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆ ಇಸಿಜಿ ಪರೀಕ್ಷೆಯಲ್ಲಿ ದೊರೆತರೆ ತಕ್ಷಣ ಮಾಹಿತಿ ನೀಡಿ, ಚಿಕಿತ್ಸೆಗೆ ನೆರವಾಗುತ್ತಾರೆ.

ಸದ್ಯ ಮೊದಲ ಹಂತದ ಯೋಜನೆಯಲ್ಲಿ ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್‌ ನೀಡಿ 10 ಜನರ ಜೀವ ಉಳಿಸಲಾಗಿದೆ. ಈ ಚುಚ್ಚು ಮದ್ದಿನ ಬೆಲೆ 25 ಸಾವಿರ ರೂ. ಆಗಿದ್ದು ಒಟ್ಟು 10 ಜನರನ್ನ ಕಾಪಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡ್ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಹೆಚ್ಚಳ ಪರಿಣಾಮ; ಬೆಂಗಳೂರಿನಲ್ಲಿ ಪ್ಲೇಟ್​​ಲೆಟ್​​ಗೆ ಹೆಚ್ಚಿದ ಬೇಡಿಕೆ

ಒಟ್ಟಿನಲ್ಲಿ ಗೋಲ್ಡನ್ ಅವರ್​​ನಲ್ಲಿರುವವರನ್ನು ಉಳಿಸೋಕೆ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್ ಮುಖ್ಯವಾಗಿದೆ. ಸದ್ಯ ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ಹೃಯದಜ್ಯೋತಿ ಪರಿಚಯಿಸಲು ಆರೋಗ್ಯ ಇಲಾಖೆ ಚಿಂತನೆ‌ ನಡೆಸುತ್ತಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