ಬೆಂಗಳೂರಿನಲ್ಲಿ ಆಗಸ್ಟ್ 15ರವರೆಗೂ ಯಾವುದೇ ಕಠಿಣ ಕ್ರಮ ಇಲ್ಲ; ಸಭೆ ಬಳಿಕ ಸಚಿವ ಆರ್.ಅಶೋಕ್ ಮಾಹಿತಿ

| Updated By: sandhya thejappa

Updated on: Aug 09, 2021 | 2:28 PM

ಪ್ರತಿ ಮನೆಗೆ ತೆರಳಿ ವೈದ್ಯರು ಟೆಸ್ಟ್ ಮಾಡಿ ಧೈರ್ಯ ತುಂಬಬೇಕು. ಆಗಸ್ಟ್ 16ರಿಂದ ವೈಧ್ಯಾಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಬೇಕು. 3 ಕೇಸ್ ಬಂದ್ರೂ ಪೂರ್ತಿ ಬಡಾವಣೆಯಲ್ಲಿ ಟೆಸ್ಟ್ ಮಾಡಬೇಕು. ಅಪಾರ್ಟ್​ಮೆಂಟ್​ನಲ್ಲಿರುವ ಎಲ್ಲಾ ಫ್ಲೋರ್​ಗಳಲ್ಲೂ ಟೆಸ್ಟ್ ಮಾಡಲಾಗುತ್ತದೆ ಎಂದು ಆರ್.ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಆಗಸ್ಟ್ 15ರವರೆಗೂ ಯಾವುದೇ ಕಠಿಣ ಕ್ರಮ ಇಲ್ಲ; ಸಭೆ ಬಳಿಕ ಸಚಿವ ಆರ್.ಅಶೋಕ್ ಮಾಹಿತಿ
ಆರ್.ಅಶೋಕ್
Follow us on

ಬೆಂಗಳೂರು: ಇಂದು (ಆಗಸ್ಟ್ 9) ಬಿಬಿಎಂಪಿ ಅಧಿಕಾರಿಗಳ ಜೊತೆ ಕಂದಾಯ ಸಚಿವ ಆರ್.ಅಶೋಕ್ ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ ಒಂದೂವರೆ ಗಂಟೆಗಳ ಕಾಲ ಕೊರೊನಾ ಬಗ್ಗೆ ಚರ್ಚೆ ನಡೆಸಿದ ಅವರು, ಬೊಮ್ಮನಹಳ್ಳಿ, ಮಹದೇವಪುರ ಕ್ಷೇತ್ರದಲ್ಲಿ ಕೊರೊನಾ ಹೆಚ್ಚಿದೆ. ಸಭೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಿ ಆರೋಗ್ಯ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಪರೀಕ್ಷೆ ಮಾಡಬೇಕು. 108 ತಂಡ ಹಾಗೂ ವಾಹನಗಳನ್ನ ಬಿಡುಗಡೆ ಮಾಡಲಿದ್ದೇವೆ. ಕೊವಿಡ್ ಲಕ್ಷಣ ಇದ್ದರೆ ಪರೀಕ್ಷೆ ಮಾಡಬೇಕು. ಸಂದೇಹ ಬಂದರೂ ಟೆಸ್ಟ್ ಮಾಡಬೇಕು ಅಂತ ಸಚಿವರು ಹೇಳಿದ್ದಾರೆ.

