ಬಿಬಿಎಂಪಿ ಕಚೇರಿ ಆವರಣದಲ್ಲಿ ಪುನೀತ್ ಪುತ್ಥಳಿ ಲೋಕಾರ್ಪಣೆ; 12 ಜನ ಸಾಧಕರಿಗೆ ‘ಪುನೀತ್ ರಾಜ್ಕುಮಾರ್’ ಪ್ರಶಸ್ತಿ ನೀಡಿ ಗೌರವ
ಬಿಬಿಎಂಪಿ(BBMP) ಕೇಂದ್ರ ಕಚೇರಿಯ ಆವರಣದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್(Puneeth Rajkumar) ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ನಡೀತು.
ಬೆಂಗಳೂರು: ಬಿಬಿಎಂಪಿ(BBMP) ಕೇಂದ್ರ ಕಚೇರಿಯ ಆವರಣದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್(Puneeth Rajkumar) ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ನಡೀತು. ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಆಯೋಜಿಸಿರುವ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಅಶ್ವಿನಿ ಪುನೀತ್ ರಾಜ್ ಕುಮಾರ್(Ashwini Puneeth Rajkumar), ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಹಾಗೂ ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ‘ಪುನೀತ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಕಾರ್ಯಕ್ರಮ ಹಿನ್ನೆಲೆ ಆವರಣದಲ್ಲಿ ವೀರಗಾಸೆ, ಡೊಳ್ಳು ಕುಣಿತ, ನೃತ್ಯ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಪ್ಪು ಹೆಸರಾಗಿ ಉಳಿದಿಲ್ಲ, ಕನ್ನಡಿಗರ ಉಸಿರಾಗಿ ನೆಲೆಸಿದ್ದಾರೆ ಅಂದ್ರು. ನಗುನಗುತ್ತಲೇ ನಟ ಪುನೀತ್ ನಮ್ಮನ್ನ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ನಟ ಪುನೀತ್ ಭಾವಚಿತ್ರಗಳನ್ನು ಪೂಜಿಸುತ್ತಿದ್ದು, ಪುನೀತ್ ಎಂತಹ ಪ್ರೀತಿ ಗಳಿಸಿದ್ರು ಅನ್ನೋದು ಗೊತ್ತಾಗುತ್ತಿದೆ ಅಂದ್ರು.
‘ಪ್ರಶಸ್ತಿ ಅಪೇಕ್ಷಿಸದೇ ಅಪ್ಪು ಸೇವೆ ಮಾಡಿದ್ದ’ ಹಾಗೂ ಪುನೀತ್ ರಾಜ್ಕುಮಾರ್ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಸಹೋದರ ರಾಘವೇಂದ್ರ ರಾಜ್ಕುಮಾರ್ ಭಾಗಿಯಾದ್ರು. ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಪುನೀತ್ ಅವನ ಜೀವನ ಚನ್ನಾಗಿ ಜೀವಿಸಿದ್ದ. ಯಾರಿಗೂ ಹೇಳದೇ ಸೇವೆ ಮಾಡಿದ್ದ. ಯಾವ ಪ್ರಶಸ್ತಿ ಕೂಡ ಅಪೇಕ್ಷಿಸದೇ ಸೇವೆ ಮಾಡಿದ್ದ. ಪ್ರಶಸ್ತಿಗಳು ಅವನಹಿಂದೆ ಹೋಗ್ತಿದೆ. ತಂದೆ ತಾಯಿ ಪಕ್ಕದಲ್ಲಿ ಹೋಗಿ ಮಲಗಿದ್ದಾನೆ ಅಪ್ಪು. ಅಪ್ಪ, ಅಮ್ಮ, ತಮ್ಮ ಮೂವರಿಗೂ ಕೂಡ ಡಾಕ್ಟರೇಟ್ ಸಿಕ್ಕಿದೆ. ಅಪ್ಪು ಇಡೀ ರಾಜ್ಯಕ್ಕೆ ಸ್ವಂತ. ಪುನೀತ್ ಜೊತೆ ಬೆಳೆದಿದ್ದಕ್ಕೆ ಪುಣ್ಯ ಮಾಡಿದ್ವಿ. ಈ ಹಿಂದೆ ಅಪ್ಪಾಜಿ ಪುತ್ಥಳಿ ಅನಾವರಣಕ್ಕೆ ಅಪ್ಪು ಬಂದಿದ್ದ. ಈಗ ಅವನದೇ ಪುತ್ಥಳಿ ಅನಾವರಣಕ್ಕೆ ಬರೋದಕ್ಕೆ ಕಷ್ಟ ಆಗತ್ತೆ ಎಂದು ಭಾವುಕರಾದ್ರು.
ಟಿವಿ9 ನಿರೂಪಕ ರಂಗನಾಥ್ ಭಾರದ್ವಾಜ್ಗೆ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಇನ್ನು ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ಪುನೀತ್ ರಾಜ್ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಬಿಎಂಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿವಿ9 ಕನ್ನಡ ನಿರೂಪಕ ರಂಗನಾಥ್ ಭಾರದ್ವಾಜ್, ಜಯಪ್ರಕಾಶ್ ಶೆಟ್ಟಿ, ನಿರ್ದೇಶಕ ದೊರೆ ಭಗವಾನ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಸೇರಿ 12 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ಚಿತ್ರವನ್ನು ಪುನೀತ್ಗೆ ಅರ್ಪಿಸಿದ ಪ್ರಶಾಂತ್ ನೀಲ್
‘ಕೆಜಿಎಫ್ 2’ ವೀಕ್ಷಿಸಿದ್ದಾರೆ ರಾಧಿಕಾ ಪಂಡಿತ್; ಸಿನಿಮಾ ಬಗ್ಗೆ ಅವರು ಹೇಳಿದ್ದಿಷ್ಟು
Published On - 9:21 pm, Sun, 27 March 22