ಬೆಂಗಳೂರು: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ಪೊಲೀಸರು (CID Police) ತನಿಖೆ ನಡೆಸುತ್ತಿದ್ದಾರೆ. ತನಿಖೆ ಹೆಚ್ಚಾದಂತೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಇದೀಗ ಪಿಎಸ್ಐ ಡೀಲ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಮಧ್ಯವರ್ತಿಗಳು ಹೊರ ಹಾಕಿದ್ದಾರೆ. ಅಕ್ರಮದ ಮಧ್ಯವರ್ತಿಗಳಾದ ಶರತ್, ಮಂಜುನಾಥ್ ಡೀಲಿಂಗ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಭ್ಯರ್ಥಿಗಳ ಜೊತೆ ಹೇಗೆಲ್ಲಾ ಡೀಲ್ ಮಾಡುತ್ತಿದ್ದರು? ಪರೀಕ್ಷೆಗೆ ಎಷ್ಟೆಲ್ಲ ರೇಟ್ ಫಿಕ್ಸ್ ಆಗುತ್ತಿತ್ತು? ಎಂದು ಬಾಯಿಬಿಟ್ಟಿದ್ದಾರೆ.
ಬ್ರೋಕರ್ಸ್ ಮೊದಲು ಪಿಎಸ್ಐ ಅಭ್ಯರ್ಥಿಗಳನ್ನು ಹುಡುಕುತ್ತಿದ್ದರು. ಅಭ್ಯರ್ಥಿಗಳಿಗೆ ಮೂರು ಬಗೆಯ ಆಯ್ಕೆಗಳನ್ನು ನೀಡುತ್ತಿದ್ದರು. ಒಂದೊಂದು ವಿಧಾನಕ್ಕೆ ಒಂದೊಂದು ರೇಟ್ ಫಿಕ್ಸ್ ಆಗುತ್ತಿತ್ತು. ಒಎಂಆರ್ ತಿದ್ದುಪಡಿಗೆ 80 ಲಕ್ಷ ರೂ. ಫಿಕ್ಟ್ ಮಾಡುತ್ತಿದ್ದರು. ಅಡ್ವಾನ್ಸ್ 40 ಲಕ್ಷ ರೂ. ಕೇಳುತ್ತಿದ್ದರು. ಬ್ಲೂಟೂತ್ನಲ್ಲಿ ಉತ್ತರಕ್ಕೆ 60 ಲಕ್ಷ ರೂಪಾಯಿ ನಿಗದಿ ಮಾಡಿ, 30 ಲಕ್ಷ ರೂ. ಅಡ್ವಾನ್ಸ್ ಪಡೆಯುತ್ತಿದ್ದರು. ಇನ್ವಿಜಿಲೇಟರ್ ಬುಕ್ಕಿಂಗ್ಗೆ 50 ಲಕ್ಷ ರೂ. ಫಿಕ್ಸ್ ಮಾಡಿ, 25 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆಯುತ್ತಿದ್ದರು ಎಂದು ಶರತ್, ಮಂಜುನಾಥ್ ತಿಳಿಸಿದ್ದಾರೆ.
ಇನ್ನು ಬ್ರೋಕರ್ಸ್ ಅಭ್ಯರ್ಥಿಗಳ ಎಲ್ಲಾ ವಿವರಗಳನ್ನ ಪಡೆಯುತ್ತಿದ್ದರು. ರೋಲ್ ನಂಬರ್, ರಿಜಿಸ್ಟರ್ ನಂಬರ್, ಸೆಂಟರ್ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ನಂತರ ಎಲ್ಲಾ ಮಾಹಿತಿಗಳನ್ನು ನೇಮಕಾತಿ ವಿಭಾಗದ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ಹಾಗಾದರೆ ನೇಮಕಾತಿ ವಿಭಾಗದ ಅಧಿಕಾರಿಗಳಿಂದಲೇ ಓಎಮ್ಆರ್ ತಿದ್ದುಪಡಿ ನಡೆಯುತ್ತಿತ್ತಾ? ಎಂಬ ಅನುಮಾನ ಹೆಚ್ಚಾಗಿದೆ.
ಕಿಂಗ್ಪಿನ್ ರುದ್ರಗೌಡನ ಸಹಚರ ಶಿವಪ್ಪ ಆಲಮೇಲ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಶಿವಪ್ಪ ಆಲಮೇಲ್ ತಲೆಮರೆಸಿಕೊಂಡಿದ್ದ. ಕೆಲ ತಿಂಗಳ ಹಿಂದೆ ಬಸವರಾಜ್ ಪಾಟೀಲ್ ಎಂಬಾತನ ಅಪಹರಣ ಮಾಡಿ ಶಿವಪ್ಪ, ರುದ್ರಗೌಡ ಬಸವರಾಜ್ನನ್ನು ಕಿಡ್ನಾಪ್ ಮಾಡಿ ಹಲ್ಲೆಗೈದಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಶಿವಪ್ಪನನ್ನು ವಶಕ್ಕೆ ಪಡೆದ್ದರು.
Published On - 11:12 am, Thu, 12 May 22