ಆಗಸ್ಟ್ 21ರ ನಂತರ ನಡೆಯಬೇಕಿದ್ದ ಖಾಸಗಿ ಶಾಲೆಗಳ ಬಂದ್ ಪ್ರತಿಭಟನೆ ವಾಪಸ್; ಕಾರಣ?
ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ರುಪ್ಸಾ (RUPSA) ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಆಗಸ್ಟ್ 21 ರಂದು ಶಾಲೆಗಳನ್ನ ಬಂದ್ (bandh)ಪ್ರತಿಭಟನೆಯನ್ನ ವಾಪಸ್ ಪಡೆದಿದೆ. ಇಂದು(ಆ.13) ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಚಿವರ ಸಭೆ ಬಳಿಕ ಮಾತನಾಡಿದ ಲೇಪಾಕ್ಷಿ ಹಾಲನೂರು, ‘ಪ್ರತಿಭಟನೆಯನ್ನ ಕೈಬಿಡಲಾಗಿದೆ ಎಂದಿದ್ದಾರೆ.
ಬೆಂಗಳೂರು, ಆ.13: ಇದೇ ಆಗಸ್ಟ್ 21 ರಂದು ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ರುಪ್ಸಾ (RUPSA) ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಶಾಲೆಗಳನ್ನ ಬಂದ್ (bandh) ಮಾಡಿ ಪ್ರತಿಭಟನೆ ಮಾಡುವುದಾಗಿ ರುಪ್ಸಾ (ಖಾಸಗಿ ಶಾಲೆಗಳ ಒಕ್ಕೂಟ) ಕರ್ನಾಟಕ ಅಧ್ಯಕ್ಷ ಲೇಪಾಕ್ಷಿ ಹಾಲನೂರು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದೀಗ ಸಚಿವರ ಸಭೆ ಬಳಿಕ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ಸಚಿವರ ಸಭೆ ಬಳಿಕ ಪ್ರತಿಭಟನೆ ವಾಪಸ್
ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಇಂದು(ಆ.13) ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಚಿವರ ಸಭೆ ಬಳಿಕ ಆಗಸ್ಟ್ 21ರ ಖಾಸಗಿ ಶಾಲೆಗಳು ಬಂದ್ ಪ್ರತಿಭಟನೆಯನ್ನ ರೂಪ್ಸಾ ಸಂಘಟನೆ ಹಿಂದಕ್ಕೆ ಪಡೆದಿದೆ. ಸಚಿವ ಮಧು ಬಂಗಾರಪ್ಪ ನೀಡಿದ ಭರವಸೆ ಹಿನ್ನಲೆ ಶಾಲೆ ಬಂದ್ ಪ್ರತಿಭಟನೆಯನ್ನ ಕೈಬಿಡಲಾಗಿದೆ ಎಂದು ರೂಪ್ಸಾ ಕರ್ನಾಟಕ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಹೇಳಿದ್ದಾರೆ.
ಇದನ್ನೂ ಓದಿ:ಸರ್ಕಾರಕ್ಕೆ ರುಪ್ಸಾ ಡೆಡ್ ಲೈನ್: ಆಗಸ್ಟ್ 21ರ ನಂತರ ಖಾಸಗಿ ಶಾಲೆ ಬಂದ್ ಎಚ್ಚರಿಕೆ
ಇದೇ ಆ.05 ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಲೇಪಾಕ್ಷಿ ಹಾಲನೂರು, ‘ಕಳೆದ ನಾಲ್ಕು ವರ್ಷಗಳಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಶೈಕ್ಷಣಿಕ ಉದ್ದೇಶಕ್ಕೆ ಬಳಸುವ ನಿವೇಶನ ಅಥವಾ ಕಟ್ಟಡಗಳಿಗೆ ಕಾನೂನು ಬಾಹಿರವಾಗಿ ಟ್ಯಾಕ್ಸ್ ವಸೂಲಿ ಮಾಡುತ್ತಿದೆ. ಆರ್ಆರ್ ವಿಚಾರದಲ್ಲಿ ಅಧಿಕಾರಿಗಳ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಡೆಸುತ್ತಿರುವ ಸುಲಿಗೆ ಸೇರಿದ್ದಂತೆ ಅನೇಕ ವಿಷಯಗಳಿಗೆ ವಿರೋಧ ವ್ಯಕ್ತಪಡಿಸಲಾಗಿದೆ. ಹೀಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಗಸ್ಟ್ 21 ರಂದು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಇದೀಗ ಸಭೆ ಬಳಿಕ ಪ್ರತಿಭಟನೆಯನ್ನ ಕೈಬಿಟ್ಟಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:39 pm, Tue, 13 August 24