Art Of Yoga: ದೇಹದಲ್ಲಿರುವ ಪ್ರಮುಖ 3 ಚಕ್ರಗಳ ಬಗ್ಗೆ ಅಚ್ಚರಿಯ ಸಂಗತಿಗಳು

Art Of Yoga: ದೇಹದಲ್ಲಿರುವ ಪ್ರಮುಖ 3 ಚಕ್ರಗಳ ಬಗ್ಗೆ ಅಚ್ಚರಿಯ ಸಂಗತಿಗಳು
ಕಮಲಾ ಭಾರಧ್ವಾಜ್​

ಯೋಗ ಮತ್ತು ಆರೋಗ್ಯ: ಮನುಷ್ಯನ ದೇಹದಲ್ಲಿ ಪವಿತ್ರವಾದ ಆತ್ಮ ಇರುತ್ತದೆ. ಆತ್ಮದ ಸುತ್ತಲೂ ವಿಶಿಷ್ಟ ಶಕ್ತಿಯ ಪ್ರಭೆಯು ಆವೃತ್ತವಾಗಿರುತ್ತದೆ ಎಂಬುದು ನಂಬಿಕೆ, ಹಾಗೆಯೇ ದೇಹದಲ್ಲಿ ಏಳು ಪ್ರಮುಖ ಚಕ್ರ(Chakra)ಗಳಿರುತ್ತವೆ.

TV9kannada Web Team

| Edited By: Nayana Rajeev

May 12, 2022 | 3:29 PM

ಮನುಷ್ಯನ ದೇಹದಲ್ಲಿ ಪವಿತ್ರವಾದ ಆತ್ಮ ಇರುತ್ತದೆ. ಆತ್ಮದ ಸುತ್ತಲೂ ವಿಶಿಷ್ಟ ಶಕ್ತಿಯ ಪ್ರಭೆಯು ಆವೃತ್ತವಾಗಿರುತ್ತದೆ ಎಂಬುದು ನಂಬಿಕೆ, ಹಾಗೆಯೇ ದೇಹದಲ್ಲಿ ಏಳು ಪ್ರಮುಖ ಚಕ್ರ(Chakra)ಗಳಿರುತ್ತವೆ. ಅವೆಲ್ಲವೂ ನಮ್ಮಲ್ಲಿರುವ ಧನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಯಾರು ಸಕಾರಾತ್ಮಕ ರೀತಿಯ ವರ್ತನೆಯನ್ನು ಹೊಂದಿರುತ್ತಾರೆ? ಅಧ್ಯಾತ್ಮ ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೋ ಅಂತವರಲ್ಲಿ ಏಳು ಚಕ್ರಗಳು ಹೆಚ್ಚು ಶಕ್ತಿಯುತವಾಗಿರುತ್ತವೆ ಎನ್ನಲಾಗುತ್ತದೆ.

ಚಕ್ರಗಳೆಂದರೆ ಶಕ್ತಿವಲಯಗಳು ಮತ್ತು ಇವು ನಮ್ಮ ದೇಹದ ಶಕ್ತಿ ಸಂಚಲನವನ್ನು ಸೂಚಿಸುತ್ತವೆ. ನಾವು ಪ್ರತಿಯೊಬ್ಬರ ದೇಹದಲ್ಲೂ 7 ಚಕ್ರಗಳಿದ್ದು, ಅವು ಎನರ್ಜಿ ಕೇಂದ್ರಗಳು. ನಮ್ಮ ಭಾವನೆಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತವೆ. ಈ 7 ಚಕ್ರಗಳು ಎಂಡೋಕ್ರೈನ್ ವ್ಯವಸ್ಥೆಗೆ ನೇರ ಸಂಪರ್ಕವನ್ನು ಹೊಂದಿದ್ದು, ಅದನ್ನು ನಿಯಂತ್ರಿಸುವ ಮೂಲಕ ವಯಸ್ಸಾಗುವಿಕೆಯನ್ನು ತಡೆಯುತ್ತವೆ. ಅವು ಭೌತಿಕ ದೇಹಕ್ಕೆ ಶಕ್ತಿಯ ಹರಿವನ್ನು ಪ್ರಭಾವಿಸುತ್ತವೆ.

