ಇಡಿ ದಾಳಿಯ ಬೆನ್ನಲ್ಲೇ ಅಜ್ಮೇರ್ ದರ್ಗಾಕ್ಕೆ ತೆರಳಿದ ಶಾಸಕ ಜಮೀರ್ ಅಹ್ಮದ್
ಅವರ ಪುತ್ರ, ಇಬ್ಬರು ಸಹೋದರರು ಮತ್ತು ತಾಯಿ ಅಜ್ಮೇರ್ ದರ್ಗಾ ದರ್ಶನ ಪಡೆಯಲು ಜತೆಗೂಡಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ ವಿಚಾರಣೆ ನಡೆಸಿತ್ತು. ಈ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ಅಜ್ಮೇರ್ ದರ್ಗಾಕ್ಕೆ ತೆರಳಿದ್ದಾರೆ. ಅವರ ಪುತ್ರ, ಇಬ್ಬರು ಸಹೋದರರು ಮತ್ತು ತಾಯಿ ಅಜ್ಮೇರ್ ದರ್ಗಾ ದರ್ಶನ ಪಡೆಯಲು ಜತೆಗೂಡಿದ್ದಾರೆ. ಶಾಸಕ ಜಮೀರ್ ಅಹ್ಮದ್ ಅಜ್ಮೇರ್ ದರ್ಗಾದಿಂದ ದೆಹಲಿಗೆ ತೆರಳಲಿದ್ದಾರೆ ಎಂದು ಸಹ ಹೇಳಲಾಗಿದೆ.
ಶಾಸಕ ಜಮೀರ್ ಆಪ್ತ ಮುಜಾಹಿದ್ ಮನೆ ಮೇಲೂ ಗುರುವಾರ ಇಡಿ ದಾಳಿ ನಡೆದಿದೆ. ಜಮೀರ್ ಆಪ್ತವಲಯದಲ್ಲಿ ಪ್ರಮುಖನಾಗಿರುವ ಮುಜಾಹಿದ್ ಅವರ ಬೆಂಗಳೂರಿನ ಫ್ರೇಜರ್ ಟೌನ್ ಎಂ.ಎಂ.ಸ್ಟ್ರೀಟ್ ನಲ್ಲಿರುವ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಮುಜಾಹಿದ್ ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಶಿವಾಜಿನಗರ ವಾರ್ಡ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದು, ಬಿಬಿಎಂಪಿ ಮುಂದಿನ ಚುನಾವಣೆಗೆ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು. ಫ್ರೇಜರ್ಟೌನ್ ವಾರ್ಡ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರು. ಮುಜಾಹಿದ್ ವಿರುದ್ಧ ಮನ್ಸೂರ್ ಖಾನ್ಗೆ ನೆರವು ಆರೋಪವಿದೆ. ಮನ್ಸೂರ್ ದೇಶ ಬಿಡುವಾಗ ಏರ್ಪೋರ್ಟ್ವರೆಗೆ ಮುಜಾಹಿದ್ ಪ್ರಯಾಣ ಮಾಡಿದ್ದರು. ಎಸ್ ಐಟಿ ಮುಜಾಹಿದ್ ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಇದನ್ನೂ ಓದಿ:
ಇ.ಡಿ. ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ; ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್
ಶಾಸಕ ಜಮೀರ್ ಮನೆ ಮೇಲೆ ಇಡಿ ದಾಳಿ ಖಂಡನೀಯ: ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
(MLA Zameer Ahmed travelled to Ajmer Dargah after ED Raid)