ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಅಪರಾಧಿ ಕಿರಣ್ ಕುಮಾರ್​ಗೆ 20 ವರ್ಷ ಕಠಿಣ ಶಿಕ್ಷೆ

| Updated By: preethi shettigar

Updated on: Mar 29, 2022 | 9:18 PM

ಆರೋಪಿಗೆ ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.  ಶಿಕ್ಷೆ ವಿಧಿಸಿ ಜಡ್ಜ್​ ಇಶ್ರತ್ ಜಹಾನ್ ಆರಾ ತೀರ್ಪು ನೀಡಿದ್ದಾರೆ. 2014ರ ಸೆ.30ರಂದು ಬಾಲಕಿಯ ತಂದೆ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಅಪರಾಧಿ ಕಿರಣ್ ಕುಮಾರ್​ಗೆ 20 ವರ್ಷ ಕಠಿಣ ಶಿಕ್ಷೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ತೀರ್ಪು ಹೊರಬಂದಿದೆ. ಆ ಪ್ರಕಾರ ಆರೋಪಿಗೆ (Accused) ಪೋಕ್ಸೊ ಕಾಯ್ದೆಯಡಿ (pocso act) 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್(Court) ತೀರ್ಪು ನೀಡಿದೆ.  ಶಿಕ್ಷೆ ವಿಧಿಸಿ ಜಡ್ಜ್​ ಇಶ್ರತ್ ಜಹಾನ್ ಆರಾ ತೀರ್ಪು ನೀಡಿದ್ದಾರೆ. 2014ರ ಸೆ.30ರಂದು ಬಾಲಕಿಯ ತಂದೆ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು

ಮೂರು ವರ್ಷದ ಬಾಲಕಿಯ ಮೇಲೆ ಮೃಗೀಯವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿಯೊಬ್ಬನನ್ನು ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮಧ್ಯೆ, ಲೈಂಗಿಕ ದೌರ್ಜನ್ಯಕ್ಕೆ ನಲುಗಿ ರಕ್ತಸ್ರಾವದಿಂದ ಮಗು ಮೃತಪಟ್ಟಿದೆ. ಗುಪ್ತಾಂಗ ರಕ್ತ ಸ್ರಾವದಿಂದ ನರಳಿದ್ದ ಬಾಲಕಿ ನೋವು ತಾಳಲಾರದೇ ರಕ್ತಸ್ರಾವವಾಗಿ ಅತ್ತಿಬೆಲೆಯ ನೆರಳೂರಿನಲ್ಲಿ ಮೃತಪಟ್ಟಿದ್ದಳು.

ದುರಂತವೆಂದರೆ ಪೈಶಾಚಿಕ ಕೃತ್ಯವೆಸಗಿ, ಅಪಘಾತ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದ. ಜೊತೆಗೆ, 31 ವರ್ಷದ ಆರೋಪಿ ಫುಡ್ ಪಾಯ್ಸನ್ ಆಗಿತ್ತು, ಆ್ಯಕ್ಸಿಡೆಂಟ್​ ಎಂದೂ ಕಿರಾತಕ ಆರೋಪಿ ಬಡಬಡಿಸಿದ್ದ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಲಾಗಿತ್ತು. 3 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಪಾತಕಿ ಸ್ವಂತ ದೊಡ್ಡಪ್ಪ! ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ. ಪೋಸ್ಕೊ ಕಾಯ್ದೆಯಡಿ ಪ್ರಕರಣ‌ ದಾಖಲಾಗಿದೆ.

ಮಂಡ್ಯ: ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿ ಬಸ್ ಪಲ್ಟಿ; ಬೈಕ್ ಸವಾರ ಸ್ಥಳದಲ್ಲೆ‌ ಸಾವು

ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿ ಬಸ್ ಪಲ್ಟಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಣ್ಣನದೊಡ್ಡಿ ಬಳಿ ನಡೆದಿದೆ. ಬೈಕ್​ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ. ಸದ್ಯ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಬಸ್​ನಲ್ಲಿದ್ದ 30 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಮದ್ದೂರು ತಾಲೂಕಿನಲ್ಲಿ‌ ಇಂದು ಮತ್ತೆ ಎರಡನೇ‌ ಅವಗಡವಾಗಿದೆ. ಗಾಯಗೊಂಡವರು ಸೋಮನಹಳ್ಳಿ ಗಾರ್ಮೆಂಟ್ಸ್ ನೌಕರರು. ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಾಳುಗಳನ್ನ ಮದ್ದೂರಿನ ಭಾರತೀನಗರದ ಸರ್ಕಾರಿ ಆಸ್ಪತ್ರೆ ಹಾಗೂ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಂದು ಮುಂಜಾನೆ ಮನೆ ಮೇಲ್ಚಾವಣೆ ಕುಸಿದು ಓರ್ವ ಮಹಿಳೆ ಸಾವನಪ್ಪಿದ್ರು. 50 ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ರು. ಈ ಘಟನೆ ಮಾಸುವ ಮುನ್ನವೆ ಮತ್ತೊಂದು ಅಪಘಾತವಾಗಿದೆ.

ಎಸಿಬಿ ಬಲೆಗೆ ಬಿದ್ದಿದ್ದ ಬಿಡಬ್ಲೂಎಸ್​ಎಸ್​ಬಿ ಜೆಇಗೆ 5 ವರ್ಷ ಜೈಲು ಶಿಕ್ಷೆ

2017ರಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಬಿಡಬ್ಲ್ಯೂಎಸ್​ಎಸ್​ಬಿ ಆಧಿಕಾರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಡಿ.ಚೆನ್ನಕೇಶಪ್ಪ ಅವರಿಗೆ ಶಿಕ್ಷೆ ವಿಧಿಸಿ 23 ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ನಾಗರಬಾವಿಯಲ್ಲಿ ಹೆಚ್​ಬಿ ಕಮರ್ಷಿಯಲ್ ಬಿಲ್ಡಿಂಗ್​ಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಡಿ. ಚೆನ್ನೇಶಪ್ಪ ನಾಗರಬಾವಿ ಸಬ್ ಡಿವಿಷನ್ ಜೆಇ ಎಸಿಬಿ ಬಲೆಗೆ ಬಿದ್ದಿದ್ದ. ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಚನ್ನೇಶಪ್ಪ, 10 ಸಾವಿರ ಹಣ ಪಡೆಯ ಬೇಕಾದರೆ ರೆಡ್ ಹ್ಯಾಂಡ್ ಅಗಿ ಸಿಕ್ಕಿ ಬಿದ್ದಿದ್ದ.

ಇದನ್ನೂ ಓದಿ:
Shocking News: 5 ವರ್ಷಗಳಿಂದ ಅಪ್ಪ, ಅಣ್ಣ, ಅಜ್ಜನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!

ಹೆಬ್ಬಾಳ ಬಸ್ ಅಪಘಾತ: ನನ್ನಕ್ಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಅನ್ನುತ್ತಾಳೆ ಅಕ್ಷಯ ತಂಗಿ ಸಂಧ್ಯಾ

Published On - 8:36 pm, Tue, 29 March 22