ವಾತಾವರಣದಿಂದ ಪ್ರಾಥಮಿಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಇದನ್ನು ಶಕ್ತಿಯ ಅಗತ್ಯವಿರುವಲ್ಲಿಗೆ ಹರಿಸುತ್ತವೆ. ಯಾವಾಗಲಾದರೂ ಈ ಚಕ್ರಗಳು ಸರಿಯಾಗಿ ಸಿಂಕ್ ಆಗಲಿಲ್ಲವೆಂದಾಗ ನೆಗೆಟಿವಿಟಿ ಪುಟಿಯುತ್ತದೆ. ಅದು ನಮ್ಮ ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ದೇಹದಲ್ಲಿರುವ ಪ್ರಮುಖ ಮೂರು ಚಕ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.

……………………………. ಸ್ವಾಧಿಷ್ಠಾನ ಚಕ್ರ ತತ್ವ: ನೀರು/ ಬಣ್ಣ: ಕೇಸರಿ/ ಮಂತ್ರ: ವಂ ಸ್ಥಳ: ಜನನೇಂದ್ರಿಯ ಮತ್ತು ಸೇಕ್ರಲ್ ನರಗಳ ಸಮೂಹದ/ಪ್ಲೆಕ್ಸ್ ನಾ ನಡುವೆ, ಪ್ಯೂಬಿಕ್ ಮೂಳೆಯ ತಳದಲ್ಲಿ . ಸ್ವಾಧಿಷ್ಠಾನ ಚಕ್ರವು ವ್ಯಕ್ತಿಯ ಭಾವನಾತ್ಮಕ ಗುರುತಿನೊಡನೆ, ಸೃಜನಶೀಲತೆಯೊಡನೆ, ಬಯಕೆಯೊಡನೆ, ಸುಖದೊಡನೆ, ಗೀಳನ್ನು ಪೂರೈಸಿಕೊಳ್ಳುವುದರಲ್ಲಿ, ಜನನ ನೀಡುವ ಆಸಕ್ತಿ ಮತ್ತು ವೈಯಕ್ತಿಕ ಸಂಬಂಧದೊಡನೆ ಸಂಬಂಧಪಟ್ಟಿದೆ.

ಈ ಚಕ್ರವು ಜನನೇಂದ್ರಿಯಗಳನ್ನು, ಹೊಟ್ಟೆಯನ್ನು, ಕರುಳಿನ ಮೇಲ್ಭಾಗದ ಕಾರ್ಯ ನನ್ನು, ಖಲಿಜವನ್ನು, ಪಿತ್ತಜನಕಾಂಗವನ್ನು, ಮೂತ್ರಪಿಂಡವನ್ನು, ಪ್ಯಾಂಕ್ರಿಯಅನ್ನು, ಅಡ್ರಿನಲ್ ಗ್ರಂಥಿಯನ್ನು, ಸ್ಪ್ಲೀನ್ ಅನ್ನು, ಬೆನ್ನುಮೂಳೆಯ ಮಧ್ಯಭಾಗ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಆಳುತ್ತದೆ.

ಅಸಮತೋಲನವುಳ್ಳ ಸ್ವಾಧಿಷ್ಠಾನ ಚಕ್ರದಿಂದ ಕೆಳಬೆನ್ನ ನೋವು, ಸಿಯಾಟಿಕ, ಕುಗ್ಗಿದ ಕಾಮದ ಶಕ್ತಿ, ಕೆಳಹೊಟ್ಟೆಯ ನೋವು, ಮೂತ್ರದ ಸಮಸ್ಯೆ, ಕುಗ್ಗಿದ ಪಚನ ಕ್ರಿಯೆ, ವೈರಾಣುಗಳ ಮತ್ತು ಸೋಂಕಿನ ನಿರೋಧಕ ಶಕ್ತಿಯ ಕುಗ್ಗುವಿಕೆ, ದಣಿವು, ಹಾರ್ಮೋನುಗಳ ಅಸಮತೋಲನ ಮತ್ತು ಋತುಸ್ರಾವದ ಸಮಸ್ಯೆಗಳು ಉಂಟಾಗುತ್ತವೆ.

