International Nurses Day 2022: ದಾದಿಯರ ಮಾನಸಿಕ ಆರೋಗ್ಯ ಕಾಪಾಡಲು ಇಲ್ಲಿವೆ ಸಲಹೆ

International Nurses Day 2022:ಕೋವಿಡ್​ (Covid 19)ನಿಂದ ಕತ್ತಲೆ ಆವರಿಸಿರುವ ಆಸ್ಪತ್ರೆಗಳಲ್ಲಿ ಜನರ ಮನಸ್ಥಿತಿಯನ್ನು ಹಗುರಗೊಳಿಸಲು ಹಾಡುತ್ತಾ ಮತ್ತು ನೃತ್ಯ ಮಾಡುವ ಮೂಲಕ ರೋಗಿಗಳನ್ನು ಬದುಕಲು ಪ್ರೇರೇಪಿಸುತ್ತಿದ್ದಾರೆ.

International Nurses Day 2022: ದಾದಿಯರ ಮಾನಸಿಕ ಆರೋಗ್ಯ ಕಾಪಾಡಲು ಇಲ್ಲಿವೆ ಸಲಹೆ
ಅಂತಾರಾಷ್ಟ್ರೀಯ ದಾದಿಯರ ದಿನ 2022
Follow us
TV9 Web
| Updated By: ನಯನಾ ರಾಜೀವ್

Updated on:May 25, 2022 | 3:39 PM

ಕೋವಿಡ್​ (Covid 19)ನಿಂದ ಕತ್ತಲೆ ಆವರಿಸಿರುವ ಆಸ್ಪತ್ರೆಗಳಲ್ಲಿ ಜನರ ಮನಸ್ಥಿತಿಯನ್ನು ಹಗುರಗೊಳಿಸಲು ಹಾಡುತ್ತಾ ಮತ್ತು ನೃತ್ಯ ಮಾಡುವ ಮೂಲಕ ರೋಗಿಗಳನ್ನು ಬದುಕಲು ಪ್ರೇರೇಪಿಸುತ್ತಿದ್ದಾರೆ. ತಾವು ಕೂಡ ಮಾನಸಿಕವಾಗಿ ಕುಗ್ಗಿದ್ದರೂ ರೋಗಿಗಳನ್ನು ತುಂಬಾ ಚೆಂದವಾಗಿ ನೋಡಿಕೊಂಡಿದ್ದಾರೆ. ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರೊಂದಿಗೆ, ನರ್ಸ್​ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ ಮತ್ತು ಮೂಲತಃ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ.

ಅವರು ದಣಿದಿರಬಹುದು ಮತ್ತು ಮಾನಸಿಕವಾಗಿ ಕುಗ್ಗಿರಬಹುದು, ಆದರೆ, ಅವರು ಅದನ್ನು ಬಿಟ್ಟುಕೊಟ್ಟಿಲ್ಲ. ಅವರು ಪ್ರತಿದಿನ ತಮ್ಮನ್ನು ತಾವು ಅಪಾಯಕ್ಕೆ ಒಡ್ಡಿಕೊಳ್ಳುತ್ತಿರುವುದನ್ನು ಲೆಕ್ಕಿಸದೇ ತಮ್ಮ ರಾಷ್ಟ್ರದ ಜನರಿಗೆ ಸೇವೆ ಸಲ್ಲಿಸಲು ಅವರು ಇನ್ನೂ ದೃಢವಾಗಿ ನಿಂತಿದ್ದಾರೆ.

ಈ ಮುಂಚೂಣಿಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ನಾವು ಸ್ವಲ್ಪ ಸಮಯ ನೀಡಬೇಕು. ಅವರ ಸಂಬಳ ಹೆಚ್ಚು ಮಾಡಿಲ್ಲವಾದರೂ ಕೆಲವು ಮಾಧ್ಯಮ ವರದಿಗಳು ಹೇಳುವಂತೆ, ಅಧಿಕ ಅವಧಿ ಕೆಲಸ ಮಾಡುತ್ತಿದ್ದಾರೆ, ತಮ್ಮನ್ನು ತಾವು ಅಪಾಯಕ್ಕೆ ದೂಡುತ್ತಾರೆ, ಹೀಗಾಗಿ ಅವರಿಗೆ ಉತ್ತಮ ಭತ್ಯೆ ನೀಡಬೇಕು. ಏಕೆಂದರೆ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ, ನಮಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ.

