ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗೋ ಸಮಯದಲ್ಲಿ ಬಾಹ್ಯಾಕಾಶಕ್ಕೆ ಹೋಗಬಹುದು, ಪ್ರಿಯಾಂಕ್ ಖರ್ಗೆ ಎದುರು ಶುಭಾಂಶು ನಗೆ ಚಟಾಕಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಶೃಂಗಸಭೆಯಲ್ಲಿ ಗಗನಯಾತ್ರಿ ಶುಭಾಂಶು ಶುಕ್ಲ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿರುವ ಅವರು ‘‘ಬಾಹ್ಯಾಕಾಶದಿಂದ ಬೆಂಗಳೂರಿಗೆ ಬರುವುದು ಸುಲಭ ಆದರೆ ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವುದು ತುಂಬಾ ಕಷ್ಟ’’ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಸಚಿವ ಪ್ರಿಯಾಂಕ್ ಖರ್ಗೆ ಎದುರೇ ನಗೆ ಚಟಾಕಿ ಹಾರಿಸಿದರು. ಮಾರತ್ತಹಳ್ಳಿಯಿಂದ ಮಾದಾವರ ತಲುಪುವ ಸಮಯಕ್ಕಿಂತ ಬೇಗ ಬಾಹ್ಯಾಕಾಶವನ್ನೇ ತಲುಪಬಹುದು ಎಂದು ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 21: ‘‘ಬಾಹ್ಯಾಕಾಶ(Space)ದಿಂದ ಬೆಂಗಳೂರಿಗೆ ಬರುವುದು ಸುಲಭ ಆದರೆ ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವುದು ತುಂಬಾ ಕಷ್ಟ’’ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಸಚಿವ ಪ್ರಿಯಾಂಕ್ ಖರ್ಗೆ ಎದುರೇ ನಗೆ ಚಟಾಕಿ ಹಾರಿಸಿದರು. ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬಿಐಇಸಿಯಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾರತ್ತಹಳ್ಳಿಯಿಂದ ಮಾದಾವರ ತಲುಪುವ ಸಮಯಕ್ಕಿಂತ ಬೇಗ ಬಾಹ್ಯಾಕಾಶವನ್ನೇ ತಲುಪಬಹುದು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಇನ್ನುಮುಂದೆ ಇಷ್ಟೊಂದು ಸಂಚಾರದಟ್ಟಣೆಯಾಗದಂತೆ ನೋಡಿಕೊಳ್ಳುತ್ತೇವೆ ಭರವಸೆ ನೀಡಿದರು. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿ ಮತ್ತು ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2027 ರಲ್ಲಿ ಉಡಾವಣೆ ಮಾಡಲು ಯೋಜಿಸಲಾದ ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಾದ ಗಗನಯಾನಕ್ಕೆ ಆಯ್ಕೆಯಾದ ಮತ್ತು ತರಬೇತಿ ಪಡೆದ ನಾಲ್ವರು ಗಗನಯಾತ್ರಿಗಳಲ್ಲಿ ಅವರು ಒಬ್ಬರು.
ಈ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಪ್ರಮುಖ ಅಂಶವಾದ ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ ಸಾವಿರಾರು ಭಾಗವಹಿಸುವವರನ್ನು ಆಕರ್ಷಿಸಿತು. ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹಲವು ನವೋದ್ಯಮಗಳು ಆರಂಭವಾಗಿವೆ. ಸಾಕಷ್ಟು ಅವಕಾಶಗಳಿವೆ. ವಿಕಸಿತ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ.
ಮತ್ತಷ್ಟು ಓದಿ: ಬಾಹ್ಯಾಕಾಶದಿಂದ ಭೂಮಿಗೆ ಹೊರಡುವ ಮುನ್ನ ಗಗನಯಾತ್ರಿ ಶುಭಾಂಶು ಭಾರತದ ಬಗ್ಗೆ ಏನು ಹೇಳಿದ್ರು?
