ಶಾಸಕ ಜಮೀರ್ ಮನೆ ಮೇಲೆ ಇಡಿ ದಾಳಿ ಖಂಡನೀಯ: ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

DK Shivkumar press meet: ಇಡಿ ದಾಳಿಯಿಂದ ಜಮೀರ್​ಗೆ ಕಿರುಕುಳವಾಗುತ್ತಿದೆ. ಈ ಹಿಂದೆ ನೀಡಿದ್ದ ಹೇಳಿಕೆ ಆಧರಿಸಿ ದಾಳಿ ಸರಿಯಾದದ್ದಲ್ಲ. ಶ್ರೀನಿವಾಸಗೌಡರ ಸದನದಲ್ಲಿಯೇ ಹೇಳಿಕೆಯನ್ನ ನೀಡಿದ್ದರು.

ಶಾಸಕ ಜಮೀರ್ ಮನೆ ಮೇಲೆ ಇಡಿ ದಾಳಿ ಖಂಡನೀಯ: ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
ಡಿ.ಕೆ.ಶಿವಕುಮಾರ್
Follow us
TV9 Web
| Updated By: sandhya thejappa

Updated on:Aug 05, 2021 | 1:21 PM

ದೆಹಲಿ: ಕಾನೂನು ಹೋರಾಟ ಮಾಡಲು ಜಮೀರ್ ಸಮರ್ಥರಿದ್ದಾರೆ. ಇಡಿ ವಿಚಾರಣೆಗೆ ಸಹಕಾರ ನೀಡಿದ್ದಾಗಿ ಜಮೀರ್ ಹೇಳಿದ್ದಾರೆ. ಈ ಸಮಯದಲ್ಲಿ ಇಡಿ ದಾಳಿ ಅಗತ್ಯವಿಲ್ಲ. ಇಡಿ ದಾಳಿಯಿಂದ ಜಮೀರ್​ಗೆ ಕಿರುಕುಳವಾಗುತ್ತಿದೆ. ಈ ಹಿಂದೆ ನೀಡಿದ್ದ ಹೇಳಿಕೆ ಆಧರಿಸಿ ದಾಳಿ ಸರಿಯಾದದ್ದಲ್ಲ. ಶ್ರೀನಿವಾಸಗೌಡರ ಸದನದಲ್ಲಿಯೇ ಹೇಳಿಕೆಯನ್ನ ನೀಡಿದ್ದರು. 30 ಕೋಟಿ ಆಫರ್ ಕೊಟ್ಟು 5 ಕೋಟಿ ಮನೆಯಲ್ಲಿಟ್ಟಿದ್ದರು. ತಮ್ಮ ಮನೆಯಲ್ಲಿ 5 ಕೋಟಿ ರೂ. ಇಟ್ಟಿದ್ದರೆಂದು ಹೇಳಿದ್ದರು. ಆಗ ಐಟಿ, ಇಡಿ ಎಲ್ಲಿ ಹೋಗಿತ್ತು ಎಂದು ದೆಹಲಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಬಾರದು. ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು ನ್ಯಾಯ ಮಾಡಬಾರದು. ಬಿಜೆಪಿಯವರು ಬಹಳ ಪಾವಿತ್ರ್ಯವಾಗಿ ಇದ್ದಾರಾ. ಐಟಿ, ಇಡಿ ದಾಳಿಗಳಲ್ಲಿ ಬಹಳ ತಾರತಮ್ಯವಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ಈ ಹಿಂದೆಯೇ ಅಧಿಕಾರಿಗಳ ವಿಚಾರಣೆಗೆ ಸಹಕಾರ ಕೊಟ್ಟಿದ್ದಾರೆ. ವ್ಯವಹಾರದ ಬಗ್ಗೆ ಎಲ್ಲ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ. ಇದೆಲ್ಲಾ ಮುಗಿದುಹೋಗಿ ಸುಮಾರು ದಿನ ಕಳೆಯಿತು. ಆದರೆ ಈಗ ಏಕೆ ಇಡಿ ದಾಳಿ ಮಾಡುತ್ತಿದೆ ಎಂದು ಡಿಕೆಶಿ ಮಾಧ್ಯಮದ ಮುಂದೆ ಪ್ರಶ್ನೆ ಮಾಡಿದ್ದಾರೆ.

