Rama Navami 2025: ರಾಮ ನವಮಿಯಂದು ಈ ವಸ್ತುಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು!
ರಾಮನವಮಿ, ಹಿಂದೂ ಧರ್ಮದ ಪ್ರಮುಖ ಹಬ್ಬ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಶ್ರೀರಾಮನ ಜನ್ಮದಿನವಾಗಿ ಆಚರಿಸಲಾಗುವ ಈ ದಿನ ಹಳದಿ ಬಟ್ಟೆ ಧರಿಸುವುದು, ಚಿನ್ನ ಅಥವಾ ಶಂಖ ಖರೀದಿಸುವುದು ಶುಭಕರ ಎಂದು ನಂಬಲಾಗಿದೆ. ಮನೆಯಲ್ಲಿ ಪೂಜೆ, ರಾಮನಾಮ ಜಪ, ಭಜನೆ ಮುಂತಾದವುಗಳನ್ನು ಮಾಡುವುದು ಕೂಡ ತುಂಬಾ ಒಳ್ಳೆಯದು.

ರಾಮ ನವಮಿ ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ. ಈ ದಿನ ಶ್ರೀ ರಾಮಚಂದ್ರನ ಹುಟ್ಟು ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದಂದು ಶ್ರೀ ರಾಮನ ಜೊತೆಗೆ ಹನುಮಂತನನ್ನೂ ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ಕಷ್ಟಗಳು ದೂರವಾಗಿ, ಜೀವನದಲ್ಲಿ ಸದಾ ಶಾಂತಿ, ಸಂತೋಷ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಪ್ರತೀ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಶ್ರೀ ರಾಮ ನವಮಿ ಏಪ್ರಿಲ್ 6 ರಂದು ಬಂದಿದೆ.
ಹಳದಿ ಬಟ್ಟೆ ಮತ್ತು ಚಿನ್ನ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀ ರಾಮನವಮಿಯ ಮೊದಲು ಹಳದಿ ಬಟ್ಟೆಗಳನ್ನು ಧರಿಸುವುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ಚಿನ್ನ ಖರೀದಿಸಿ ಮನೆಗೆ ತರುವುದು ಶುಭಕರವೆಂದು ನಂಬಲಾಗಿದೆ. ಈ ಪ್ರಕ್ರಿಯೆಯಿಂದ ಲಕ್ಷ್ಮೀ ದೇವಿ ಸಂತೋಷಪಡುತ್ತಾಳೆ, ಮತ್ತು ಭಕ್ತರ ಮನೆಯಲ್ಲಿ ಆರ್ಥಿಕ ವೈಭವ, ಸುಖ-ಸಂತೋಷಗಳು ಇರಲು ಆಶೀರ್ವಾದ ನೀಡುತ್ತಾಳೆ. ಹಳದಿ ಬಣ್ಣವು ಶಾಂತಿ, ಸಮೃದ್ಧಿ ಮತ್ತು ಧನವನ್ನು ಆಕರ್ಷಿಸುತ್ತದೆ ಎಂದು ಧಾರ್ಮಿಕವಾಗಿ ನಂಬಲಾಗುತ್ತದೆ.
ಶಂಖ:
ಶ್ರೀ ರಾಮನವಮಿಯಂದು ಶಂಖವನ್ನು ಖರೀದಿಸಿ ಮನೆಯಲ್ಲಿ ತರುವುದು ಕೂಡ ಶುಭಕರವೆಂದು ಪರಿಗಣಿಸಲಾಗುತ್ತದೆ. ಪೂಜಾಗೃಹದಲ್ಲಿ ಶಂಖವನ್ನು ಇರಿಸುವುದು ಪವಿತ್ರ ಹಾಗೂ ಶುಭಕರವಾದ ಕಾರ್ಯವೆಂದು ಭಾವಿಸಲಾಗುತ್ತದೆ. ಕೆಲವರು ದೇವತೆಗಳ ಪೂಜೆಯಲ್ಲಿ ಶಂಖವಿಲ್ಲದಿದ್ದರೆ ಆ ಪೂಜೆ ಅವುಪೂರ್ಣವೆಂದು ಪರಿಗಣಿಸುತ್ತಾರೆ. ಇದರಲ್ಲಿ ಹನುಮಂತನು ಪ್ರಮುಖವಾಗಿ ಬರುತ್ತಾನೆ. ಹಾಗಾಗಿ, ಶ್ರೀ ರಾಮನವಮಿಯ ಮೊದಲು ಮನೆಯಲ್ಲಿ ಶಂಖವನ್ನು ತರುವುದು ಶುಭದಾಯಕವಾಗಿದೆ.
ಇದನ್ನೂ ಓದಿ: ಮನೆಗೆ ಪದೇ ಪದೇ ಕಪ್ಪು ಇರುವೆ ಬರುತ್ತಿದ್ದರೆ ಏನರ್ಥ? ಶುಭವೋ, ಅಶುಭವೋ?
ಇದಲ್ಲದೇ ನೀವು ರಾಮನವಮಿಯನ್ನು ಮನೆಯಲ್ಲಿ ಆಚರಿಸಬಹುದು. ಶ್ರೀರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಶ್ರೀ ರಾಮನ ಜೊತೆಗೆ ಹನುಮಂತನ ವಿಗ್ರಹವನ್ನು ಇಟ್ಟು ಪೂಜಿಸಿ. ಪಾನಕ ಕೋಸಂಬರಿಗಳನ್ನು ನೈವೇದ್ಯ ಮಾಡಿ ಪೂಜೆಯ ಬಳಿಕ ಪ್ರಸಾದವಾಗಿ ಸೇವಿಸಿ. ರಾಮನಾಮ ಜಪ, ರಾಮನ ಭಜನೆಯ ಜೊತೆಗೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Thu, 3 April 25