ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯಡಿ ಕರ್ನಾಟಕದ ರೈತರಿಗೆ 1023 ಕೋಟಿ ರೂ. ಧನಸಹಾಯ: ಧನ್ಯವಾದ ಸಲ್ಲಿಸಿದ ಸಿಎಂ ಬೊಮ್ಮಾಯಿ

PM Kisan Scheme: ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯಡಿ ರಾಜ್ಯಕ್ಕೆ 51.19 ಲಕ್ಷ ರೈತರ ಖಾತೆಗಳಿಗೆ 2 ನೇ ಕಂತಿನಡಿ, 1023 ಕೋಟಿ ರೂಪಾಯಿ ಧನಸಹಾಯ ಜಮಾ ಮಾಡಲಾಗಿದೆ.

ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯಡಿ ಕರ್ನಾಟಕದ ರೈತರಿಗೆ 1023 ಕೋಟಿ ರೂ. ಧನಸಹಾಯ: ಧನ್ಯವಾದ ಸಲ್ಲಿಸಿದ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us
TV9 Web
| Updated By: Lakshmi Hegde

Updated on:Aug 09, 2021 | 3:33 PM

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (PM Kisan Scheme) 9ನೇ ಕಂತನ್ನು ಇಂದು (ಆಗಸ್ಟ್​ 09) ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ ಬೆನ್ನಲ್ಲೇ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ. ಟ್ವೀಟ್​ ಮಾಡಿರುವ ಬೊಮ್ಮಾಯಿ, ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯಡಿ ರಾಜ್ಯಕ್ಕೆ 51.19 ಲಕ್ಷ ರೈತರ ಖಾತೆಗಳಿಗೆ 2 ನೇ ಕಂತಿನಡಿ, 1023 ಕೋಟಿ ರೂಪಾಯಿ ಧನಸಹಾಯ ಜಮಾ ಮಾಡಲಾಗಿದೆ. ರೈತರಿಗೆ ಆರ್ಥಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ತುಂಬ ಪರಿಣಾಮಕಾರಿಯಾಗಿದೆ. ರಾಜ್ಯದ ಜನರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಟ್ವೀಟ್​ ಮಾಡಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಶೇಕಡಾ 100ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ. 2018ನೇ ಇಸವಿಯ ಡಿಸೆಂಬರ್ 1ರಂದು ಆರಂಭಗೊಂಡ ಈ ಯೋಜನೆಯಡಿ 2 ಹೆಕ್ಟೇರ್​ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರ ರೂಪಾಯಿಯಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ವರ್ಗಾವಣೆಯಾಗಲಿದೆ.

ಈಚಿನ ಕಂತು ಬಂದಿದೆಯೇ ಎಂಬುದನ್ನು ಪರಿಶೀಲಿಸಲು ಹಂತ ಹಂತವಾದ ವಿವರಣೆ ಹೀಗಿದೆ: 1. ಅಧಿಕೃತ ವೆಬ್​ಸೈಟ್​ www.pmkisan.gov.in ಭೇಟಿ ನೀಡಿ. 2. ಅಧಿಕೃತ ವೆಬ್​ಸೈಟ್​ನ ಹೋಮ್​ ಪೇಜ್​ನಲ್ಲಿ ಫಾರ್ಮರ್ಸ್​ ಕಾರ್ನರ್​ ಮೇಲೆ ಕ್ಲಿಕ್ ಮಾಡಬೇಕು. 3. ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. 4. ರಾಜ್ಯ, ಜಿಲ್ಲೆ/ಉಪಜಿಲ್ಲೆ, ಬ್ಲಾಕ್​ ಮತ್ತು ಹಳ್ಳಿ ಈ ಮಾಹಿತಿಯನ್ನು ಸರಿಯಾಗಿ ಆರಿಸಬೇಕು. 5. Get Report ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. 6. ಸ್ಕ್ರೀನ್ ಮೇಲೆ ಕಾಣುವ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿ ಪಟ್ಟಿ) ಮೇಲೆ ಕ್ಲಿಕ್ ಮಾಡಬೇಕು. 7. ಹೆಸರನ್ನು ಪರಿಶೀಲಿಸಿ, ಖಾತ್ರಿ ಪಡಿಸಬೇಕು. 8. pmskny ಹೋಮ್​ಪೇಜ್​ಗೆ ಮರಳಬೇಕು. 9. ಬೆನಿಫಿಷಿಯರಿ ಸ್ಟೇಟಸ್ ಬಟನ್ ಮೇಲೆ ಮತ್ತೆ ಕ್ಲಿಕ್ ಮಾಡಬೇಕು. 10. ಆಧಾರ್ ಕಾರ್ಡ್ ಮಾಹಿತಿ ಅಥವಾ ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಬೇಕು. 11. get date ಬಟನ್ ಮೇಲೆ ಕ್ಲಿಕ್ ಮಾಡಬೇಕು. 12. ಕಂತಿನ ಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿ ಸ್ಕ್ರೀನ್​ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ: Vinayaka Krishna Gokak: ಗೋಕಾಕರ ಕಾದಂಬರಿ ಲೋಕ, ಪಾತ್ರಗಳ ಅಗಾಧ ಅನುಭವದ ಸಂತೆ

Published On - 3:31 pm, Mon, 9 August 21