ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದವನ ಶಾಲೆಗೆ ಬಿತ್ತು ಬೀಗ, 140ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಆರೋಪಿ ಲ್ಯಾಂಬರ್ಟ್ ಪುಷ್ಪರಾಜ್ ಕೋರಮಂಗಲದಲ್ಲಿ ಶಾಲೆ ಕಟ್ಟಲು ಅನುಮತಿ ಪಡೆದಿದ್ದ. ಆದ್ರೆ ಅನಧಿಕೃತವಾಗಿ ವರ್ತೂರು ಸಮೀಪ ಶಾಲೆ ನಿರ್ಮಾಣ ಮಾಡಿದ್ದಾನೆ. ಈ ಹಿನ್ನೆಲೆ ಶಾಲೆಗೆ ಬೀಗ ಹಾಕಲಾಗಿದೆ.
ಬೆಂಗಳೂರು, 14: ವರ್ತೂರು ಪೊಲೀಸ್ ಠಾಣೆ(Varthur Police Station Limits) ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕೇಸ್ಗೆ ಸಂಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ನ ಶಾಲೆಗೆ ಬೀಗ(School Shut) ಹಾಕಲಾಗಿದೆ. ಅನಧಿಕೃತವಾಗಿ ಶಾಲೆ ನಿರ್ಮಾಣ ಮಾಡಿರುವ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶದ ಮೇರೆಗೆ ಶಾಲೆ ಬಂದ್ ಮಾಡಲಾಗಿದೆ. ಇದರಿಂದ ಶಾಲೆಯಲ್ಲಿ ಓದುತ್ತಿದ್ದ 140ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಆರೋಪಿ ಲ್ಯಾಂಬರ್ಟ್ ಪುಷ್ಪರಾಜ್ ಕೋರಮಂಗಲದಲ್ಲಿ ಶಾಲೆ ಕಟ್ಟಲು ಅನುಮತಿ ಪಡೆದಿದ್ದ. ಆದ್ರೆ ಅನಧಿಕೃತವಾಗಿ ವರ್ತೂರು ಸಮೀಪ ಶಾಲೆ ನಿರ್ಮಾಣ ಮಾಡಿದ್ದಾನೆ. ಈ ಹಿನ್ನೆಲೆ ಶಾಲೆಗೆ ಬೀಗ ಹಾಕಲಾಗಿದೆ. ಇದರಿಂದ ಶಾಲೆಯಲ್ಲಿ ಓದುತ್ತಿದ್ದ 140ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸದ್ಯ ಮಕ್ಕಳನ್ನ ಬೇರೆ ಶಾಲೆಗೆ ಸೇರಿಸಲು ಅವಕಾಶ ನೀಡಲಾಗಿದ್ದು ತಾವು ಹೇಳಿದ ಶಾಲೆಗೆ ಸರ್ಕಾರದಿಂದಲೇ ದರ ನಿಗದಿ ಮಾಡಿ ಸೀಟ್ ವ್ಯವಸ್ಥೆ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿನ್ನು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ, ಗುಂಪುಗೂಡಿ ಹತ್ಯೆ ಮಾಡಿದ್ರೆ 7 ವರ್ಷ ಜೈಲು
ಜ್ಞಾನ ದೇಗುಲದಲ್ಲೇ ಪೈಶಾಚಿಕ ಕೃತ್ಯ
ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ ತನ್ನದೇ ಶಾಲೆಯ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ. 10 ವರ್ಷದ ಮಗು Mild Dyslexia ಅಂದ್ರೆ ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದು ಗುಂಜೂರು ಸಮೀಪದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು. ಆಗಸ್ಟ್ 3 ರ ಬೆಳಗ್ಗೆ 8.30 ಕ್ಕೆ ಬಾಲಕಿ ಶಾಲೆಗೆ ತೆರಳಿದ್ದಾಳೆ.11.30 ಕ್ಕೆ ಶಾಲೆಯಿಂದ ತನ್ನ ಕೊಠಡಿಗೆ ಕರೆದೊಯ್ದ ಪ್ರಾಂಶುಪಾಲ ವಿಶ್ರಾಂತಿ ಪಡೆಯುವಂತೆ ಹೇಳಿ ಅತ್ಯಾಚಾರ ಎಸಗಿದ್ದ. ಮಧ್ಯಾಹ್ನ 3.30 ಕ್ಕೆ ಶಾಲೆಯಿಂದ ಮನೆಗೆ ವಾಪಸ್ಸಾಗಿದ್ದ ಬಾಲಕಿ, ತನ್ನ ತಾಯಿಗೆ ಹೊಟ್ಟೆ ನೋವು ಎಂದು ಹೇಳಿಕೊಂಡಳು. ಸ್ನಾನ ಮಾಡಿಸಿ ಕರೆತರುವಾಗ ರಕ್ತದ ಕಲೆಗಳು ಕಂಡುಬಂದಿದೆ. ಇದೇ ವಿಚಾರವಾಗಿ ಮಗುವನ್ನು ತಾಯಿ ಕೇಳಿದಾಗ ನಡೆದ ಘಟನೆ ಬಗ್ಗೆ ಪುಟ್ಟ ಬಾಲಕಿ ವಿವರಿಸಿದ್ದಾಳೆ. ಘಟನೆ ಸಂಬಂಧ ಬಾಲಕಿ ತಾಯಿ ದೂರಿನ ಮೇರೆಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು. ಆರೋಪಿ ಪ್ರಾಂಶುಪಾಲನನ್ನ ಬಂಧಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಈಗ ಶಾಲೆಗೆ ಬೀಗ ಬಿದ್ದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