Ram Navami 2025: ವಿವಾಹದಲ್ಲಿ ಅಡೆತಡೆ ಅಥವಾ ವಿಳಂಬವಾಗುತ್ತಿದೆಯೇ? ರಾಮನವಮಿಯಂದು ಈ ಪರಿಹಾರ ಮಾಡಿ
ರಾಮನವಮಿಯಂದು ವಿವಿಧ ಪರಿಹಾರಗಳನ್ನು ಮಾಡುವುದರಿಂದ ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಸೀತಾ ದೇವಿಗೆ ಅರಿಶಿನ, ಶ್ರೀಗಂಧ, ಕುಂಕುಮ ಅರ್ಪಿಸುವುದು, 11 ದೀಪಗಳನ್ನು ಬೆಳಗಿಸುವುದು, ಹನುಮಂತನ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣ ಇತ್ಯಾದಿಗಳನ್ನು ಮಾಡುವುದರಿಂದ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಮಕ್ಕಳಿಗೆ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಎಲ್ಲಾ ತಂದೆ, ತಾಯಂದಿರೂ ತಮ್ಮ ಮಕ್ಕಳಿಗೆ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡಬೇಕೆಂದು ಇಚ್ಛಿಸುತ್ತಾರೆ. ಕೆಲವರಿಗೆ ಮದುವೆಯಾಗಬೇಕೆಂದು ಹೊರಟಾಗಲೇ ಸಾಕಷ್ಟು ಅಡೆತಡೆಗಳು ಎದುರಾಗಿಬಿಡುತ್ತವೆ. ಎಷ್ಟೇ ಪ್ರಯತ್ನಿಸಿದರೂ ಮದುವೆ ಪ್ರಸ್ತಾವ ಪದೇ ಪದೇ ಚಿಕ್ಕ ಪುಟ್ಟ ಕಾರಣಕ್ಕೆ ಮುಂದೂಡಲಾಗುತ್ತದೆ. ನಿಮಗೆ ಅಥವಾ ನಿಮ್ಮ ಹತ್ತಿರದವರಿಗೆ ಈ ಅನುಭವ ಆಗಿದ್ದರೆ ಈ ರಾಮನವಮಿಯಂದು ಕೆಲ ಸರಳ ಮಾರ್ಗಗಳನ್ನು ಪಾಲಿಸಿ ಸಮಸ್ಯೆ ನಿವಾರಿಸಿಕೊಳ್ಳಲು ಪ್ರಯತ್ನಿಸಿ.
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನದಂದು ರಾಮನ ಜನ್ಮದಿನವನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿ ಏಪ್ರಿಲ್ 5 ರಂದು ಸಂಜೆ 7:26 ಕ್ಕೆ ಪ್ರಾರಂಭವಾಗುತ್ತದೆ. ಆ ತಿಧಿಯು ಮರುದಿನ, ಏಪ್ರಿಲ್ 6 ರಂದು ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ. ಶ್ರೀರಾಮ ನವಮಿಯನ್ನು ಏಪ್ರಿಲ್ 6 ರಂದು ಉದಯ ತಿಥಿಯ ಪ್ರಕಾರ ಆಚರಿಸಲಾಗುತ್ತದೆ.
ಶ್ರೀ ರಾಮ ನವಮಿಯಂದು ಮಾಡಬೇಕಾದ ಪರಿಹಾರಗಳು:
ಮದುವೆ ವಿಳಂಬ:
ಯಾರಾದರೂ ತಮ್ಮ ಮದುವೆಯಲ್ಲಿ ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಶ್ರೀ ರಾಮ ನವಮಿಯ ಸಂಜೆ ಸೀತಾ ದೇವಿಗೆ ಅರಿಶಿನ, ಶ್ರೀಗಂಧ ಮತ್ತು ಕುಂಕುಮವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮದುವೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ನೀವು ಬಯಸುವ ಜೀವನ ಸಂಗಾತಿಯನ್ನು ಸಹ ಪಡೆಯಬಹುದು.
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ:
ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿಗಾಗಿ, ರಾಮ ನವಮಿಯ ದಿನದಂದು ಶ್ರೀ ರಾಮನನ್ನು ಪೂಜಿಸಿ ಮತ್ತು ಮನೆಯ ಮುಖ್ಯ ದ್ವಾರದಲ್ಲಿ 11 ದೀಪಗಳನ್ನು ಬೆಳಗಿಸಿ.
ಇದನ್ನೂ ಓದಿ: ರಾಮ ನವಮಿಯಂದು ಈ ವಸ್ತುಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು!
ರೋಗಗಳಿಂದ ಮುಕ್ತಿ:
ರೋಗಗಳಿಂದ ಮುಕ್ತಿ ಪಡೆಯಲು ರಾಮ ನವಮಿಯಂದು ಹನುಮಂತನನ್ನು ಪೂಜಿಸಿ. ನಂತರ ಹನುಮಾನ್ ಚಾಲೀಸಾ ಪಠಿಸಿ. ಹೀಗೆ ಮಾಡುವುದರಿಂದ ದೀರ್ಘಕಾಲದ ಮತ್ತು ಗಂಭೀರ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.
ತಾಯ್ತನದ ಭಾಗ್ಯ:
ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಗಳು ಶ್ರೀ ರಾಮ ನವಮಿಯ ದಿನದಂದು ಕೆಂಪು ಬಟ್ಟೆಗಳನ್ನು ಧರಿಸಬೇಕು. ಕೆಂಪು ಬಟ್ಟೆಯಲ್ಲಿ ತೆಂಗಿನಕಾಯಿಯನ್ನು ಸುತ್ತಿ ಸೀತಾ ದೇವಿಯ ಪಾದಗಳಿಗೆ ಅರ್ಪಿಸಿ. ನಂತರ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ದಂಪತಿಗಳಿಗೆ ಶೀಘ್ರದಲ್ಲೇ ಮಕ್ಕಳಾಗುವ ಅವಕಾಶ ಸಿಗುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:48 am, Fri, 4 April 25