AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟರ ಕೈಗೆ ಸಿಕ್ಕಿ ನಲುಗಿದ್ದ ಕೆಎಸ್​ಡಿಎಲ್​ನಿಂದ ಹೊಸ ದಾಖಲೆ: ಸಿದ್ದರಾಮಯ್ಯ

ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಮಾಡಾಳ್‌ರಂತಹ ಭ್ರಷ್ಟರ ಕೈಗೆ ಸಿಕ್ಕಿ ನಲುಗಿ ಹೋಗಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು ಇಂದು ‘ನಮ್ಮ ಸರ್ಕಾರದ ಪ್ರಾಮಾಣಿಕ ಕಾಳಜಿಯಿಂದಾಗಿ ಹೊಸ ದಾಖಲೆ ಬರೆದಿದೆ ಎಂದು ಸಿಎಂ ಸಿದ್ದರಾಮಯ್ಯನವರು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟರ ಕೈಗೆ ಸಿಕ್ಕಿ ನಲುಗಿದ್ದ ಕೆಎಸ್​ಡಿಎಲ್​ನಿಂದ ಹೊಸ ದಾಖಲೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 02, 2024 | 7:14 PM

Share

ಬೆಂಗಳೂರು, ಜ.02: ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಮಾಡಾಳ್‌ರಂತಹ ಭ್ರಷ್ಟರ ಕೈಗೆ ಸಿಕ್ಕಿ ನಲುಗಿ ಹೋಗಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು ಇಂದು ‘ನಮ್ಮ ಸರ್ಕಾರದ ಪ್ರಾಮಾಣಿಕ ಕಾಳಜಿಯಿಂದಾಗಿ ನಲವತ್ತು ವರ್ಷಗಳಲ್ಲೇ ಹೊಸ ದಾಖಲೆ ಬರೆದಿದ್ದು, 9 ತಿಂಗಳ ಅವಧಿಯಲ್ಲಿ ಬರೊಬ್ಬರಿ 1,171 ಕೋಟಿ ರೂ. ವಹಿವಾಟು ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರು ತಮ್ಮ ಎಕ್ಸ್​​(ಹಿಂದಿನ ಟ್ವೀಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಕಾರ್ಮಿಕರ ಶ್ರಮದಲ್ಲಿ ಸಂಸ್ಥೆ ಬೆಳೆಸಬೇಕಿದ್ದವರು ಕುಟುಂಬದ ಆಸ್ತಿ ಸಂಪಾದನೆಗೆ ಇಳಿದರೆ, ಲಾಭದಲ್ಲಿದ್ದ ಸಂಸ್ಥೆ ಹೇಗೆ ಅವಸಾನದತ್ತ ಸರಿಯುತ್ತದೆಂಬುದಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್‌ಡಿಎಲ್ ಸಾಗಿದ ಹಾದಿಯೇ ಉದಾಹರಣೆ ಎಂದಿದ್ದಾರೆ. ಇನ್ನು ಅದೇ ಕೆಎಸ್‌ಡಿಎಲ್ ಇಂದು ಹೊಸ ರೂಪದೊಂದಿಗೆ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುವಷ್ಟು ಬಲಶಾಲಿಯಾಗಿ ನಿಂತಿರುವುದು ನಮ್ಮ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿ ಎನ್ನುವ ಮೂಲಕ ಬಿಜೆಪಿಗೆ ಟಾಂಗ್​ ಕೊಟ್ಟಿದ್ದಾರೆ.

ಸ್ವತಂತ್ರ ಭಾರತದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಅವುಗಳ ಉಳಿವಿಗಾಗಿ ಹೋರಾಡುತ್ತಿರುವುದು ಕಾಂಗ್ರೆಸ್ ಪಕ್ಷವೇ. ನಾವು ಕಟ್ಟಿದ ಸಂಸ್ಥೆಯನ್ನು ಮಾರಲು ಅಥವಾ ಭ್ರಷ್ಟಾಚಾರದ ಮೂಲಕ ಕುಟುಂಬದ ಆಸ್ತಿಗಳಿಸುವುದೇ ಬಿಜೆಪಿಯವರ ಏಕೈಕ ಉದ್ದೇಶ. ಇದನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Tue, 2 January 24