ವರ್ತನೆಯ ಮಾರ್ಪಾಟು: ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಕಿರಿಕಿರಿತನ, ನಾಚಿಕೆ, ಅಪರಾಧಿ ಭಾವ, ದೂಷಣೆ, ಕಾಮದ ಗೀಳು, ಸೃಜನಶೀಲತೆಯ ಅಭಾವ.

ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಕರುಣೆ ಮತ್ತು ಸ್ನೇಹಶೀಲತೆ, ಅಂತಂಸ್ಫರಣೆ, ಸತ್ವ, ಸ್ವಕೀಯ ಭಾವ ಮತ್ತು ಹಾಸ್ಯಪ್ರಜ್ಞೆ.

ಚಕ್ರದ ಸಮತೋಲನವನ್ನು ಉಂಟುಮಾಡುವ ಆಸನಗಳು: ಸೊಂಟವನ್ನು ತೆರೆಯುವ ಭಂಗಿಗಳಾದ ಅಗಲವಾಗಿ ನಿಂತು ಮುಂದಕ್ಕೆ ಬಗ್ಗುವ ಭಂಗಿ,  ಬದ್ಧಕೋನಾಸನ. ಪ್ರಸರಿತ ಪಾದಉತ್ಥಾನಾಸನ,ಉಪವಿಷ್ಠ ಕೋಣಾಸನ, ಬದ್ಧಕೋಣಾಸನ, ಸೂಕ್ತ ಬದ್ಧಕೋಣಾಸನ.

ಸ್ವಾಧಿಷ್ಠಾನ ಚಕ್ರವು ಹೊಕ್ಕುಳಿನಿಂದ 3 ಇಂಚು ಕೆಳಗಿರುತ್ತದೆ. ಇದರ ಬಣ್ಣ ಕೇಸರಿ. ಅಂಶ ನೀರು, ಮಂತ್ರ ವಮ್. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಜವಾಬ್ದಾರನಾಗುವ ಜೊತೆಗೆ ಲೈಂಗಿಕ ಭಾವನೆಗಳಿಗೂ ಕಾರಣಕರ್ತ.

ತೊಂದರೆಗಳು: ಸ್ವಾಧಿಷ್ಠಾನ ಚಕ್ರವು ಕ್ರಿಯಾಶೀಲವಾಗದಿದ್ದರೆ, ಋತುಸ್ರಾವದಲ್ಲಿ ಏರುಪೇರು, ಋತುಚಕ್ರದ ಸಮಸ್ಯೆಗಳು, ಗರ್ಭಾಶಯದ ತೊಂದರೆಗಳು, ಇರಿಟೆಬಲ್ ಬಾವೆಲ್ ಸಿಂಡ್ರೋಮ್, ಎಂಡೋಮೆಟ್ರಿಯಾಸಿಸ್, ವೃಷಣದ ರೋಗಗಳು, ಓವೇರಿಯನ್ ಸಿಸ್ಟ್‌ಗಳು, ಇರಿಟೆಬಲ್ ಬಾವೆಲ್ ಸಿಂಡ್ರೋಮ್, ಎಂಡೋಮೆಟ್ರಿಯಾಸಿಸ್, ವೃಷಣದ ರೋಗಗಳು, ಪ್ರೋಸ್ಟೇಟ್ ರೋಗಗಳು ಇತ್ಯಾದಿಗಳನ್ನು ಉಂಟುಮಾಡಬಹುದು.

ಸ್ವಾಧಿಷ್ಠಾನ ಚಕ್ರವನ್ನು ತ್ರಿಕಾಸ್ಥಿ ಚಕ್ರ ಎಂದೂ ಕರೆಯುವರು, ಇದು ಗರ್ಭಾಶಯ, ದೊಡ್ಡ ಕರುಳು, ಪ್ರೋಸ್ಟೇಟ್, ಅಂಡಾಶಯಗಳು ಮತ್ತು ವೃಷಣಗಳ ಪ್ರದೇಶದಲ್ಲಿರುತ್ತದೆ. ಇದು 7 ಚಕ್ರಗಳು ಆರನೇಯದು.