ರೋಷನ್ ಬೇಗ್ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗಲ್ಲ. ಒಂದು ಸಮುದಾಯ ಕೇಂದ್ರೀಕರಿಸಿ ದಾಳಿ ಮಾಡಲಾಗುತ್ತಿದೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ್, ಆಪರೇಷನ್ ಕಮಲ ಮಾಡುವಾಗ ಇಡಿ, ಐಟಿ ಎಲ್ಲಿತ್ತು? ಶ್ರೀನಿವಾಸಗೌಡರು ಆರೋಪ ಮಾಡಿದ್ದರು ಅದರ ಬಗ್ಗೆ ತನಿಖೆ ಆಗಿಲ್ಲ. ಕಾಂಗ್ರೆಸ್ ನವರಿಗೆಗೊಂದು, ಬಿಜೆಪಿಯವರಿಗೊಂದು ಯಾಕೆ? ಬಿಜೆಪಿಯವರು ಎಲ್ಲರೂ ಸರಿಯಿದ್ದಾರ? ಬಹಳ ತಾರತಮ್ಯ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾನೂನು ಪ್ರಕಾರ ಏನು ಬೇಕಾದ್ರೂ ಆಗಲಿ. ಆಸ್ತಿ ಮಾರಿದ್ದಾರೆ ಹಣ ಪಡೆದಿದ್ದಾರೆ. ಎಷ್ಟು ದಿನಗಳು ಆಗಿವೆ, ಇವತ್ತು ಬೇಕಾಗಿತ್ತಾ? ಎರಡು ವರ್ಷ ಆದ ಮೇಲೆ ಮತ್ತೆ ದಾಳಿ ಏಕೆ? ಇಷ್ಟು ದಿನ ಏನು ಇಡಿಯವರು ಮಾಡುತ್ತಿದ್ದರು. ಒಂದು ವರ್ಗವನ್ನು ಟಾರ್ಗೆಟ್ ಮಾಡ್ತಿದ್ದಾರೆ. ರಮೇಶ್ ಜಾರಕಿಹೊಳಿ ಒಬ್ಬರನ್ನು ಮಂತ್ರಿ ಮಾಡಬೇಕೆಂದಿದ್ರು. ಆಸ್ತಿ ಮಾರಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆಂದು ಹೇಳಿದ್ದರು. ಇದು ಭ್ರಷ್ಟಾಚಾರ ಪ್ರಕರಣ ಅಲ್ಲವೇ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಮೇಕೆದಾಟು ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದವರು. ಅವರಿಗೆ ಯೋಜನೆಯ ಬಗ್ಗೆ ಎಲ್ಲ ಮಾಹಿತಿ ಇದೆ. ಆದಷ್ಟು ಬೇಗ ಯೋಜನೆಯನ್ನು ಆರಂಭಿಸಬೇಕು. ಯೋಜನೆಗೆ ನಾವು ಎಲ್ಲ ಸಹಕಾರ ಕೊಡುತ್ತೇವೆ. ನಾವು ಯಾರ ನೀರನ್ನು ತಡೆಯುತ್ತಿಲ್ಲ. ಮೇಕೆದಾಟು ಯೋಜನೆಯಿಂದ ನಷ್ಟವಾಗುವುದಿಲ್ಲ. ತಮಿಳುನಾಡಿಗೆ ಯಾವುದೇ ನಷ್ಟವಾಗುವುದಿಲ್ಲ. ಈ ಯೋಜನೆಯಿಂದ ಅವರಿಗೇ ಹೆಚ್ಚು ಲಾಭವಾಗುತ್ತದೆ. ನೀರು ಇದ್ದರೆ ಯಾವಾಗ ಬೇಕಿದ್ರೂ ಬಿಡಬಹುದು ಅಂತ ಹೇಳಿದರು.

ಇಡಿ ದಾಳಿ ರಾಜಕೀಯ ಪ್ರೇರಿತ: ವಿಪಕ್ಷ ನಾಯಕ ಸಿದ್ದರಾಮಯ್ಯ ಜಮೀರ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ. ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಐಟಿ, ಇಡಿ ದಾಳಿಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ,

ಇದನ್ನೂ ಓದಿ

ED Raids: ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ನಡೆದಿರುವುದು ಐಟಿ ದಾಳಿ ಅಲ್ಲ; ಅದು ಇಡಿ ದಾಳಿ

IT Raid: ಶಾಸಕ ಜಮೀರ್ ಅಹಮ್ಮದ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ

(DK Shivakumar said in delhi that there was no need for an ED attack on Zameer house at this time)

Published On - 12:36 pm, Thu, 5 August 21