AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roshan Baig ED Raid: 24 ಗಂಟೆ ಬಳಿಕವೂ ರೋಷನ್ ಬೇಗ್ ಮನೆಯಲ್ಲಿ ಮುಂದುವರೆದ ಪರಿಶೀಲನೆ

ಜಮೀರ್ ಅಹಮ್ಮದ್ ಮನೆಗೆ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ, ಮತ್ತೊಂದು ಕಡೆ ಮಾಜಿ ಸಚಿವ ರೋಷನ್ ಬೇಗ್ ಕೋಟೆಗೂ ಇಡಿ ದಾಳಿ ನಡೆಸಿದೆ. ಪ್ಲ್ಯಾನ್ನಂತೆಯೇ ರೋಶನ್ ಬೇಗ್ಗೂ ಸರಿಯಾಗೇ ಶಾಕ್ ಕೊಟ್ಟಿದ್ರು. ಬೆಳಗ್ಗೆಯಿಂದ ತಡರಾತ್ರಿವರೆಗೂ ಗ್ರಿಲ್ ನಡೆಸಿ, ಮಹತ್ವದ ದಾಖಲೆಗಳನ್ನೂ ವಶಕ್ಕೆ ಪಡೆದಿದ್ದಾರೆ. ಇಂದು ಕೂಡ ಪರಿಶೀಲನೆ ಮುಂದುವರೆದಿದೆ.

Roshan Baig ED Raid: 24 ಗಂಟೆ ಬಳಿಕವೂ ರೋಷನ್ ಬೇಗ್ ಮನೆಯಲ್ಲಿ ಮುಂದುವರೆದ ಪರಿಶೀಲನೆ
ರೋಷನ್ ಬೇಗ್ ನಿವಾಸ
TV9 Web
| Updated By: ಆಯೇಷಾ ಬಾನು|

Updated on: Aug 06, 2021 | 8:03 AM

Share

ಬೆಂಗಳೂರು: ಇಡಿ ಅಧಿಕಾರಿಗಳು ಸುಖಾ ಸುಮ್ಮನೆ ದಾಳಿ ಮಾಡೋಲ್ಲ.. ಅದು ಕೂಡ ದೊಡ್ಡ ದೊಡ್ಡ ಕುಳಗಳ ಮನೆ ಬಾಗಿಲಿಗೆ ಸುಮ್ಮನೆ ಅಂತೂ ಹೋಗುವುದೇ ಇಲ್ಲ. ಪಕ್ಕಾ ಪ್ಲ್ಯಾನ್ ಮಾಡ್ತಾರೆ. ಎಷ್ಟು ಗಂಟೆಗೆ ಎಂಟ್ರಿ ಕೊಡ್ಬೇಕು. ಯಾವತ್ತು ದಾಳಿ ಮಾಡ್ಬೇಕು. ಯಾವ ಯಾವ ಪ್ಲೇಸ್ನಲ್ಲಿ ತಲಾಶ್ ನಡೆಸ್ಬೇಕು ಅಂತ್ಲೂ ಡಿಸೈಡ್ ಆಗ್ತಾರೆ.. ಹೀಗೆ ನಿನ್ನೆ(ಜುಲೈ 5) ಮುಂಜಾನೆ ಬೆಂಗಳೂರಿನ ಕೋಲ್ಸ್ ಪಾರ್ಕ್‌ನಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ಮಾಡಿರುವ ಇಡಿ ತಂಡ 24 ಗಂಟೆಯಾದರೂ ಪರಿಶೀಲನೆ ಮುಂದುವರೆಸಿದೆ. ರೋಷನ್ ಬೇಗ್ ಮನೆಯಲ್ಲಿ ನಿರಂತರವಾಗಿ ಪರಿಶೀಲನೆ ನಡೆಯುತ್ತಿದೆ.

ಬೆಳಗ್ಗೆ 6 ಗಂಟೆ.. 6 ಪ್ಲೇಸ್.. ರೋಷನ್ ಬೇಗ್ ಶೇಕ್ ಒಂದ್ಕಡೆ ಜಮೀರ್ ಅಹ್ಮದ್ ಕೋಟೆ ಮೇಲೆ ದಾಳಿ ಮಾಡಿ ಇಡಿ ಶಾಕ್ ನೀಡಿದ್ರೆ, ಮಾಜಿ ಸಚಿವ ರೋಷನ್ ಬೇಗ್ ಸಾಮ್ರಾಜ್ಯಕ್ಕೂ ಇಡಿ ಲಗ್ಗೆ ಇಟ್ಟಿತ್ತು. ನಿನ್ನೆ ಬೆಳಗ್ಗೆ 6 ಗಂಟೆಗೆ ರೋಷನ್ ಬೇಗ್ಗೆ ಸಂಬಂಧಿಸಿದ 6 ಕಡೆ ತಂಡೋಪ ತಂಡವಾಗಿ ದಾಳಿ ಮಾಡಿದ್ರು. ಶಿವಾಜಿನಗರ ನಿವಾಸ, ಫ್ರೇಜರ್ ಟೌನ್ನಲ್ಲಿರೋ ಮನೆಗಳಲ್ಲಿ ಜಾಲಾಡಿದ್ರು. ರೋಷನ್ ಬೇಗ್ ಎದುರಲ್ಲೇ ಎಲ್ಲಾ ಲಾಕರ್ಗಳನ್ನ ಓಪನ್ ಮಾಡಿಸಿ ಶಾಕ್ ಕೊಟ್ಟಿದ್ರು. ಮುಖ್ಯವಾಗಿ ಅಧಿಕಾರಿಗಳು ಕೇವಲ ದಾಳಿ ಮಾಡಿ ವಾಪಸ್ ಆಗಿಲ್ಲ.. ಬೆಳಗ್ಗೆ 6 ಗಂಟೆಯಿಂದ ತಡರಾತ್ರಿವರೆಗೂ ಎಡೆ ಬಿಡದೇ ಶೋಧ ನಡೆಸಿದ್ರು. ರಾತ್ರಿ ರೋಷನ್ ಬೇಗ್ ಮನೆಗೆ ಊಟ ತರಿಸಿಕೊಂಡು, ಊಟ ಮುಗಿಸಿ ತಲಾಶ್ ಮುಂದುವರಿಸಿದ್ರು.

ರೋಷನ್ ಬೇಗ್ ಆಪ್ತನಿಗೆ ಫುಲ್ ಗ್ರಿಲ್ ಒಂದ್ಕಡೆ ಫ್ರೇಜರ್ ಟೌನ್ನಲ್ಲಿರೋ ರೋಷನ್ ಬೇಗ್ ಮನೆಯಲ್ಲಿ ಶೋಧ ನಡೀತಿದ್ರೆ, ಮತ್ತೊಂದ್ಕಡೆ ಮಧ್ಯಾಹ್ನದ ಹೊತ್ತಿಗೆ ಅಧಿಕಾರಿಗಳ ಒಂದು ತಂಡ ಇನ್ನೊಂದು ಕಡೆ ಲಗ್ಗೆ ಇಟ್ಟಿದ್ರು. ಅಂದ್ರೆ, ಬೇಗ್ ಆಪ್ತ ಕಂ ಪಿಎ ಎಸ್ಸಾನ್ನನ್ನ ವಶಕ್ಕೆ ಪಡೆದು, ಕೋಲ್ಸ್ ಪಾರ್ಕ್ ಪಕ್ಕದಲ್ಲಿರೋ ರೋಷನ್ ಬೇಗ್ ಹಳೇ ನಿವಾಸಕ್ಕೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿದ್ರು. ನಂತ್ರ ಎಸ್ಸಾನ್ನನ್ನ ಮತ್ತೆ ಫ್ರೇಜರ್ ಟೌನ್ ಮನೆಗೆ ಕರೆತಂದ್ರು.

ಬೇಗ್ ಪುತ್ರಿ ಮನೆಯಲ್ಲಿದ್ದ ದಾಖಲೆಗಳು ಇಡಿ ವಶಕ್ಕೆ ಇತ್ತ, ರೋಷನ್ ಬೇಗ್ ಪುತ್ರಿ ಶಯಿಷ್ಟಾ ಹಾಗೂ ಅಳಿಯ ಭೂಪಸಂದ್ರ ಬಳಿ‌ ಇರೋ ನಿವಾಸದಲ್ಲಿ ನೆಲೆಸಿದ್ರು. ಅಲ್ಲಿಗೂ ಎಂಟ್ರಿ ಕೊಟ್ಟ ಒಂದು ತಂಡ, ಅವರ ಮನೆಯಲ್ಲೂ ಸಂಜೆಯವರೆಗೂ ಶೋಧ ನಡೆಸಿದ್ರು. ಬಳಿಕ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು, ಒಂದು ಬ್ಯಾಗ್ನಲ್ಲಿ ತೆಗೆದುಕೊಂಡು ಹೋದ್ರು.

ಬ್ಯಾಂಕ್‌ಗಳ ಮ್ಯಾನೇಜರ್‌ಗಳಿಂದ ಇಡಿ ಮಾಹಿತಿ ಸಂಗ್ರಹ ರೋಷನ್ ಬೇಗ್ ಅವರ ಇಡೀ ಮನೆಯನ್ನ ಜಾಲಾಡಿದ ಅಧಿಕಾರಿಗಳು ಇಲ್ಲಿಗೆ ಸುಮ್ಮನೆ ಆಗಲಿಲ್ಲ. ರೋಷನ್ ಬೇಗ್ ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಪಡೆದ್ರು. ಬಳಿಕ ರೋಷನ್ ಬೇಗ್ ಖಾತೆ ಹೊಂದಿದ್ದ ಬ್ಯಾಂಕ್‌ಗಳಿಗೆ ಪಾಸ್ಬುಕ್ ಸಮೇತ ಭೇಟಿ ನೀಡಿ, ಮ್ಯಾನೇಜರ್‌ಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ರು.

ಇನ್ನು, ಕಳೆದ ನವೆಂಬರ್ನಲ್ಲಿ ಸಿಬಿಐ ಅಧಿಕಾರಿಗಳು ಕೂಡ ಐಎಂಎ ವಂಚನೆ ಪ್ರಕರಣ ಹಣದ ವರ್ಗಾವಣೆ ಬಗ್ಗೆ ತನಿಖೆ ನಡೆಸಿದ್ರು. ಈ ವೇಳೆ ರೋಷನ್ ಬೇಗ್ ಅರೆಸ್ಟ್ ಕೂಡ ಆಗಿದ್ರು. ಈಗ ಸಿಬಿಐ ಪ್ರಕರಣವನ್ನ ಇಡಿಗೆ ವರ್ಗಾಯಿಸಿದೆ ಎನ್ನಲಾಗಿದೆ. ಹೀಗಾಗಿ ಐಎಂಎ ಮುಖ್ಯಸ್ಥ ಮನ್ಸುರ್ ಅಲಿಖಾನ್ ರಿಂದ 400 ಕೋಟಿ ಹಣ ಪಡೆದಿರೋ ಆರೋಪದ ಮೇಲೆ ರೋಷನ್ ಬೇಗ್ ಅವರನ್ನ ಇಡಿ ಅಧಿಕಾರಿಗಳು ಗ್ರಿಲ್ ಮಾಡ್ತಿದ್ದಾರೆ. ಏನೇ ಇರಲಿ, ಇಡಿ ದಾಳಿಯನ್ನು ಗಮನಿಸಿದರೆ ಸದ್ಯಕ್ಕಂತೂ ಐಎಂಎ ಪ್ರಕರಣದಿಂದ ರೊಷನ್ ಬೇಗ್ ಹೊರ ಬರುವುದು ಅಸಾಧ್ಯವೇ ಎನಿಸುತ್ತಿದೆ.

ಇದನ್ನೂ ಓದಿ: ಇ.ಡಿ. ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ; ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್