ರಾಜ್ಯ ಹಾಗೂ ದೇಶಾದ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ಆರಂಭ: ಟಿವಿ9ಗೆ ಜಾಮಿಯಾ ಮಸೀದಿ ಮುಖ್ಯಸ್ಥ ಮಾಹಿತಿ
ರಾಜ್ಯ ಹಾಗೂ ದೇಶಾದ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದೆ ಎಂದು ಟಿವಿ9ಗೆ ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನಾ ಮಕ್ಸೂದ್ ಇಮ್ರಾನ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ಶುಕ್ರವಾರದಿಂದ ರಂಜಾನ್ (Ramadan) ಉಪವಾಸ ಆರಂಭವಾಗಲಿದೆ ಎಂದು ಟಿವಿ9ಗೆ ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನಾ ಮಕ್ಸೂದ್ ಇಮ್ರಾನ್ ಮಾಹಿತಿ ನೀಡಿದ್ದಾರೆ. ರಂಜಾನ್ ಮಾಸದ ಚಂದ್ರದರ್ಶನ ಹಿನ್ನೆಲೆ ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್ನ ಪವಿತ್ರ ಮಾಸ ರಂಜಾನ್ ಹಿನ್ನೆಲೆ ನಾಳೆಯಿಂದ ಒಂದು ತಿಂಗಳ ಕಾಲ ಮುಸ್ಲಿಂ ಸಮುದಾಯವರು ಉಪವಾಸ ವ್ರತ ಆಚರಣೆ ಮಾಡಲಿದ್ದಾರೆ. ರಾಜ್ಯದ ಕರಾವಳಿ ಭಾಗದಲ್ಲಿ ಸೌದಿ ಸಂಪ್ರದಾಯ ಪಾಲಿಸಲಾಗುತ್ತದೆ ಹಾಗಾಗಿ ಗುರುವಾರದಿಂದ ಉಪವಾಸ ವೃತಾರಂಭಿಸಲಾಗುತ್ತದೆ.
ಚಂದ್ರನ ಚಲನೆಯ ಆಧಾರದ ಮೇಲೆ ಇಸ್ಲಾಮಿಕ್ ಕ್ಯಾಲೆಂಡರನ್ನು ಪರಿಗಣಿಸಲಾಗುತ್ತೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ ಸುಮಾರು 10 ದಿನಗಳ ಮುಂಚಿತವಾಗಿ ಪವಿತ್ರ ರಂಜಾನ್ ತಿಂಗಳು ಬರುತ್ತದೆ. ಪ್ರತಿ ವರ್ಷ ರಂಜಾನ್ ಹಬ್ಬದ ದಿನಾಂಕ, ತಿಂಗಳು ಬದಲಾಗುತ್ತಿರುತ್ತದೆ. ಈ ವರ್ಷ, ರಂಜಾನ್ ಮಾರ್ಚ್ 22 ರ ಬುಧವಾರ ಆರಂಭವಾಗುತ್ತೆ.
ಇದನ್ನೂ ಓದಿ: Ramadan Timetable 2023: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹಾರ್, ಇಫ್ತಿಯಾರ್ ವೇಳಾಪಟ್ಟಿ
ಚಂದ್ರನನ್ನು ನೋಡಿ ಉಪವಾಸದ ದಿನವನ್ನು ಪರಿಗಣಿಸಲಾಗುತ್ತೆ. ಇನ್ನು ಮಾರ್ಚ್ 22ರಂದು ರಂಜಾನ್ ಉಪವಾಸ ಆರಂಭವಾಗಿ ಏಪ್ರಿಲ್ 22ಕ್ಕೆ ಕೊನೆಯಾಗುತ್ತೆ. ಇದಾದ ನಂತರ ಹಬ್ಬವನ್ನು ಆಚರಿಸಲಾಗುತ್ತೆ. ಚಂದ್ರನ ಚಲನೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕೊಂಚ ವಿಭಿನ್ನವಾಗಿರುತ್ತದೆ. ಹಾಗಾಗಿ ಸಹಾರ್ ಮತ್ತು ಇಫ್ತಿಯಾರ್ ಸಮಯ ಒಂದು ಕಡೆ ಒಂದು ರೀತಿ ಇರುತ್ತದೆ.
ಇದನ್ನೂ ಓದಿ: Ramadan Fasting: ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಹಿಂದಿದೆ ಅನೇಕ ಆರೋಗ್ಯ ಪ್ರಯೋಜನಗಳು
ವಿವಿಧ ನಗರಗಳ ಉಪವಾಸ ವೇಳಾಪಟ್ಟಿ
- ಮುಂಬೈ – ಬೆಳಗ್ಗೆ 05:33 ರಿಂದ ಸಂಜೆ 06:49 ರವರೆಗೆ
- ದೆಹಲಿ – ಬೆಳಗ್ಗೆ05:11 ರಿಂದ ಸಂಜೆ 06:32 ರವರೆಗೆ
- ಚೆನ್ನೈ- ಬೆಳಗ್ಗೆ 05:05 ರಿಂದ ಸಂಜೆ 06:20 ರವರೆಗೆ
- ಹೈದರಾಬಾದ್- ಬೆಳಿಗ್ಗೆ 05:11 ರಿಂದ ಸಂಜೆ 06:29 ರವರೆಗೆ
- ಬೆಂಗಳೂರು- ಬೆಳಗ್ಗೆ 05:16 ರಿಂದ ಸಂಜೆ 06:34 ರವರೆಗೆ
- ಅಹಮದಾಬಾದ್ – ಬೆಳಗ್ಗೆ 05:33 ರಿಂದ ಸಂಜೆ 06:50 ರವರೆಗೆ
- ಕೋಲ್ಕತ್ತಾ -ಬೆಳಗ್ಗೆ 04:30 ರಿಂದ ಸಂಜೆ 05:47 ರವರೆಗೆ
- ಪುಣೆ- ಬೆಳಗ್ಗೆ 05:29 ರಿಂದ ಸಂಜೆ 06:48 ರವರೆಗೆ
- ಜೈಪುರ -ಬೆಳಗ್ಗೆ 05:18 ರಿಂದ ಸಂಜೆ 06:39 ರವರೆಗೆ
- ಲಕ್ನೋ- ಬೆಳಗ್ಗೆ 04:57 ರಿಂದ ಸಂಜೆ 06:17 ರವರೆಗೆ
- ಕಾನ್ಪುರ -ಬೆಳಗ್ಗೆ 05:00 ರಿಂದ ಸಂಜೆ 06:20 ರವರೆಗೆ
- ಇಂದೋರ್ – ಬೆಳಗ್ಗೆ 05:20 ರಿಂದ ಸಂಜೆ 06:40 ರವರೆಗೆ
- ಪಾಟ್ನಾ- ಬೆಳಗ್ಗೆ 04:41 ರಿಂದ ಸಂಜೆ 06:00 ರವರೆಗೆ
- ಚಂಡೀಗಢ- ಬೆಳಗ್ಗೆ 05:11 ರಿಂದ ಸಂಜೆ 06:35 ರವರೆಗೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Wed, 22 March 23