ಐಸಿಎನ್ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ವಿಶ್ವದ ಆರು ದಾದಿಯರಲ್ಲಿ ಒಬ್ಬರು ನಿವೃತ್ತಿ ಹೊಂದುವ ನಿರೀಕ್ಷೆಯಿದೆ, ಅಂದರೆ 4.7 ಮಿಲಿಯನ್ ಹೊಸ ನರ್ಸ್​ಗಳು ಶಿಕ್ಷಣ ಪಡೆಯಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಹದಗೆಟ್ಟ ಆರೋಗ್ಯ ವ್ಯವಸ್ಥೆ ಕೊರೊನಾ ಉಲ್ಬಣಿಸಿದ ಪರಿಣಾಮದಿಂದಾಗಿ, ಜಾಗತಿಕವಾಗಿ ನರ್ಸ್​ಗಳ ಕೊರತೆಯನ್ನು ನೀಗಿಸಲು ಮುಂದಿನ ಕೆಲವು ವರ್ಷಗಳಲ್ಲಿ 13 ದಶಲಕ್ಷ ದಾದಿಯರು ಬೇಕಾಗಬಹುದು ಎಂದು ಐಸಿಎನ್ ಅಂದಾಜಿಸಿದೆ.

ದಾದಿಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ನಿದ್ರೆ ಸರಿಯಾಗಿ ಮಾಡಿ: ದಾದಿಯರು ನೈಟ್​ಶಿಫ್ಟ್​ಗಳಲ್ಲಿ ಕೂಡ ಕೆಲಸ ಮಾಡುತ್ತಾರೆ, ಅವರ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲ ಘಟ್ಟವೇ ನಿದ್ರೆ. ಒಂದೊಮ್ಮೆ ನೈಟ್​ ಶಿಫ್ಟ್​ಗಳಾದರೂ ಬೆಳಗ್ಗೆ ನಿತ್ಯ ಒಂದೇ ಸಮಯಕ್ಕೆ ಮಲುಗುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ: ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ಹತ್ತಿರದವರ ಬಳಿ ಹಂಚಿಕೊಳ್ಳಿ, ಸಾಧ್ಯವಾದಷ್ಟು ಎಲ್ಲರ ಜತೆಗೆ ಬೆರೆಯಿರಿ, ಕೆಲಸದಿಂದ ಬಂದ ಬಳಿಕ ಕುಟುಂಬದವರ ಜತೆ ಸಮಯ ಕಳೆಯಿರಿ.

ನಿಮಗಾಗಿ ಸಮಯ ಮೀಸಲಿಡಿ: ನಿತ್ಯ ಅನ್ಯರಿಗಾಗಿ ಕೆಲಸ ಮಾಡುವ ನೀವು ನಿಮಗಾಗಿ ಒಂದಷ್ಟು ಸಮಯವನ್ನು ಮೀಸಲಿಡಿ, ಹಾಡುಗಳನ್ನು ಕೇಳಿ, ಅದನ್ನು ಹೊರತುಪಡಿಸಿ ನೀವು ಬೇರೆ ಯಾವುದಾದರೊಂದು ಕಲೆಯನ್ನು ಅಳವಡಿಸಿಕೊಂಡಿದ್ದರೆ ಅವುಗಳಿಗಾಗಿ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ.

ಸಹಾಯ ಕೇಳಿ: ನಿಮ್ಮ ಆರೋಗ್ಯ ಹದಗೆಡುತ್ತಿದೆ, ನಿಮ್ಮ ಕೈಯಲ್ಲಿ ಏನೂ ಇಲ್ಲ ಎನಿಸಿದಾಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇರೆಯವರ ಸಹಾಯವನ್ನು ಕೇಳುವುದು ಉತ್ತಮವೇ, ವೈದ್ಯರ ಸಹಾಯ ಪಡೆಯಿರಿ, ಎಂದಿಗೂ ನಿಮ್ಮ ಮೇಲೆ ನೀವು ಗೌರವವನ್ನಿಡಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Thu, 12 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್