
ಬೆಂಗಳೂರು, (ಏಪ್ರಿಲ್ 04): ರಾಮನವಮಿ (Ram Navami 2025) ಹಿನ್ನೆಲೆಯಲ್ಲಿ ಏಪ್ರಿಲ್ 06ರಂದು ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (bruhat bengaluru mahanagara palike) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಇದೇ ಭಾನುವಾರ ರಾಮನವಮಿ ಆಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ (animal slaughter and meat sale) ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಎಂಪಿಯ ಪಶುಪಾಲನಾ ವಿಭಾಗ ಇಂದು (ಏಪ್ರಿಲ್ 04) ಬಿಬಿಎಂಪಿಯ ಪಶುಪಾಲನಾ ವಿಭಾಗ ಆದೇಶ ಹೊರಡಿಸಿದೆ. ಹೀಗಾಗಿ ಭಾನುವಾರದ ಬಾಡೂಟಕ್ಕೆ ಬ್ರೇಕ್ ಬೀಳುವುದು ಗ್ಯಾರಂಟಿ-1001739.
ಈ ಬಗ್ಗೆ ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಿದ್ದು. ” ಇದೇ ಏಪ್ರಿಲ್ 06) ರಾಮನವಮಿ ಹಬ್ಬದಂದು ಕುರಿ, ಕೋಳಿ, ಮೀನು, ಮಾಂಸ ಮಾರಾಟ ಹಾಗೂ ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಭಾನುವಾರ ಮಾಂಸಾಹಾರ ಪ್ರಿಯರಿಗೆ ಹಬ್ಬದಂತೆ. ಹೀಗಾಗಿ ಭಾನುವಾರದ ಬಾಡೂಟ ಎಂದೇ ಫೇಮಸ್ ಆಗಿದ್ದು, ಭಾನುವಾರದ ಬಂತೆಂದರೆ ಸಾಕು ಸಂಡೇ ಸ್ಪೆಷಲ್ ಏನು ಅಂತೆಲ್ಲಾ ವಿಚಾರಿಸುತ್ತಾರೆ. ಇನ್ನು ಸರ್ಕಾರಿ ಹಾಗು ಖಾಸಗಿ ಉದ್ಯೋಗಿಗಳಿಗೂ ಭಾನುವಾರ ರಜೆ ಇರುವುದರಿಂದ ಗೆಳೆಯರು. ಸಂಬಂಧಿಕರು ಭಾನುವಾರ ಒಂದೆಡೆ ಸೇರಿ ನಾನ್ ವೆಜ್ ಪ್ರಿಯರಾಗಿದ್ದರೆ ಭರ್ಜರಿ ಭಾನುವಾರದ ಬಾಡೂಟ ಸವಿದು ಎಂಜಾಯ್ ಮಾಡುತ್ತಾರೆ. ಆದ್ರೆ, ಏಪ್ರಿಲ್ 6ರಂದು ಮಾಂಸ ಪ್ರಿಯಕರಿಗೆ ಡ್ರೈ ಡೇ ಆಗಲಿದೆ.
ಭಗವಾನ್ ವಿಷ್ಣುವಿನ ಅವತಾರವಾದ ಶ್ರೀರಾಮನು ಜನಿಸಿದ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಶ್ರೀ ರಾಮಚಂದ್ರನ ಹುಟ್ಟುಹಬ್ಬ ಮಾತ್ರವಲ್ಲದೇ, ಸೀತಾ ಮಾತೆಯೊಂದಿಗಿನ ವಿವಾಹ ಮತ್ತು ಶ್ರೀ ರಾಮಪಟ್ಟಾಭಿಷೇಕದ ದಿನವಾಗಿಯೂ ಆಚರಿಸಲಾಗುತ್ತದೆ. ಈ ವಿಶೇಷ ದಿನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯಂದು ನಡೆಯುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ದಿನ ಶ್ರೀರಾಮನ ಭಕ್ತರು ಉಪವಾಸ ಕೈಗೊಂಡು ರಾಮಾಯಣವನ್ನು ಪಠಿಸುತ್ತಾರೆ, ಭಜನೆಗಳನ್ನು ಮಾಡುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಶುಕ್ಲಪಕ್ಷ ನವಮಿ ತಿಥಿ ಏಪ್ರಿಲ್ 5 ರ ಸಂಜೆ 7:26 ಗಂಟೆಗೆ ಪ್ರಾರಂಭವಾಗುತ್ತದೆ. ಈ ತಿಥಿ ಏಪ್ರಿಲ್ 6 ರಂದು ಸಂಜೆ 7:22 ಗಂಟೆಗೆ ಮುಕ್ತಾಯವಾಗುತ್ತದೆ. ಹಿಂದೂ ಧರ್ಮದಲ್ಲಿ ಉದಯತಿಥಿಯನ್ನು ಪ್ರಾಥಮಿಕವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಈ ವರ್ಷ 2025 ರಲ್ಲಿ ಶ್ರೀ ರಾಮ ನವಮಿ ಏಪ್ರಿಲ್ 6 ರಂದು ನಡೆಯಲಿದೆ.
Published On - 9:19 pm, Fri, 4 April 25