ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಟಿವಿ9 ರಾಜೇಶ್ ಎಸ್ಗೆ ಬೆಳ್ಳಿ ಪದಕ
ಅಖಿಲ ಕರ್ನಾಟಕ ಸ್ಪೋಟ್ಸ್ ಕರಾಟೆ ಅಸೋಸಿಯೆಶನ್ಸ್ ಆಶ್ರಯದಲ್ಲಿ 15ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಟಿವಿ9 ಕನ್ನಡ ವಾಹಿನಿ ರಾಜೇಶ್ ಎಸ್ ದ್ವೀತಿಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕೊರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಕರಾಟೆ ಚಾಂಪಿಯನ್ಶಿಪ್ನ್ ಪುರುಷರ 80 ಕೇಜಿ ವಿಭಾಗದಲ್ಲಿ ಟಿವಿ9 ಕನ್ನಡ ವಾಹಿನಿ ರಾಜೇಶ್ ಎಸ್ ಬೆಳ್ಳಿ ಪದಕ ಪಡೆದಿದ್ದಾರೆ.
ಬೆಂಗಳೂರು, ಏಪ್ರಿಲ್ 16: ಅಖಿಲ ಕರ್ನಾಟಕ ಸ್ಪೋಟ್ಸ್ ಕರಾಟೆ ಅಸೋಸಿಯೆಶನ್ಸ್ ಆಶ್ರಯದಲ್ಲಿ 15ನೇ ರಾಜ್ಯ ಮಟ್ಟದ ಕರಾಟೆ (Karate) ಚಾಂಪಿಯನ್ಶಿಪ್ನಲ್ಲಿ ಟಿವಿ9 ಕನ್ನಡ (Tv9 Kannada) ವಾಹಿನಿ ರಾಜೇಶ್ ಎಸ್ ದ್ವೀತಿಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕೊರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಕರಾಟೆ ಚಾಂಪಿಯನ್ಶಿಪ್ನ್ ಪುರುಷರ 80 ಕೇಜಿ ವಿಭಾಗದಲ್ಲಿ ಟಿವಿ9 ಕನ್ನಡ ವಾಹಿನಿ ರಾಜೇಶ್ ಎಸ್ ಬೆಳ್ಳಿ ಪದಕ ಪಡೆದಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ 2023ರಲ್ಲಿ ಎಸ್ಕೆಎಸ್ ಇಂಟರ್ನ್ಯಾಶನಲ್ ಫೌಂಡೇಶನ್ ಏರ್ಪಡಿಸಿದ ಕರಾಟೆ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ನ ಪುರುಷರ 80 ಕೇಜಿ ವಿಭಾಗದಲ್ಲಿ ಚಿನ್ನದ ಪಡೆದಿದ್ದರು.
ಕಳೆದ ಹತ್ತು ವರ್ಷಗಳಿಂದ ಕರಾಟೆಯಲ್ಲಿ ನಿರಂತರ ತರಬೇತಿ ಪಡೆಯುತ್ತಿರುವ ಟಿವಿ9ನ ರಾಜೇಶ್ ಎಸ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಸ್ಫರ್ದೆಗಳಲ್ಲಿ ಪದಕ ಪಡೆದಿದ್ದಾರೆ ಪ್ರತಿ ವರ್ಷ ಜರುಗುವ ಕರಾಟೆ ಚಾಂಪಿಯನ್ಶಿಪ್ನಲ್ಲಿ ತಮಿಳನಾಡು, ಆಂಧ್ರಪ್ರದೇಶ, ಕೇರಳ, ಮಧ್ಯೆಪ್ರದೇಶ ಹಾಗೂ ಇತರ ರಾಜ್ಯಗಳಿಂದ ಸ್ಫರ್ದಾಳುಗಳು ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 am, Tue, 16 April 24