Auto fare hike: ಆಟೋ ಪ್ರಯಾಣಿಕರಿಗೆ ಶಾಕ್​​! ಬೆಂಗಳೂರಲ್ಲಿ ಇಂದಿನಿಂದ ಮೀಟರ್ ದರ ಏರಿಕೆ

ಆಟೋ ಏರುವುದಕ್ಕೂ ಮೊದಲು ಜೇಬು ಗಟ್ಟಿ ಇದೆಯಾ ಚೆಕ್ ಮಾಡಿಕೊಳ್ಳುವ ಪರಿಸ್ಥಿತಿ ಸಿಲಿಕಾನ್​ ಸಿಟಿ ಜನರದ್ದಾಗಿದೆ. ಏಕೆಂದರೆ ಇಂದಿನಿಂದ ಬೆಂಗಳೂರಲ್ಲಿ ಪರಿಷ್ಕೃತ ಆಟೋ ಮೀಟರ್ ಪ್ರಯಾಣ ದರ ಏರಿಕೆ ಜಾರಿ ಆಗಿದೆ. ಪರಿಷ್ಕೃತ ಆಟೋ ಪ್ರಯಾಣ ದರ ಸಂಪೂರ್ಣ ಮಾಹಿತಿ ಇಲ್ಲಿದೆ.

Auto fare hike: ಆಟೋ ಪ್ರಯಾಣಿಕರಿಗೆ ಶಾಕ್​​! ಬೆಂಗಳೂರಲ್ಲಿ ಇಂದಿನಿಂದ ಮೀಟರ್ ದರ ಏರಿಕೆ
ಆಟೋ ಪ್ರಯಾಣ ದರ ಏರಿಕೆ
Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2025 | 8:39 AM

ಬೆಂಗಳೂರು, ಆಗಸ್ಟ್​ 01: ರಾಜಧಾನಿ ಬೆಂಗಳೂರಿನಲ್ಲಿ (bangaluru) ಆಟೋ ಪ್ರಯಾಣ ದರ ಪರಿಷ್ಕರಣೆ (Auto fare hike) ಆಗಿದ್ದು, ಪ್ರಯಾಣಿಕರಿಗೆ ಇಂದಿನಿಂದ ಆಟೋ ಪ್ರಯಾಣ ದರದ ಬಿಸಿ ತಟ್ಟಲಿದೆ. ಮಿನಿಮಮ್ ಆಟೋ ಪ್ರಯಾಣ ದರ 30ರಿಂದ 36 ರೂಪಾಯಿ ಏರಿಕೆ ಆಗಿದ್ದು, ನಂತರದ ಪ್ರತಿ ಕಿ.ಮೀ.ಗೆ 18 ರೂಪಾಯಿ ನಿಗದಿ ಮಾಡಲಾಗಿದೆ. ಆಟೋ ಪ್ರಯಾಣ ದರ ಪರಿಷ್ಕರಣೆಗೆ ಚಾಲಕರು ಸಂತಸ ವ್ಯಕ್ತಪಡಿಸಿದರೆ, ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಪರಿಷ್ಕೃತ ಆಟೋ ಪ್ರಯಾಣ ದರ ಹೀಗಿದೆ

ಮೊದಲ 2 ಕಿ.ಮೀಟರ್​ಗೆ 30 ರೂ. ಇದ್ದು, 36 ರೂ. ಗೆ ಹೆಚ್ಚಾಗಿದೆ. ಸದ್ಯ ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ 30 ರೂ ಇದೆ. ನಂತರದ ಪ್ರತಿ ಕಿಮೀ ಗೆ 18 ರೂ ನಿಗದಿ ಮಾಡಲಾಗಿದೆ. ಈ ಹಿಂದೆ ಪ್ರತಿ ಕಿಮೀ ಗೆ 15 ದರ ನಿಗದಿ ಮಾಡಲಾಗಿತ್ತು. ಎರಡು ಕಿ.ಮೀ. ಮಿನಿನಮ್​​ ದರ 6 ರೂಪಾಯಿಗೆ ಮತ್ತು ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಒನ್ ಆ್ಯಂಡ್​​​ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ) ಮಾಡಲಾಗುವುದು.

ಇದನ್ನೂ ಓದಿ: Bengaluru auto price: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ಆಟೋ ಪ್ರಯಾಣದ ದರ ಹೆಚ್ಚಳ!

ಇದನ್ನೂ ಓದಿ
ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರು-ಬೀದರ್ ಮಧ್ಯೆ ವಿಶೇಷ ರೈಲು: ವೇಳಾಪಟ್ಟಿ
ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ಆಟೋ ಪ್ರಯಾಣದ ದರ ಹೆಚ್ಚಳ!
ಆಟೋ ಪ್ರಯಾಣ ದರ ಏರಿಕೆಗೂ ಮುನ್ನವೇ ಪ್ರಯಾಣಿಕರಿಗೆ ಸಂಕಷ್ಟ
ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಗ್ರೀನ್ ಸಿಗ್ನಲ್, ಎಷ್ಟು ಹೆಚ್ಚಾಗಲಿದೆ?

36 ರೂ ಮೂರು ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದು. ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿದ್ದು, ನಂತರ ಪ್ರತಿ ಹದಿನೈದು ನಿಮಿಷಕ್ಕೆ 10 ರೂ. 20 ಕೆಜಿ ಲಗೇಜ್​ಗೆ ಉಚಿತ ಇರಲಿದೆ. 20 ಕೆಜಿಗಿಂತ ಹೆಚ್ಚಿದರೆ 10 ರೂಪಾಯಿ ಶುಲ್ಕ ತೆರಬೇಕು. ಗರಿಷ್ಠ ಪ್ರಯಾಣಿಕರ ಲಗೇಜ್​ಗಳು 50 ಕೆಜಿ ಇದ್ದರೆ 10 ರೂ ಹಣ ನೀಡಬೇಕು.

ಇದನ್ನೂ ಓದಿ: ಆಟೋ ಪ್ರಯಾಣ ದರ ಏರಿಕೆಗೂ ಮುನ್ನವೇ ಪ್ರಯಾಣಿಕರಿಗೆ ಸಂಕಷ್ಟ: ಅಗ್ರಿಗೇಟರ್ ಕಂಪನಿಗಳ ದುಪ್ಪಟ್ಟು ದರ ವಸೂಲಿ

ಆಟೋ ದರ ಪರಿಷ್ಕರಣೆ ಸಮಿತಿಯೂ ಮಾರ್ಚ್ ತಿಂಗಳಲ್ಲಿ ಆಟೋ ದರ ಏರಿಕೆಗೆ ಸಂಬಂಧಿಸಿದಂತೆ ಸಭೆ ಮಾಡಿತ್ತು. ಹಲವು ಆಟೋ ಸಂಘಟನೆಗಳು ಮತ್ತು ಚಾಲಕರು ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್​ ಸಿಗ್ನಲ್​ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:16 am, Fri, 1 August 25