ಮಂಡ್ಯ ಕಿರುಗಾವಲು: ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ

ಮಂಡ್ಯ ಕಿರುಗಾವಲು: ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ
ಮಂಡ್ಯ ಕಿರುಗಾವಲು: ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ

ಸ್ ಸೋರಿಕೆಯಾಗಿ ಮನೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಗ್ರಾಮದ ಶಿವಣ್ಣ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

TV9kannada Web Team

| Edited By: sadhu srinath

Jan 08, 2022 | 12:52 PM

ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸ್ಫೋಟ ಸಂಭವಿಸಿದ್ದು, ಮನೆ ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಗ್ಯಾಸ್ ಸೋರಿಕೆಯಾಗಿ ಮನೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಗ್ರಾಮದ ಶಿವಣ್ಣ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ 1 ಲಕ್ಷ ನಗದು ಸೇರಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ಪಾದಾರ್ಥಗಳು ನಾಶವಾಗಿವೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಲಪಾಳ್ಯದಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ವೇಳೆ ಗ್ಯಾಸ್​ ಲೀಕ್​, ಸ್ಫೋಟ, ತಪ್ಪಿದ ಭಾರಿ ಅನಾಹುತ
ಬೆಂಗಳೂರು: ಬೆಂಗಳೂರಿನ ಮೂಡಲ ಪಾಳ್ಯದಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಸ್ಥಳದಲ್ಲಿ ಗ್ಯಾಸ್ ಲೀಕ್ ಆಗಿದೆ. ಮೂಲಪಾಳ್ಯ ಸರ್ಕಲ್ ನ‌ ಮನೆಯೊಂದರಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ನಡೆಯುತ್ತಿದ್ದ ವೇಳೆ ಸಿಲಿಂಡರ್ ಲೀಕ್ ಅಗಿ ಹೊತ್ತುಕೊಂಡ ಬೆಂಕಿಯಿಂದ ಇಬ್ಬರಿಗೆ ಗಾಯಗಳಾಗಿವೆ. ಭಾರತ್ ಭವಾನಿ ಗ್ಯಾಸ್ ಏಜೆನ್ಸಿಯಲ್ಲಿ ಘಟನೆ ನಡೆದಿದ್ದು, ಇಲ್ಲಿ ಅಕ್ರಮವಾಗಿ ಸಣ್ಣ ಸಿಲಿಂಡರ್ ಗಳಿಗೆ ರೀಫಿಲ್ಲಿಂಗ್ ಮಾಡಲಾಗ್ತಿತ್ತು ಎಂದು ತಿಳಿದುಬಂದಿದೆ. ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಹತ್ತಾರು ಸಿಲಿಂಡರ್ ಗಳು ಒಂದೆ ಕಡೆ ಇದ್ದವು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಸಿದ್ದಾರೆ. ಏಕಾಏಕಿ ಸಿಲಿಂಡರ್ ಲೀಕ್ ಅಗಿದ್ದರ ಪರಿಣಾಮ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Also  Read:
Cm house|ಸಿಎಂ ನಿವಾಸದ ಎದುರು ಮೂರು ಮತ್ತೊಂದು ಜನರಿಲ್ಲ | TV9 Kannada

Follow us on

Related Stories

Most Read Stories

Click on your DTH Provider to Add TV9 Kannada