ಪಾದಯಾತ್ರೆ ನಿರ್ಧರಿಸಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ, ಇದರ ಹಿಂದಿನ ಉದ್ದೇಶವೇನು?- ಸಿದ್ದರಾಮಯ್ಯ ಪ್ರಶ್ನೆ

ರಾಮನಗರ ಜಿಲ್ಲೆಗೆ ಮಾತ್ರ ಏಕೆ ಕೆಲ ನಿಯಮ ಜಾರಿ ಇದೆ. ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಅಂತ ಪ್ರಶ್ನಿಸಿದ ಸಿದ್ದರಾಮಯ್ಯ, ನಾವು ಕೊರೊನಾ ನಿಯಮ ಪಾಲಿಸುತ್ತೇವೆ.

ಪಾದಯಾತ್ರೆ ನಿರ್ಧರಿಸಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ, ಇದರ ಹಿಂದಿನ ಉದ್ದೇಶವೇನು?- ಸಿದ್ದರಾಮಯ್ಯ ಪ್ರಶ್ನೆ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: sandhya thejappa

Updated on:Jan 08, 2022 | 12:36 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕದ ಹಿನ್ನೆಲೆ ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡುತ್ತೇವೆ ಅಂತ ಪಟ್ಟು ಬಿದ್ದಿದ್ದಾರೆ. ನಾಳೆಯಿಂದ (ಜ.9) ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಪಾದಯಾತ್ರೆ ಮಾಡಲು ಮೊದಲೇ ನಿರ್ಧರಿಸಿದ್ದೆವು. ನಾವು ನಿರ್ಧಾರ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶವೇನು ಅಂತ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಮನಗರ ಜಿಲ್ಲೆಗೆ ಮಾತ್ರ ಏಕೆ ಕೆಲ ನಿಯಮ ಜಾರಿ ಇದೆ. ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಅಂತ ಪ್ರಶ್ನಿಸಿದ ಸಿದ್ದರಾಮಯ್ಯ, ನಾವು ಕೊರೊನಾ ನಿಯಮ ಪಾಲಿಸುತ್ತೇವೆ. ಅರೆಸ್ಟ್ ಮಾಡೋದಾದರೆ ಮಾಡಲಿ. ಬೇಕಂತಲೇ 144 ಹಾಕಿದ್ದಾರೆ. ಸರ್ಕಾರ ನಮ್ಮ ಪಾದಯಾತ್ರೆ ನಿಲ್ಲಿಸಲು ಪ್ಲಾನ್ ಮಾಡಿದೆ. ಇಂದು ಸರ್ಕಾರ ಸುಳ್ಳು ಜಾಹೀರಾತು ನೀಡಿದೆ. ಅನಗತ್ಯ ಗೊಂದಲ ಮಾಡುವ ಉದ್ದೇಶದಿಂದ ಸರ್ಕಾರ 144 ಹಾಕಿದೆ. ನಾವು 15 ಜನ ಪಾದಯಾತ್ರೆ ಮಾಡಿದರೆ ಬಿಡುತ್ತೇವೆ ಅಂತ ಕಾರಜೋಳ ಹೇಳುತ್ತಾರೆ. 15 ಜನ ನಡೆದರೆ ಅದು 144 ಕಲಂ ಉಲ್ಲಂಘನೆ ಅಲ್ವಾ? ಅಂತ ಕೇಳಿದ್ದಾರೆ.

ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಅವರು ಎನು ಮಾಡಿದ್ರು? ನಾವು ನಿಯಮದ ಪ್ರಕಾರ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ ಎರಡೂವರೆ ವರ್ಷದಿಂದ ಏನು ಮಾಡಿದೆ ಅಂತ ಲೆಕ್ಕ ಕೊಡಲಿ. ಕೊರೊನಾ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ. ಮಾಸ್ಕ್, ಗ್ಲೌಸ್ ,ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಡುತ್ತೇವೆ. ಏನ್ ಕ್ರಮ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ಏನೇ ಕ್ರಮ ತೆಗೆದುಕೊಂಡರು ಎದುರಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ

ಮಂಡ್ಯ ಕಿರುಗಾವಲು: ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ

ಕರ್ಫ್ಯೂ ಮಧ್ಯೆ ಮಾನವೀಯತೆ ತೋರಿದ ಹುಬ್ಬಳ್ಳಿ ಪೊಲೀಸರು: ರಸ್ತೆಯಲ್ಲಿ ಏಕಾಏಕಿ ಕುಸಿದು ಬಿದ್ದ ಯುವಕನಿಗೆ ನೆರವು

Published On - 12:31 pm, Sat, 8 January 22