AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ವಿರುದ್ಧ ಐಟಿ, ಇಡಿಗೆ ದೂರು ಕೊಟ್ಟವರ ಕುಟುಂಬಕ್ಕೆ ಒಳ್ಳೆಯದಾಗಲಿ: ಶಾಸಕ ಜಮೀರ್ ಅಹ್ಮದ್

ನಾನು ಯಾವ ವಕೀಲರನ್ನು ಕೂಡ ಭೇಟಿ ಮಾಡಿಲ್ಲ. ನನ್ನ ಬಳಿ ಎರಡು ದಾಖಲೆಗಳನ್ನು ಸಲ್ಲಿಸುವಂತೆ ಕೇಳಿದ್ದಾರೆ. ಅವುಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ನನ್ನ ವಿರುದ್ಧ ಐಟಿ, ಇಡಿಗೆ ದೂರು ಕೊಟ್ಟವರ ಕುಟುಂಬಕ್ಕೆ ಒಳ್ಳೆಯದಾಗಲಿ: ಶಾಸಕ ಜಮೀರ್ ಅಹ್ಮದ್
ಶಾಸಕ ಜಮೀರ್ ಅಹ್ಮದ್ ಖಾನ್‌
TV9 Web
| Edited By: |

Updated on:Aug 09, 2021 | 9:20 PM

Share

ಬೆಂಗಳೂರು: ನನ್ನ ವಿರುದ್ಧ ಐಟಿ, ಇಡಿಗೆ ದೂರು ಕೊಟ್ಟಿದ್ದಾರಂತೆ. ನನ್ನ ವಿರುದ್ಧ ದೂರು ಕೊಟ್ಟ ಕುಟುಂಬಕ್ಕೆ ಒಳ್ಳೆಯದಾಗಲಿ. ನನ್ನ ಕುಟುಂಬ ಹಾಳಾಗಲಿ, ಅವರು ಬೀದಿಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed Khan) ಕೋಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಮಾಡೋಣ, ಮನೆ ವಿಚಾರಕ್ಕೆ ಹೀಗೆ ಮಾಡ್ತಾರಾ? ನಾನು ಯಾವ ವಕೀಲರನ್ನು ಕೂಡ ಭೇಟಿ ಮಾಡಿಲ್ಲ. ನನ್ನ ಬಳಿ ಎರಡು ದಾಖಲೆಗಳನ್ನು ಸಲ್ಲಿಸುವಂತೆ ಕೇಳಿದ್ದಾರೆ. ಅವುಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ಐಎಂಎಗೆ ಲ್ಯಾಂಡ್ ಮಾಡಿದ್ದೆ. ಅದರ ಸಂಪೂರ್ಣ ವಿವರವನ್ನು ಈ ಹಿಂದೆ 2019ರಲ್ಲೇ ನೀಡಿದ್ದೆ. ಇಡಿ ಅಷ್ಟೊಂದು ಸಿರಿಯಸ್ ಆಗಿದ್ರೆ , ಕೇವಲ 20 ಗಂಟೆಯಲ್ಲಿ ಹೋಗಲ್ಲ. ಇವರು ಅಷ್ಟೊಂದು ಏನು ಮಾಡಿಲ್ಲಯಾವ ಲಾಯರ್ ಅನ್ನೂ ನಾನು ಭೇಟಿ ಮಾಡಿಲ್ಲ. ನಮ್ಮ ವಿರುದ್ದ ಇಡಿಗೆ ಐಟಿಗೆಲ್ಲ ದೂರು ಕೊಟ್ಟಿದ್ದಾರಂತೆ. ED ದಾಳಿಯಿಂದ ನನ್ನನ್ನು ಕಟ್ಟಿಹಾಕಬಹುದೆಂದು ತಿಳಿದಿದ್ದಾರೆ. ED ದಾಳಿ ಮಾಡಲು ಮನೆ ವಿಚಾರ ಬಿಟ್ಟರೆ ಬೇರೇನೂ ಇಲ್ಲ. ನಾನು ಮನೆ ಕಟ್ಟಿದ್ದಕ್ಕೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೇವರು ಇವರಿಗೆ ಒಳ್ಳೆಯದು ಮಾಡುತ್ತಾನಾ? ಎಂದು ಶಾಸಕ ಜಮೀರ್ ಅಹ್ಮದ್ ವ್ಯಂಗ್ಯವಾಗಿ ಪ್ರಶ್ನಿಸಿದರು.

ನನಗೆ ನೋಟಿಸ್ ಇರಲಿಲ್ಲ, ಎಫ್ ಐ ಆರ್ ಕೂಡ ಇರಲಿಲ್ಲ. ನನಗೆ ಅಚ್ವರಿ ಆಯ್ತು. ನಾನು ಈ ಬಗ್ಗೆ ಅವರನ್ನು ಪ್ರಶ್ನಿಸಿದೆ. ಅವರಿಗೆ ಸಹಕಾರ ನೀಡುವುದು ನಮ್ಮ ಜಬಾಬ್ದಾರಿ. ಅವರು ನಿರೀಕ್ಚೆ ಇಟ್ಟುಕೊಂಡು ಬಂದಿದ್ರು. ಆದರೆ ಅವರಿಗೆ ನಿರಾಸೆ ಆಯ್ತು. ಐಟಿ ಅವರು ಬರಬೇಕಿತ್ತು ಆದರೆ ನೀವು ಏಕೆ ಬಂದಿರಿ ಅಂತಾ ಕೇಳಿದೆ. ಇಲ್ಲ ಸರ್.. ನಿಮ್ಮ ಮೇಲೆ ಕಂಪ್ಲೆಂಟ್ ಮಾಡಿದ್ದಾರೆ ಅಂದರು. ನಾನು ನನ್ನ ಮನೆ ವಿವರ ಕೇಳಿದರು. ಮನೆ ಖರ್ಚು, ಕಾಮಗಾರಿ ವಿವರ ಎಲ್ಲಾ ಕೇಳಿದರು ಕೊಟ್ಟಿದ್ದೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: 

ಇಡಿ ದಾಳಿಯ ಬೆನ್ನಲ್ಲೇ ಅಜ್ಮೇರ್ ದರ್ಗಾಕ್ಕೆ ತೆರಳಿದ ಶಾಸಕ ಜಮೀರ್ ಅಹ್ಮದ್

ಶಾಸಕ ಜಮೀರ್ ಅಹ್ಮದ್​ಗೆ ಸಂಕಷ್ಟ, ಇ.ಡಿ. ಬುಲಾವ್​; ಹೆಚ್‌ಎಎಲ್‌ ಏರ್​ಪೋರ್ಟ್​​ನಿಂದ ಜಮೀರ್ ದೆಹಲಿಗೆ ದೌಡು

(MLA Zameer Ahmed Khan says Good for the family of IT and ED complainants against me)

Published On - 2:56 pm, Mon, 9 August 21