ಪರೀಕ್ಷೆ ಮಾಡುವ ಪ್ರಕ್ರಿಯೆಯನ್ನ ಅಪ್ಲೋಡ್ ಮಾಡಬೇಕು. ಕಳೆದ 40 ದಿನದಿಂದ ಸರಾಸರಿ 400 ಕೇಸ್ ಪತ್ತೆಯಾಗಿವೆ. ಬೆಂಗಳೂರಿನಲ್ಲಿ 159 ಕ್ಲಸ್ಟರ್​ಗಳನ್ನು ಗುರುತಿಸಲಾಗಿದೆ. 60,54,264 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 17,07,679 ಜನರಿಗೆ ಸೆಕೆಂಡ್ ಡೋಸ್ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿ ಮನೆಗೆ ತೆರಳಿ ವೈದ್ಯರು ಟೆಸ್ಟ್ ಮಾಡಿ ಧೈರ್ಯ ತುಂಬಬೇಕು. ಆಗಸ್ಟ್ 16ರಿಂದ ವೈಧ್ಯಾಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಬೇಕು. 3 ಕೇಸ್ ಬಂದ್ರೂ ಪೂರ್ತಿ ಬಡಾವಣೆಯಲ್ಲಿ ಟೆಸ್ಟ್ ಮಾಡಬೇಕು. ಅಪಾರ್ಟ್​ಮೆಂಟ್​ನಲ್ಲಿರುವ ಎಲ್ಲಾ ಫ್ಲೋರ್​ಗಳಲ್ಲೂ ಟೆಸ್ಟ್ ಮಾಡಲಾಗುತ್ತದೆ ಎಂದು ಆರ್.ಅಶೋಕ್ ಹೇಳಿದರು.

ಕೇಸ್ ಪತ್ತೆಯಾಗುವ ಫ್ಲೋರ್ ಮಾತ್ರ ಸೀಲ್​ಡೌನ್​​ ಮಾಡುತ್ತೇವೆ. ಅಪಾರ್ಟ್​ಮೆಂಟ್​ಗಳಲ್ಲಿ ಕೊರೊನಾ ಬಂದ್ರೆ ಅಲ್ಲಿರುವ ಜಿಮ್ ಬಂದ್ ಮಾಡಲಾಗುವುದು. ಅಪಾರ್ಟ್​ಮೆಂಟ್ ಒಳಗೆ ಮಾರ್ಷಲ್​ಗಳನ್ನ ಬಿಡದಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ಸ್ಥಿತಿಗತಿ ನೋಡಿಕೊಂಡು ಕಠಿಣ ಕ್ರಮಗಳ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ ಸಚಿವರು, ಆಗಸ್ಟ್ 15ರವರೆಗೂ ಯಾವುದೇ ಕಠಿಣ ಕ್ರಮ ಇಲ್ಲ. ಆಗಸ್ಟ್ 15ರ ನಂತರ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಮೊದಲಿನಂತೆ ಕೊರೊನಾ ಕೇಸ್ ಹೆಚ್ಚಾಗುವರೆಗೂ ಕಾಯಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಬಳಿಕ ಕಠಿಣ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಬ್ಬಗಳು ಬರುತ್ತಿರುವ ಕಾರಣ ದೇವಸ್ಥಾನಗಳಿಗೆ ನಿರ್ಬಂಧ ಹೇರಲಾಗುತ್ತದೆ. ಮಾರ್ಕೆಟ್ ಬಂದ್​ ಮಾಡುವುದಕ್ಕೆ ಸಮಸ್ಯೆ ಇದೆ. ಮಾರ್ಕೆಟ್ ಕ್ಲೋಸ್ ಮಾಡಿದ್ರೆ ರೈತರಿಗೆ ತೊಂದರೆ ಆಗುತ್ತೆ. ತಜ್ಞರ ಅಭಿಪ್ರಾಯದಂತೆ ತರಗತಿಗಳನ್ನ ಆರಂಭಿಸುತ್ತೇವೆ. ಹಂತ ಹಂತವಾಗಿ ರಾಜ್ಯದಲ್ಲಿ ಶಾಲೆಗಳನ್ನ ಆರಂಭಿಸುತ್ತೇವೆ ಎಂದು ಆರ್.ಅಶೋಕ್​ ಹೇಳಿದರು.

ಇದನ್ನೂ ಓದಿ

Jan Aushadhi Kendra: ಜನೌಷಧಿ ಕೇಂದ್ರ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ

Supreme Court: ಫ್ಲಿಪ್​ಕಾರ್ಟ್​, ಅಮೆಜಾನ್​ ವಿರುದ್ಧ ಸಿಸಿಐ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

R Ashok said will not take corona stringent action until August 15)

Published On - 2:25 pm, Mon, 9 August 21