AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಅನಾರೋಗ್ಯ; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ

ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್‌ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಬಹಳ ಆಯಾಸಗೊಂಡಿದ್ದ ಸುರೇಶ್ ಕುಮಾರ್ ಇಂದು (ಸೆ.03) ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಅನಾರೋಗ್ಯ; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ
ಎಸ್​ ಸುರೇಶ್ ಕುಮಾರ್
Vinayak Hanamant Gurav
| Edited By: |

Updated on: Sep 03, 2024 | 9:50 PM

Share

ಬೆಂಗಳೂರು, (ಸೆಪ್ಟೆಂಬರ್ 03): ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್‌ ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು (ಸೆಪ್ಟೆಂಬರ್ 03) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಬಹಳ ಆಯಾಸಗೊಂಡಿದ್ದ ಸುರೇಶ್ ಕುಮಾರ್ ಅವರು ಅಪರೂಪದ ಜ್ವರಕ್ಕೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಸುರೇಶ್ ಕುಮಾರ್ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರು ಪಾದಯಾತ್ರೆ ಬಳಿಕ, ತಿರುಪತಿ ಪ್ರವಾಸ ಮಾಡಿದ್ದ ಸುರೇಶ್ ಕುಮಾರ್​ಗೆ ಕಳೆದ ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದೆ. ಅಪರೂಪದ ಮ್ಯೂಟೆಂಟ್ ಚಿಕನ್ ಗುನ್ಯಾ ಎಂದು ಹೇಳಲಾಗುತ್ತಿದೆ. ಅಲ್ಲದೇ ಬ್ರೈನ್ ಮತ್ತು ಸ್ಪೈನಲ್ ಕಾರ್ಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಇದರಿಂದ ಸುರೇಶ್ ಕುಮಾರ್ ಮಾತನಾಡಲಾಗದೆ ತೀವ್ರ ಸುಸ್ತಾಗಿದ್ದಾರೆ.

ಅಪರೂಪದ ಮ್ಯೂಟೆಂಟ್ ಚಿಕನ್ ಗುನ್ಯಾದಿಂದ ಬಳಲುತ್ತಿರುವ ಸುರೇಶ್ ಕುಮಾರ್​​ಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ನಾಲ್ಕುವರೆ ಲಕ್ಷ ರೂಪಾಯಿಯ ನಾಲ್ಕು ಇಂಜೆಕ್ಷನ್ ನೀಡಲಾಗಿದೆ. ಇನ್ನೂ ಏಳು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಸುರೇಶ್ ಕುಮಾರ್ ಇತ್ತಿಚ್ಚಿಗೆ ವೀಕೆಂಡ್​ನಲ್ಲಿ ಸೈಕಲಿಂಗ್ ಹುಚ್ಚು ಬೆಳೆಸಿಕೊಂಡಿದ್ದರು. ಶನಿವಾರ ಮತ್ತು ಭಾನುವಾರ ತಂಡವನ್ನು ಕಟ್ಟಿಕೊಂಡು ಸೈಕಲ್​ನಲ್ಲೇ ಬೆಂಗಳೂರಿನಿಂದ ಆಚೆ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನಿಂದ ಮೈಸೂರಿಗೆ ನಡೆದ ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆಯಲ್ಲೂ ಸುರೇಶ್ ಕುಮಾರ್ ಅವರು ಒಂದು ದಿನ ಭಾಗಿಯಾಗಿದ್ದರು. ಇದಾದ ಬಳಿಕ ಕಳೆದ ತಿಂಗಳಿಂದ ಸುರೇಶ್ ಕುಮಾರ್ ಬಹಳ ಆಯಾಸಗೊಂಡಿದ್ದರು ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