ಸರ್ಕಾರದ ಯೋಜನೆ ಉಳ್ಳವರಿಗೆ ಸೀಮಿತವೇ? ಇಲ್ಲಿ ಬಡವರು ಬಡವರಾಗಿಯೇ ಉಳಿಯಬೇಕೆ?
ಸಿಟಿಜನ್ ರೈಟ್ಸ್ ಫೌಂಡೇಷನ್, ಸಿದ್ದರಾಮಯ್ಯರಿಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದೆ. ಗೃಹ ಜ್ಯೋತಿ ಯೋಜನೆ ಕುರಿತ ರಾಜ್ಯ ಸರ್ಕಾರದ ಆದೇಶವು 'ಬಡವರು ಬಡವರಾಗಿಯೇ ಉಳಿಯಬೇಕು' ಎಂಬ ಕಟು ನಿಲುವಿನಂತಿದ್ದು, ಆದೇಶವನ್ನು ಮಾರ್ಪಾಡು ಮಾಡಿ, ತಾರತಮ್ಯ ತೊಲಗಿಸಬೇಕು ಎಂದಿದೆ.
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಪತ್ರ ಬರೆದು ಮನವಿ ಮಾಡಿದ್ದ ಸಿಟಿಜನ್ ರೈಟ್ಸ್ ಫೌಂಡೇಷನ್ ಮತ್ತೊಮ್ಮೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದೆ.
ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆ ಕುರಿತ ರಾಜ್ಯ ಸರ್ಕಾರದ ಆದೇಶವು ‘ಬಡವರು ಬಡವರಾಗಿಯೇ ಉಳಿಯಬೇಕು’ ಎಂಬ ಕಟು ನಿಲುವಿನಂತಿದ್ದು, ಆದೇಶವನ್ನು ಮಾರ್ಪಾಡು ಮಾಡಿ, ತಾರತಮ್ಯ ತೊಲಗಿಸಬೇಕೆಂಬ ಸಂವಿಧಾನದ ಆಶಯಗಳಿಗೆ ತಕ್ಕಂತೆ ಜಾರಿಗೊಳಿಸಲು ಕೋರಿ ಸಿಟಿಜನ್ ರೈಟ್ಸ್ ಫೌಂಡೇಷನ್ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದೆ.
ಕಳದ 15ನೇ ವಿಧಾನಸಭಾ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ, ಪೂರ್ಣ ಬಹುಮತ ಪಡೆಯದೇ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಿ, ಬದಲಾದ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ಸ್ಥಾನ ಆಲಂಕರಿಸಬೇಯಿತು, ಆ ವೇಳೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಟ ನಡೆಸಿದ ಕಾಂಗ್ರೆಸ್, ಚುನಾವಣೆಯಲ್ಲಿ ಗೆದ್ದರೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಸಂಕಲ್ಪ ಮಾಡಿತ್ತು. ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಭರವಸೆಗಳ ಮೇಲೆ ನಂಬಿಕೆ ಇಟ್ಟು ಬಹುದುತದಿಂದ ಗೆಲ್ಲಿಸಿದ್ದಾರೆ. ಅದರ ಪರಿಣಾಮವಾಗಿ ಪ್ರಸ್ತುತ ತಮ್ಮ ಪಕ್ಷವು ಸರ್ಕಾರ ರಚಿಸುವಂತಾಗಿದ್ದು ತಾವು ಮುಖ್ಯಮಂತ್ರಿಯಾಗಿರುವಿರಿ. ಚುನಾವಣಾ ಪೂರ್ವದಲ್ಲಿ ಜನತೆಗೆ ಭರವಸೆ ನೀಡಿರುವ ‘ಐದು ಗ್ಯಾರಂಟಿ’ ಯೋಜನೆಗಳ ಜಾರಿಗೆ ತಮ್ಮ ಸರ್ಕಾರ ಮುನ್ನುಡಿ ಬರದಿರುವುದೂ ಸಂತಸರ ಸಂಗತಿಯಾಗಿದೆ. ಆದರೆ “ಗೃಹ ಜ್ಯೋತಿ” ಯೋಜನೆ ರೂಪಿಸುವಲ್ಲಿ ತಾರತಮ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Gruha Lakshmi Scheme: ಗೃಹ ಲಕ್ಷ್ಮೀ ಯೋಜನೆಗೆ ಮಾರ್ಗಸೂಚಿ ಪ್ರಕಟ: ಮತ್ತೆ ಗೊಂದಲ ಮೂಡಿಸಿದ ಸರ್ಕಾರ
ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ, ಸಾರ್ವಜನಿಕರಿಗೆ ಆಗಿರುವ ಅನ್ಯಾಯಗಳ ವಿರುದ್ಧ ಅಭಿಯಾನ, ಕಾನೂನು ಸಮರ ನಡೆಸುತ್ತಾ ಬಂದಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್, ಇದೀಗ ತಮ್ಮ ಸರ್ಕಾರವು “ಗೃಹ ಜ್ಯೋತಿ” ಯೋಜನೆಯಲ್ಲಾಗಿರುವ ಲೋಪದ ಬಗ್ಗೆ ಗದುನಸೆಳೆಯುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಯೋಜನೆ ಉಳ್ಳವರಿಗೆ ಸೀಮಿತವೇ? ಇಲ್ಲಿ ಬಡವರು ಬಡವರಾಗಿಯೇ ಉಳಿಯಬೇಕೆ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ಗೃಹ ಜ್ಯೋತಿ ಯೋಕನೆಯ ಸರ್ಕಾರ ಆದೇಶವನ್ನು ನೋಡಿದರೆ ಬಡವರು ಬಡವರಾಗಿಯೇ ಉಳಿಯಬೇಕು? ಎಂಬುದು ಸರ್ಕಾರದ ಆಶಯವೇ? ಎಂಬ ಪ್ರಶ್ನೆ ಮೂಡುತ್ತಿದೆ. ಗೃಹ ಜ್ಯೋತಿ” ಕುರಿತಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ನಡಾವಳಿಗಳಲ್ಲಿನ ಪ್ರಸ್ತಾವನೆಯಲ್ಲಿ ‘ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರಿಕರಿಗೆ ಒದಗಿಸಲು ದಿನಾಂಕ: 20.05.2013ರಂದು ನರದ ಸಚಿವ ಸಂಪುಟದ ಸಭೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಒದಗಿಸಲು ತಾತ್ವಿಕ ಅನುಮೋದನೆ ನೀಡಿದೆ’ ಎಂದು ನಮೂದಿಸಲಾಗಿದೆ.
ಅದೇ ನಡಾವಳಿಗಳಲ್ಲಿನ ಪ್ರಸ್ತಾವನೆಯ ಮೂರನೇ ಪ್ಯಾರಾದಲ್ಲಿ ‘ದಿನಾಂಕ: 02.06.2013ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ “ಗೃಹ ಜ್ಯೋತಿ” ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆಯಾಗಿರುತ್ತದೆ. “ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್’ಗಳಿವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಧಿಕ ವರ್ಷ 2022-23ರ ಬಳಕೆಯ ಅಥಾರದನ್ವಯ) ಯೂನಿಟ್‌ಗಳ ಮೇಲೆ ಶೇಕಡಾ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್’ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸಂಪುಟ ಸಭೆಯು ಅನುಮೋದಿಸಿದೆ’ ಎಂದು ವಿವರಿಸಲಾಗಿದೆ.
ಇದನ್ನೂ ಓದಿ: ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಬಂದಿಲ್ಲ ಅಧಿಕೃತ ಮಾಹಿತಿ: ಗೃಹಜ್ಯೋತಿ ಯೋಜನೆಗೆ ಬೇಕು ಕಾಲಾವಕಾಶ
ವಿದ್ಯುತ್ ಉಳಿಸಿ’ ಎಂಬ ಸರ್ಕಾರದ ಸಂದೇಶವನ್ನು ಪಾಲಿಸಿರುವ ಅದೆಷ್ಟೋ ಕುಟುಂಬಗಳು ವಿದ್ಯುತ್ ಮಿತ ಬಳಕೆಗೆ ಅದ್ಯತೆ ನೀಡಿದೆ, ಅಂತಹಾ ಬಡ ಕುಟುಂಬಗಳು ಈ ಯೋಜನೆಯ ಪರಿಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಬಹುತೇಕ ಕುಟುಂಬಗಳು ರಫ್ರಿಜೆರೇಟರ್, ಫ್ಯಾನ್, ಟಿವಿ, ಗೀಸರ್, ಮೊದಲಾದ ಗೃಹೋಪಯೋಗಿ ವಸ್ತುಗಳನ್ನು ಹೊಂದಲು ಅಸಕ್ತರಾಗಿದ್ದಾರೆ. ಆ ಕುಟುಂಬಗಳ ಮಾಸಿಕ ವಿದ್ಯುತ್ ಬಳಕೆ 50 ಯೂನಿಟ್‌ಗಳಿಗಿಂತಲೂ ಹೆಚ್ಚು ಇರುವುದಿಲ್ಲ ಎಂಬುವುದು ಅಹಜ. ಅಂತಹ ಕುಟುಂಬಗಳು ಈ ನಿಮ್ಮ ಯೋಜನೆಯಿಂದ ವಂಚಿತರಾಗುತ್ತಾರೆ ಎಂದು ಪತ್ರದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