ಬೆಂಗಳೂರು: 45 ನಿಮಿಷಗಳ ಪ್ರಯಾಣಕ್ಕೆ 3 ಗಂಟೆ ಕಾಯಿರಿ ಎಂದ ರ‍್ಯಾಪಿಡೋ

ಬೆಂಗಳೂರಲ್ಲಿ ವ್ಯಕ್ತಿಯೊಬ್ಬರು ರ‍್ಯಾಪಿಡೋ ಬುಕ್​ ಮಾಡಿದ್ದು, ನಿಮ್ಮನ್ನು ಪಿಕ್​​ಅಪ್​ ಮಾಡಲು 3.7 ನಿಮಿಷ ಕಾಯಿರಿ ಎಂದು ಹೇಳಿದೆ.

ಬೆಂಗಳೂರು: 45 ನಿಮಿಷಗಳ ಪ್ರಯಾಣಕ್ಕೆ 3 ಗಂಟೆ ಕಾಯಿರಿ ಎಂದ ರ‍್ಯಾಪಿಡೋ
ರ‍್ಯಾಪಿಡೋ ಬುಕ್​ ಮಾಡಿದ ಸಂದರ್ಭ
Follow us
ವಿವೇಕ ಬಿರಾದಾರ
|

Updated on: Aug 02, 2023 | 3:16 PM

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳಗಳನ್ನು ನಾವು ತಲುಪುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ. ಹೀಗಾಗಿ ವೇಗವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಾವು ಮುಟ್ಟಬೇಕಾದ ಸ್ಥಳವನ್ನು ತಲುಪಲು ರ‍್ಯಾಪಿಡೋ (Rapido), ಉಬರ್​​ನಂತಹ (Ubar) ಸಾರಿಗೆ ಸಂಸ್ಥೆಗಳನ್ನು ಜನರು ಅವಲಂಭಿಸಿದ್ದಾರೆ. ನಗರದಲ್ಲಿ ವ್ಯಕ್ತಿಯೊಬ್ಬರು ರ‍್ಯಾಪಿಡೋ ಬುಕ್​ ಮಾಡಿದ್ದು, ನಿಮ್ಮನ್ನು ಪಿಕ್​​ಅಪ್​ ಮಾಡಲು 3.7 ನಿಮಿಷ ಕಾಯಿರಿ ಎಂದು ಹೇಳಿದೆ. ಇದನ್ನು ಕಂಡ ಪ್ರಯಾಣಿಕ ಗಾಭರಿಯಾಗಿದ್ದಾರೆ. ಹೌದು 225 ನಿಮಿಷಗಳಲ್ಲಿ ಆಟೋ ಬರಲಿದೆ ಎಂದು ಆ್ಯಪ್​ ತೋರಿಸಿದೆ.

ಈ ಬಗ್ಗೆ deyalla ಎಂಬ ಟ್ವಿಟರ್​ ಬಳಕೆದಾರರು ಟ್ವೀಟ್​ ಮಾಡಿದ್ದು “ರ‍್ಯಾಪಿಡೋ ವೇಟಿಂಗ್​ ಟೈಮ್​ ಅಧಿಕವಾಯ್ತು. 45 ನಿಮಿಷಗಳ ಪ್ರಯಾಣಕ್ಕಾಗಿ 3.7 ಗಂಟೆಗಳಿಗಿಂತ ಹೆಚ್ಚು ಕಾಲ ಕಾಯಬೇಕು.” ಎಂದು ರ‍್ಯಾಪಿಡೋ ಕಂಪನಿಗೆ ಟ್ಯಾಗ್​ ಮಾಡಿ ಟ್ವಿಟ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರ‍್ಯಾಪಿಡೋ “ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ನೀವು ಬುಕ್​ ಮಾಡಿದ ಸಮಯದಲ್ಲಿ ಯಾವುದೇ ಆಟೋ ಲಭ್ಯವಿರಲಿಲ್ಲ. ಇದಕ್ಕೆ ನಾವು ವಿಷಾಧಿಸುತ್ತೇವೆ. ಈ ವಿಷಯದಲ್ಲಿ ನಿಮ್ಮ ತಾಳ್ಮೆಗೆ ಧ್ಯವಾದಗಳು” ಎಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.