ಮಣಿಪುರ ಚಕ್ರಾಸನ

ತತ್ವ: ಬೆಂಕಿ/ ಬಣ್ಣ: ಹಳದಿ/ಮಂತ್ರ: ರಂ ಸ್ಥಳ: ಹೊಕ್ಕುಳ ಹಂತದಲ್ಲಿ, ಸೋಲಾರ್ ಪ್ಲೆಕ್ಸೆಸ್ ನ ಬಳಿ ಮಣಿಪುರ ಚಕ್ರವು ಸ್ವಕೀಯ ಭಾವದೊಡನೆ, ಭಾವನೆಗಳ ತಿಳಿವಳಿಕೆಯೊಡನೆ, ವ್ಯಕ್ತ್ತಿಯ ಸ್ವಪ್ರತಿಷ್ಠೆಯೊಡನೆ ಸಂಬಂಧಪಟ್ಟಿದೆ. ಹೊಟ್ಟೆಯ ಮೇಲ್ಭಾಗ, ಪಿತ್ತಕೋಶ, ಖಾಲಿಜ, ಬೆನ್ನೆಲುಬಿನ ಮಧ್ಯಭಾಗ, ಮೂತ್ರಪಿಂಡ, ಅಡ್ರೀನಲ್ ಗ್ರಂಥಿ, ಸಣ್ಣ ಕರುಳು ಮತ್ತು ಹೊಟ್ಟೆಯನ್ನು ಈ ಚಕ್ರ ಆಳುತ್ತದೆ.

ಮಣಿಪುರ ಚಕ್ರದ ಅಸಮತೋಲನದಿಂದ ಮಧುಮೇಹ, ಪ್ಯಾಂಕ್ರಿಯಾಟಿಟಿಸ್, ಅಡ್ರಿನಲ್ ಗ್ರಂಥಿಯ ಅಸಮತೋಲನ, ಸಂಧಿನೋವು, ಕರುಳಿನ ಖಾಯಿಲೆಗಳು, ಹೊಟ್ಟೆಯ ಹುಣ್ಣುಗಳು, ಕರುಳಿನ ಟ್ಯೂಮರ್ ಗಳು, ಹಸಿವಾಗದಿರುವುದು, ಬುಲೀಮಿಯ , ಕಡಿಮೆ ರಕ್ತದೊತ್ತಡ ಉಂಟಾಗುತ್ತವೆ.

ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಸ್ವಪ್ರತಿಷ್ಠೆಯ ಅಭಾವ, ಹೆದರಿಕೆ, ಖಿನ್ನತೆ, ತಿರಸ್ಕಾರದ ಭಯ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರು, ತೀರ್ಪು ನೀಡುತ್ತಿರುತ್ತಾರೆ, ಕೋಪ, ದ್ವೇಷ. ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಶಕ್ತಿಯುತರಾಗಿರುವುದು, ವಿಶ್ವಾಸ, ಬುದ್ಧಿವಂತಿಕೆ, ಉತ್ಪಾದನೆ ಹೆಚ್ಚು, ಏಕಾಗ್ರತೆ, ಒಳ್ಳೆಯ ಜೀರ್ಣಶಕ್ತಿ.

ಚಕ್ರದಲ್ಲಿ ಸಮತೋಲನ ತರುವ ಯೋಗಾಸನಗಳು: ತಾಪವನ್ನು ಹೆಚ್ಚಿಸುವಂತಹ ಆಸನಗಳಾದ ಸೂರ್ಯನಮಸ್ಕಾರ, ವೀರಭದ್ರಾಸನ, ಹಿಂದಕ್ಕೆ ಬಗ್ಗುವ ಆಸನಗಳಾದ ಧನುರಾಸನ, ಕುಳಿತು ತಿರುಚುವ ಆಸನಗಳಾದ ಅರ್ಧಮತ್ಸ್ಯೆಂದ್ರಿಯಾಸನ, ಹೊಟ್ಟೆಯ ಸ್ನಾಯುಗಳನ್ನು ಬಲಿಷ್ಠವಾಗಿಸುವ ನೌಕಾಸನ.

