ಬೆಂಗಳೂರು, ಅ.01: ನೇಣುಬಿಗಿದ ಸ್ಥಿತಿಯಲ್ಲಿ ಆರ್ಟಿಐ ಕಾರ್ಯಕರ್ತ(RTI Worker) ನ ಶವ ಪತ್ತೆಯಾದ ಘಟನೆ ಬೆಂಗಳೂರು ನಗರ(Bengaluru City) ಜಿಲ್ಲೆಯ ಆನೇಕಲ್(Anekal) ತಾಲೂಕಿನ ಮಾದಪಟ್ಟಣದಲ್ಲಿ ನಡೆದಿದೆ. ಪ್ರದೀಪ್(38) ಮೃತ ವ್ಯಕ್ತಿ. ಕಾರು ಶೆಡ್ನಲ್ಲಿ ಅರೆನಗ್ನವಾಗಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಜಿಗಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ನಗರ: ಜಿಲ್ಲೆಯ ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾಮದಲ್ಲಿ ರಾತ್ರಿ ಮನೆಮುಂದೆ ನಿಲ್ಲಿಸಿದ್ದ ಬೈಕ್ಗಳು ಬೆಳಗ್ಗೆ ನೋಡುವಷ್ಟರಲ್ಲಿ ಕಳ್ಳರು ಕದ್ದುಕೊಂಡು ಹೋದ ಘಟನೆ ನಡೆದಿದೆ. ಹೌದು, ಕಳೆದೊಂದು ತಿಂಗಳಿನಿಂದ ಹತ್ತಾರು ಬೈಕ್ಗಳನ್ನು ಕದ್ದೊಯುತ್ತಿದ್ದು, ಪೊಲೀಸರು ಮಾತ್ರ ಈ ಕುರಿತು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಸ್ಥಳೀಯರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿನಿತ್ಯ ಮನೆ ಬಳಿ ಇರುವ ಬೈಕ್ಗಳನ್ನು ಕಳ್ಳರು ಎಸ್ಕೆಪ್ ಮಾಡುತ್ತಿದ್ದು, ಖದೀಮರ ಕೈಚಳಕ, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಕಮಿಷನರ್ ವಾರ್ನ್ ಮಾಡಿದರೂ ಬುದ್ಧಿ ಕಲಿಯದ ಕೆಲ ಕಿಡಿಗೇಡಿಗಳು: ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ರೋಡ್ ರೇಜ್ ಪ್ರಕರಣ
ಹೌದು, ಒಂದು ತಿಂಗಳಿನಿಂದ ಡಿಯೋ , ಪಲ್ಸರ್ ಬೈಕ್, ಎವಿ ಡ್ಯೂಟಿ, ಯಮಹಾ ಸೇರಿದಂತೆ ಹಲವು ಬೈಕ್ಗಳನ್ನು ಕಳವು ಮಾಡುತ್ತಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇನ್ನು ನಾಲ್ಕೈದು ಕಳ್ಳರು ಗ್ರಾಮಕ್ಕೆ ಲಗ್ಗೆ ಹಾಕಿ ಬೈಕ್ಗಳು ಕದಿಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಕಾರುಗಳಲ್ಲಿ ಬೈಕ್ಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಈ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೈಕ್ ಕಳ್ಳರನ್ನು ಹಿಡಿಯಲು ಪೊಲೀಸರು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