ತಂತ್ರಜ್ಞಾನವು ಬಾಹ್ಯಾಕಾಶ ಸಂಶೋಧನೆಗಳಿಗೆ ಅನುವು ಮಾಡಿಕೊಟ್ಟಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.ಭೂಮಿಗೆ ಮರಳುವಾಗ ಕ್ಯಾಪ್ಸುಲ್ ಅಗ್ನಿಯ ಚೆಂಡಿನಂತಾಗುತ್ತದೆ. ಸುಮಾರು 4,000 ಡಿಗ್ರಿ ತಾಪಮಾನ ಇರುತ್ತದೆ. ನೀವು ಭೂಮಿಯ ಗುರುತ್ವಾಕರ್ಷಣೆಗೆ ವ್ಯಾಪ್ತಿಗೆ ಬಂದ ಬಳಿಕ 20 ದಿನಗಳ ಕಾಲ ನಿಮ್ಮ ದೇಹ ಗುರುತ್ವಬಲವನ್ನು ಮರೆತಿರುತ್ತದೆ.
ಭೂಮಿಯ ಗುರುತ್ವ ಬಲಕ್ಕೆ ಹೊಂದಿಕೊಳ್ಳಲು 4-5 ದಿನಗಳು ಬೇಕಾಗುತ್ತದೆ. ಬಂದ ಬಳಿಕ 20 ದಿನ ನಿಮಗೆ ನಡೆಯಲು ಆಗುವುದಿಲ್ಲ. ನಿಮಗೆ ಬಲ ಇದ್ದರೂ ನಡೆಯಲು ಆಗುವುದಿಲ್ಲ. ಸಾಕಷ್ಟು ಸವಾಲಿರುತ್ತದೆ ಎಂದು ವಿವರಿಸಿದರು.
ಶುಭಾಂಶು ಶುಕ್ಲಾ ಮಾತು
Group Capt. Shubhanshu Shukla, began his session at #BTS2025 with a sarcastic remark on #bengalurutraffic, saying he had taken “three times longer to reach the venue from Marathahalli, than the duration of his presentation.”@gagan_shux pic.twitter.com/1s2ewScM2J
— Elezabeth Kurian (@ElezabethKurian) November 20, 2025
ಇದೇ ವೇಳೆ ಶುಭಾಂಶು ಶುಕ್ಲಾ, ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎಂಬ ವಿಡಿಯೋವನ್ನು ಪ್ರದರ್ಶಿಸಿದರು. ಉತ್ತರಕ್ಕೆ ಸಾಗುತ್ತಿದ್ದಂತೆ ಬೆಳಕಿನ ತೇಜಸ್ಸು, ಗಂಭೀರವಾಗಿ ಕುಳಿತ ಹಿಮಾಲಯ ಗೋಚರಿಸುತ್ತದೆ.
ಭಾರತದ ನಗರಗಳು ಅದ್ಭುತವಾಗಿ ಕಾಣಿಸುತ್ತದೆ. ಬಳಿಕ ಸೂರ್ಯನ ಕಿರಣಗಳು ಆವರಿಸುವ ವಿಹಂಗಮ ನೋಟವನ್ನು ಪ್ರದರ್ಶಿಸಿದರು. ರಾತ್ರಿ ವೇಳೆಯಲ್ಲಿ ಭಾರತದ ನಗರಗಳು ಹೇಗೆ ಕಾಣಿಸುತ್ತದೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದರು. ಬಾಹ್ಯಾಕಾಶದಿಂದ ರಾತ್ರಿ ವೇಳೆ ಬೆಂಗಳೂರು ಜಗಮಗಿಸುತ್ತದೆ ಎಂದು ವಿವರಿಸಿದರು. ಈ ವೇಳೆ ಅಲ್ಲಿ ಸೇರಿದ್ದ ಸಾವಿರಾರರು ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:54 am, Fri, 21 November 25