ಅನಾಹತ ಚಕ್ರಾಸನ:

ತತ್ವ: ವಾಯು/ ಬಣ್ಣ: ಹಸಿರು ಅಥವಾ ಗುಲಾಬಿ/ ಮಂತ್ರ: ಯಂ ಸ್ಥಳ: ಹೃದಯದ ಭಾಗದಲ್ಲಿ

ಅನಾಹುತ ಚಕ್ರವು ವ್ಯಕ್ತಿಯ ಸಾಮಾಜಿಕ ಗುರುತಿನ ಮೇಲೆ ಪ್ರಭಾವ ಬೀರುತ್ತದೆ, ವಿಶ್ವಾಸ, ಕ್ಷಮೆ, ನಿಯಮರಹಿತ ಪ್ರೇಮ, ಜ್ಞಾನ, ಕರುಣೆ, ಮತ್ತು ಆತ್ಮದ ಸಮಸ್ಯೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಚಕ್ರವು ಹೃದಯದ, ಎದೆಗೂಡಿನ, ರಕ್ತದ, ರಕ್ತಚಲನೆಯ, ಶ್ವಾಸಕೋಶದ, ಡಯಾಫ್ರಂನ ಥೈಮಸ್ ಗ್ರಂಥಿಯ, ಸ್ತನಗಳ, ಅನ್ನನಾಳದ, ಭುಜಗಳ, ಕೈಗಳು, ತೋಳುಗಳು ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ.

ಈ ಚಕ್ರದ ಅಸಮತೋಲನದಿಂದ ಎದೆಗೂಡಿನ ಭಾಗದ ಬೆನ್ನೆಲುಬಿನ ಸಮಸ್ಯೆಯನ್ನು, ಬೆನ್ನಿನ ಮೇಲ್ಭಾಗದ ಮತ್ತು ಭುಜಗಳ ಸಮಸ್ಯೆಗಳನ್ವು, ಆಸ್ತಮ ಖಾಯಿಲೆಯನ್ನು, ಹೃದಯದ ಸಮಸ್ಯೆಗಳನ್ನು, ಮೇಲು ಮೇಲಿನ ಉಸಿರಾಟವನ್ನು ಮತ್ತು ಶ್ವಾಸಕೋಶದ ಖಾಯಿಲೆಗಳನ್ನು ಉಂಟಾಗುತ್ತವೆ.

ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಪ್ರೀತಿಸಲು ಕಷ್ಟ, ನಿರಾಶಾಭಾವನೆ, ಕರುಣೆಯ, ವಿಶ್ವಾಸದ ಅಭಾವ, ಸಂಕಷ್ಟ ದಿಲ್ಲಿ ಸಿಲುಕಿರುವ ಭಾವನೆ ಮತ್ತು ಭಾವನೆಗಳ ಏರುಪೇರು. ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಪೂರ್ಣತೆಯ ಭಾವ, ಕರುಣೆ, ಸ್ನೇಹಶೀಲತೆ, ಆಶಾಭಾವನೆ, ಸ್ಫೂರ್ತಿ ದಾಯಕರಾದವರು ಮತ್ತು ತೆರೆದ ಮನಸ್ಸುಳ್ಳವರು.

ಈ ಚಕ್ರದ ಸಮತೋಲನವನ್ನು ಉಂಟು ಮಾಡುವ ಯೋಗಾಸನಗಳು: ಎದೆಯನ್ನು ತೆರೆಯುವ ಆಸನಗಳಾದ ಉಷ್ಠ್ರಾಸನ, ಭುಜಂಗಾಸನ, ಮತ್ಸ್ಯಾಸನ, ನಾಡಿಶೋಧನ ಪ್ರಾಣಾಯಾಮ ಅಥವಾ ಕಪಾಲಭಾತ್ತಿಯಂತಹ ಪ್ರಾಣಾಯಾಮ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಕೋಟಕ್​ ಸೆಕ್ಯುರಿಟಿ, ಧೀಕ್ಷಾ ಕಾಲೇಜು ಹಾಗೂ ಜೈನ್​ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗಕಲಾಸಾಧಕಿ ಪ್ರಶಸ್ತಿ, ಜ್ಯೋತಿಷ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಮೊಬೈಲ್ ನಂ.9663879672

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada