ಸರ್ಕಾರಿ ಆಸ್ಪತ್ರೆಯ ವೈದ್ಯರ ಮಾಹಿತಿ ಪಡೆದು ಕಿರುಕುಳ ನೀಡುತ್ತಿದ್ದ ಆರ್ಟಿಐ ಕಾರ್ಯಕರ್ತನ ಬಂಧನ
ಆರ್ಟಿಐ ಕಾಯ್ದೆಯಡಿ ಜಯನಗರ ಸರ್ಕಾರಿ ಆಸ್ಪತ್ರೆಯ ವೈದ್ಯರ ಮತ್ತು ಅಧಿಕಾರಿಗಳ ಮಾಹಿತಿ ಪಡೆದು ಕಿರುಕುಳ ನೀಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದ ಆರ್ಟಿಐ ಕಾರ್ಯಕರ್ತನನ್ನು ತಿಲಕ್ನಗರ ಪೊಲೀಸ್ರು ಬಂಧಿಸಿದ್ದಾರೆ.
ಬೆಂಗಳೂರು: ಆರ್ಟಿಐ (RTI) ಕಾಯ್ದೆಯಡಿ ಜಯನಗರ ಸರ್ಕಾರಿ ಆಸ್ಪತ್ರೆಯ (Jaynagar Government Hospital) ವೈದ್ಯರ ಮತ್ತು ಅಧಿಕಾರಿಗಳ ಮಾಹಿತಿ ಪಡೆದು ಕಿರುಕುಳ ನೀಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದ ಆರ್ಟಿಐ ಕಾರ್ಯಕರ್ತನನ್ನು (RTI activist) ತಿಲಕ್ನಗರ ಪೊಲೀಸರು ಬಂಧಿಸಿದ್ದಾರೆ. ರಮಾನಂದ ಸಾಗರ್ ಬಂಧಿತ ಆರೋಪಿ. ರಮಾನಂದ ಸಾಗರ್ನ ಕಿರುಕುಳಕ್ಕೆ ಬೇಸತ್ತು ಆಸ್ಪತ್ರೆ ಸಿಬ್ಬಂದಿ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು
ಮೈಸೂರು: ಕ್ಯಾಂಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಮೈಸೂರು ಬಂಟ್ವಾಳ ಹೆದ್ದಾರಿಯ ಯಶೋಧರ ಪುರ ಗಾಮದ ಬಳಿ ನಡೆದಿದೆ. ಮಾದೇಶ್ ಗೌಡ (57) ಮೃತದುರ್ದೈವಿ. ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಡಿ.ಗ್ರೂಪ್ ನೌಕರರಾಗಿದ್ದ ಮಾದೇಶ ಕೊತ್ತೆಗಾಲ ಗ್ರಾಮದ ನಿವಾಸಿಯಾಗಿದ್ದನು. ಮಾದೇಶ ಕೊತ್ತೆಗಾಲದಿಂದ ಹುಣಸೂರು ಕಡೆಗೆ ತೆರಳುತ್ತಿದ್ದರು. ಪಿರಿಯಾಪಟ್ಟಣದ ಕಡೆಯಿಂದ ಹುಣಸೂರು ಕಡೆಗೆ ಬರುತ್ತಿದ್ದ ಕ್ಯಾಂಟರ್ ಗೂಡ್ಸ್ ವಾಹನ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋಟೆಪುರದಲ್ಲಿ ಬಾಡಿಗೆ ಮನೆಯಲ್ಲಿದ್ದ ದೆಹಲಿ ಮಹಿಳೆಯ ಕೊಲೆ; ಜತೆಗಿದ್ದ ವ್ಯಕ್ತಿ ನಾಪತ್ತೆ
ಬೆಂಗಳೂರಿನಲ್ಲಿ ಟಿಶ್ಯೂ ಪೇಪರ್ ಕಂಪನಿ ಗೋಡೌನ್ನಲ್ಲಿ ಅಗ್ನಿ ಅವಘಡ
ಬೆಂಗಳೂರು: ಟಿಶ್ಯೂ ಪೇಪರ್ ಕಂಪನಿಗೆ ಸೇರಿದ ಗೋಡೌನ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಗರದ ಚಿಕ್ಕಗೊಲ್ಲರಹಟ್ಟಿ ಬಳಿ ನಿನ್ನೆ(ಮಾರ್ಚ್ 17) ರಾತ್ರಿ 10 ಗಂಟೆ ಸುಮಾರಿಗೆ ಟಿಶ್ಯೂ ಪೇಪರ್ ತಯಾರಿಸುವ ದಾಮಿ ಕೇರ್ ಐಜಿನ್ ಪ್ರೈ.ಲಿಮಿಟೆಡ್ ಕಂಪನಿಗೆ ಸೇರಿದ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. 9 ಅಗ್ನಿಶಾಮಕ ದಳ ವಾಹನಗಳು ಬೆಂಕಿಯನ್ನು ನಂದಿಸಿವೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