ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳ ಬಂಧನ; ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಡೀಲ್
ವಿಧಾನಪರಿಷತ್‌ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಾಬು ಪತ್ನಿ ಸೀಮಾ ಈಗಾಗಲೇ ಬಂಧನಕ್ಕೊಳಗಾಗಿದ್ದಾಳೆ. ಸೀಮಾ ಬಂಧನದ ನಂತರ ಆರೋಪಿ ಬಾಬು ಛಾಪಾ ಕಾಗದವನ್ನು ಪಡೆದು, ವಿಧಾನಸೌಧದ ಆವರಣದಲ್ಲೇ ಮಾರುತ್ತಿದ್ದ ಎಂಬ ಸತ್ಯ ಬಯಲಾಗಿದೆ.
ಬೆಂಗಳೂರು: ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ತಿರುವು ಸಿಕ್ಕಿದೆ. ವಿಧಾನಸೌಧದಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ನಕಲಿ ಛಾಪಾ ಕಾಗದ (stamp papers) ದಂಧೆ ನಡೆಸುತ್ತಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಎಂಬ ವ್ಯಕ್ತಿಯನ್ನು ಸದ್ಯ ಎಸ್‌ಐಟಿ (SIT) ಆಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಪರಿಷತ್‌ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಾಬು ಪತ್ನಿ ಸೀಮಾ ಈಗಾಗಲೇ ಬಂಧನಕ್ಕೊಳಗಾಗಿದ್ದಾಳೆ. ಸೀಮಾ ಬಂಧನದ ನಂತರ ಆರೋಪಿ ಬಾಬು ಛಾಪಾ ಕಾಗದವನ್ನು ಪಡೆದು, ವಿಧಾನಸೌಧದ ಆವರಣದಲ್ಲೇ ಮಾರುತ್ತಿದ್ದ ಎಂಬ ಸತ್ಯ ಬಯಲಾಗಿದೆ.
ಬಾಬು ಏನು ಕೆಲಸ ಮಾಡುತ್ತಾನೆಂದು ಯಾರಿಗೂ ಹೇಳುತ್ತಿರಲಿಲ್ಲ. ಸದ್ಯ ಎಸಿಪಿ ಸಕ್ರಿ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ತಂಡ ಬಂಧಿತರಿಂದ 63 ಲಕ್ಷ ರೂ. ಮೌಲ್ಯದ ಛಾಪಾ ಕಾಗದ ಜಪ್ತಿ ಮಾಡಿದ್ದು, ಬಾಬು ಸೇರಿ ಐವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ಎಸ್‌ಐಟಿ ತಂಡದಿಂದ 63 ಲಕ್ಷ ರೂ. ಮೌಲ್ಯದ ನಕಲಿ ಛಾಪಾ ಕಾಗದ ವಶ ನಕಲಿ ಛಾಪಾ ಕಾಗದ ಸಿದ್ಧಪಡಿಸುತ್ತಿದ್ದ ಐವರು ಆರೋಪಿಗಳನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಹುಸೇನ್ ಮೋದಿ ಬಾಬು, ಸೀಮಾ, ನಯಾಜ್ ಅಹ್ಮದ್, ಶಬ್ಬೀರ್ ಅಹ್ಮದ್, ಹರೀಶ್ನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 63 ಲಕ್ಷ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ರಚನೆಯಾಗಿದ್ದ ಎಸ್‌ಐಟಿ ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆಸಿದ್ದು, ಐವರು ಆರೋಪಿಗಳನ್ನು ಸದ್ಯ ವಿಚಾರಣೆಗೊಳಪಡಿಸಲಾಗಿದೆ.
ನಕಲಿ ಛಾಪಾ ಕಾಗದ ಸಂಬಂಧ ರಚನೆಯಾಗಿದ್ದ ಎಸ್ಐಟಿ ತಂಡದ ಕಾರ್ಯಾಚರಣೆ ವೇಳೆ ನಕಲಿ ಛಾಪಾ ಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 2 ರೂಪಾಯಿ ಛಾಪಾ ಕಾಗದದಿಂದ 25 ಸಾವಿರ ರೂ. ಮೌಲ್ಯದ ಛಾಪಾ ಕಾಗದದವರೆಗೂ ಎಲ್ಲವನ್ನೂ ನಕಲಿ ಮಾಡುತ್ತಿದ್ದ ಆರೋಪಿಗಳು, ನಕಲಿ ಫಾಂಟ್ , ಸೀಲ್. ಸ್ಕ್ರೀನ್ ಪ್ರಿಂಟಿಂಗ್ ಬಳಸಿ ಚಾಪಾ ಕಾಗದ ಸೃಷ್ಟಿ ಮಾಡುತ್ತಿದ್ದರು.
ಮೈಸೂರು ಮಹರಾಜರ ಕಾಲದ ರೀತಿಯ ಛಾಪಾ ಕಾಗದ ಕೂಡ ಆರೋಪಿಗಳು ಸೃಷ್ಟಿ ಮಾಡಿದ್ದು, ಹಳೆಯ ಆಸ್ತಿ ಕಬಳಿಸುವ ಉದ್ದೇಶದಿಂದ ಇಂತಹ ನಕಲಿ ಛಾಪಾ ಕಾಗದ ಸೃಷ್ಟಿಯಾಗುತ್ತಿತ್ತು ಎನ್ನುವುದು ತಿಳಿದುಬಂದಿದೆ. ಸದ್ಯ ಹಳೆಯ ಸ್ಟಾಂಪ್ ಪೇಪರ್ ಮತ್ತು ಹೊಸ ಪೇಪರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಎಸ್‌ಐಟಿ ತಂಡದಿಂದ 63 ಲಕ್ಷ ರೂ. ಮೌಲ್ಯದ ನಕಲಿ ಛಾಪಾ ಕಾಗದ ವಶ; ಐವರು ಆರೋಪಿಗಳ ಬಂಧನ
ಹಳೆ ಛಾಪಾಕಾಗದ ಮಾರಾಟ ಮಾಡ್ತಿದ್ದವರ ಮನೆ ಮೇಲೆ ಪೊಲೀಸರ ದಾಳಿ; ಸಾಕಷ್ಟು ಅಪರಾಧ ಕೃತ್ಯ ಬೆಳಕಿಗೆ