ಕೃಷ್ಣದೇವರಾಯ ಪಾಲಿಕೆ ಬಜಾರ್: ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಮಾರುಕಟ್ಟೆ ಬೆಂಗಳೂರಿನಲ್ಲಿ!
Krishnadevaraya Palika Bazaar: ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಭೂಗತ ಹವಾನಿಯಂತ್ರಿತ ಕೃಷ್ಣದೇವರಾಯ ಪಾಲಿಕೆ ಬಜಾರ್ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲಿಕೆ ಬಜಾರ್ನ್ನು ಉದ್ಘಾಟಿಸಿದರು. ಈ ಪಾಲಿಕೆ ಬಜಾರ್ನ ವಿಶೇಷತೆ ಏನು? ಇಲ್ಲಿದೆ ಓದಿ
ಬೆಂಗಳೂರು, ಆಗಸ್ಟ್ 26: ದಕ್ಷಿಣ ಭಾರತದಲ್ಲೇ ಮೊದಲ ಭೂಗತ ಹವಾನಿಯಂತ್ರಿತ ಮಾರುಕಟ್ಟೆ (Air conditioned Palike Bazaar) ಬೆಂಗಳೂರಿನ (Bengaluru) ವಿಜಯನಗರದ (Vijayanagar) ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾಗಿದೆ. ಬರೊಬ್ಬರಿ 13 ಕೋಟಿ ರೂ. ವೆಚ್ಚದಲ್ಲಿ ಕೃಷ್ಣದೇವರಾಯ ಪಾಲಿಕೆ ಬಜಾರ್ನ್ನು ನಿರ್ಮಣ ಮಾಡಲಾಗಿದೆ. ಈ ಮಾರುಕಟ್ಟೆಯನ್ನು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು. ಈ ಪಾಲಿಕೆ ನಿರ್ಮಾಣ ಮಾಡಲು ಬರೊಬ್ಬರಿ 7 ವರ್ಷ ಸಮಯ ಬೇಕಾಯಿತು. ಪಾಲಿಕೆ ಬಜಾರ್ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.
ಹವಾನಿಯಂತ್ರಿತ ಪಾಲಿಕೆ ಮಾರುಕಟ್ಟೆ ದೆಹಲಿ ಬಿಟ್ಟರೇ, ಎರಡನೇಯದ್ದು ಬೆಂಗಳೂರಿನಲ್ಲಿದೆ. ಈ ಮಾರುಕಟ್ಟೆಯು 136 ಮೀಟರ್ ಉದ್ದ ಮತ್ತು 11 ಮೀಟರ್ ಅಗಲವಿದೆ. ಒಟ್ಟು 80 ಅಂಗಡಿಗಳನ್ನು ಹೊಂದಿದೆ. ಪಾಲಿಕೆ ಬಜಾರ್ ಕೇಂದ್ರೀಯ ಹವಾನಿಯಂತ್ರಣವನ್ನು ಹೊಂದಿದ್ದರೆ, 31 ಅಂಗಡಿಗಳು ಪ್ರತ್ಯೇಕ ಹವಾನಿಯಂತ್ರಣ ಸೌಲಭ್ಯ ಹೊಂದಿವೆ.
ಪಾಲಿಕೆ ಬಜಾರ್ ಒಳಗೆ ಪ್ರವೇಶಕ್ಕೆ ಐದು ದ್ವಾರಗಳಿವೆ. 145 ದೀಪಗಳು, ಎರೆಡು ಎಸ್ಕಲೇಟರ್ಗಳು ಮತ್ತು ಒಂದು ಲಿಫ್ಟ್ ಹೊಂದಿದೆ. ಪ್ರತಿ ಅಂಗಡಿಗಳ ಬಳಿ ಫೈಯರ್ ಸೇಫ್ಟಿ ಸಿಲಿಂಡಾರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿರುವ ಭೂಗತ ಮಾರುಕಟ್ಟೆಯಿಂದ ಬೀದಿಬದಿ ವ್ಯಾಪರಿಗಳಿಗೆ ಅನುಕೂಲವಾಗಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡ ಪರಿಹಾರವಾಗಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಹೆಚ್ಚಳ: ಸೊಳ್ಳೆ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಸಿದ ಬಿಬಿಎಂಪಿ
ಭೂಗತ ಪಾಲಿಕ ಬಜಾರ್ ನಿರ್ಮಾಣದಿಂದ 20-30 ವರ್ಷಗಳಿಂದ ಬೀದಿಬದಿಯಲ್ಲೇ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿರುವ ವ್ಯಾಪಾರಿಗಳು ಸಂತೋಷಗೊಂಡಿದ್ದಾರೆ. ಇಷ್ಟು ದಿನ ಮಳೆ,ಗಾಳಿ ಬಿಸಿಲಿನಲ್ಲಿ ವ್ಯಾಪಾರ ಮಾಡುತ್ತ ಜೀವನ ನಡೆಸಿದ್ದೇವೆ. ಇನ್ಮುಂದೆ ಈ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಎಂದು ವ್ಯಾಪರಸ್ಥರು ಸಂತಸ ವ್ಯಕ್ತಪಡಿಸಿದರು.
ಈ ಹವಾನಿಯಂತ್ರಿತ ಪಾಲಿಕೆ ಬಜಾರ್ನಿಂದ ವ್ಯಾಪಾರಸ್ಥರಿಗೆ ಮಾತ್ರವಲ್ಲದೆ ಗ್ರಾಹಕರಿಗೂ ತುಂಬ ಅನುಕೂಲವಾಗಲಿದೆ. ರಸ್ತೆಬದಿಯಲ್ಲಿ ವಸ್ತುಗಳನ್ನ ಕೊಳ್ಳುವುದಕ್ಕೆ ಗ್ರಾಹಕರು ಹೆಣಗುತ್ತಿದ್ದರು. ಟ್ರಾಫಿಕ್ ಮಧ್ಯೆ ವಸ್ತುಗಳನ್ನು ಖರೀದಿಸಲು ಗ್ರಾಹಕರಿಗೆ ಕಿರಿಯಾಗುತ್ತಿತ್ತು. ಇದರಿಂದ ಸಾಕಷ್ಟು ಬಾರಿ ಗ್ರಾಹಕರು ವಾಪಸ್ಸು ಹೋಗಿರುವ ಉದಾಹರಣೆಗಳು ಇವೆ. ಆದರೆ, ಪಾಲಿಕೆ ಬಜಾರ್ನಿಂದ ಗ್ರಾಹಕರು ಪರದಾಡುವುದು ತಪ್ಪುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Mon, 26 August 24