ಜನರನ್ನು ಸೇರಿಸಲು ಬಿಡದಿದ್ರೂ ನಾನು, ಡಿಕೆ ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ
ಪಾದಯಾತ್ರೆ ಹತ್ತಿಕ್ಕಲು ಬಿಜೆಪಿಯ ಷಡ್ಯಂತ್ರ ಇದು. ಮಹದಾಯಿ ಯೋಜನೆ ಈವರೆಗೂ ಇತ್ಯರ್ಥ ಮಾಡಿಲ್ಲ. ಕರ್ನಾಟಕಕ್ಕೆ ಕೇಂದ್ರ ತಾರತಮ್ಯ ಧೋರಣೆ ತೋರುತ್ತಿದೆ. ಈ ಯೋಜನೆಯಿಂದ ಎರಡೂವರೆ ಕೋಟಿ ಜನರಿಗೆ ಅನುಕೂಲ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಪಕ್ಷಭೇದ ಮರೆತು ಜನವರಿ 9ರಿಂದ ಪಾದಯಾತ್ರೆಗೆ ಸಿದ್ಧತೆ ಮಾಡಲಾಗಿದೆ. ಹೀಗಿರುವಾಗ ಸರ್ಕಾರ, ಕೆಲ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕೆಂದು ಕುತಂತ್ರ ಹೆಣೆಯಲಾಗಿದೆ. ರಾಜ್ಯದಲ್ಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಬೇರೆ ದಿನಗಳಲ್ಲಿ ಕೆಲವು ಬೇರೆ ನಿರ್ಬಂಧ ವಿಧಿಸಿದ್ದಾರೆ. ಸಭೆ ಸಮಾರಂಭ ಮಾಡದಂತೆ ನಿರ್ಬಂಧ ವಿಧಿಸಿದ್ದಾರೆ. ಕೊವಿಡ್ ನಿಯಮದಂತೆ ನಾವು ಪಾದಯಾತ್ರೆ ನಡೆಸುತ್ತೇವೆ. ನೀರಿಗಾಗಿ ನಡಿಗೆ ಜ.9ರಿಂದ ನಮ್ಮ ಪಾದಯಾತ್ರೆ ನಡೆಯುತ್ತೆ. ಸರ್ಕಾರದ ನಿಯಮಗಳನ್ನ ಅನುಸರಿಸಿ ಪಾದಯಾತ್ರೆ ಮಾಡ್ತೇವೆ. ನಾವು ಹೇಳಿದಂತೆ ಪಾದಯಾತ್ರೆ ಮಾಡುವುದಕ್ಕೆ ಬದ್ಧರಿದ್ದೇವೆ. ಇದು ಪಕ್ಷಾತೀತ ಹೋರಾಟ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ನಿಂದ ಪಾದಯಾತ್ರೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಜನರ ಹಿತದೃಷ್ಟಿಯಿಂದ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಸರ್ಕಾರದವರು ನಿನ್ನೆ ಕೆಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದಾರೆ. ನಾವು ಜ.9ರಿಂದ ಜ.19ರವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ವಿ. ನಾವು ಕೂಡ ಸರ್ಕಾರ ನಡೆಸಿದವರು, ನಮಗೂ ಅರಿವಿದೆ. ನಾವು ನಿಯಮಾವಳಿಯಂತೆ ಪಾದಯಾತ್ರೆ ಮಾಡುತ್ತೇವೆ. ನಮ್ಮ ಪಾದಯಾತ್ರೆ ಹತ್ತಿಕ್ಕಲು ಬಿಜೆಪಿಯ ಷಡ್ಯಂತ್ರ ಇದು. ಮಹದಾಯಿ ಯೋಜನೆ ಈವರೆಗೂ ಇತ್ಯರ್ಥ ಮಾಡಿಲ್ಲ. ಕರ್ನಾಟಕಕ್ಕೆ ಕೇಂದ್ರ ತಾರತಮ್ಯ ಧೋರಣೆ ತೋರುತ್ತಿದೆ. ಈ ಯೋಜನೆಯಿಂದ ಎರಡೂವರೆ ಕೋಟಿ ಜನರಿಗೆ ಅನುಕೂಲ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿ.ಟಿ.ರವಿ ಅಣ್ಣಾಮಲೈಗೆ ಹೇಳಿ ಪ್ರತಿಭಟನೆ ನಿಲ್ಲಿಸಬಹುದಿತ್ತಲ್ವಾ? ಮೇಕೆದಾಟು ಯೋಜನೆ ಜಾರಿಗೆ ಬಿಜೆಪಿಯವರಿಗೆ ಮನಸ್ಸಿಲ್ಲ. ಹಾಗಾಗಿ ಅಣ್ಣಾಮಲೈ ಮೂಲಕ ಪ್ರತಿಭಟನೆ ಮಾಡಿಸುತ್ತಿದ್ದಾರೆ. ನಮಗೂ ಜವಾಬ್ದಾರಿ ಇದೆ, ಕೊರೊನಾ ವ್ಯಾಪಿಸಬಾರದು. ಪ್ರಧಾನಿ ರಾಲಿಗಳಿಗೆ ಯಾವುದೇ ಕೊರೊನಾ ಬರುವುದಿಲ್ವಾ? ಪ್ರಧಾನಿ ನರೇಂದ್ರ ಮೋದಿಗೆ ಕಾನೂನು ಬೇರೆ ಇದೆಯಾ? ಈ ಸರ್ಕಾರದಲ್ಲಿ ದ್ವಂದ್ವ ನೀತಿ ಇದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಾವು ನಮ್ಮ ಪಾದಯಾತ್ರೆಯನ್ನು ಮಾಡಿಯೇ ಮಾಡುತ್ತೇವೆ. ಕೊರೊನಾ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿಯವರು ಏನೇ ಷಡ್ಯಂತ್ರ ಮಾಡಿದರೂ ನಾವು ನಿಲ್ಲಿಸಲ್ಲ. ಮಾಸ್ಕ್ ಧರಿಸಿ, ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ. ಮುಂಜಾಗ್ರತಾ ಕ್ರಮ ಕೈಗೊಂಡು ಪಾದಯಾತ್ರೆ ನಡೆಸುತ್ತೇವೆ. ಸರ್ಕಾರದವರಿಗೆ ಕೊರೊನಾ ನಿಯಮ ಅನ್ವಯಿಸುವುದಿಲ್ವಾ? ಸಿಎಂ ನಾಗಮಂಗಲಕ್ಕೆ ಯಾಕೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನಾವು ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದ್ದೇವೆ. ಒಂದು ವೇಳೆ ಜನರನ್ನ ಸೇರಿಸಲು ಬಿಡದಿದ್ರೂ ಪಾದಯಾತ್ರೆ ಮಾಡುತ್ತೇವೆ. ಜನರನ್ನ ಸೇರಿಸಲು ಬಿಡದೇ 144 ಜಾರಿ ಮಾಡಿದ್ರೂ ಮಾಡ್ತೇವೆ. ನಾನು, ಡಿ.ಕೆ.ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡ್ತೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಎಲ್ಲರಿಗೂ ಒಂದೇ ಅಲ್ವಾ: ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಸಿದ್ಧತೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದ ಡಿ ಕೆ ಶಿವಕುಮಾರ್
Published On - 7:11 pm, Wed, 5 January 22