Bengaluru: ಅಪಘಾತ ತಪ್ಪಿಸಲು ಬಿಎಂಟಿಸಿ ಬಸ್​ ಚಾಲಕರಿಗೆ ವಿಶೇಷ ತರಬೇತಿ

ಬೆಂಗಳೂರಿನಲ್ಲಿ ಇತ್ತೀಚಿಗೆ ಬಿಎಂಟಿಸಿ ಬಸ್​ಗಳೇ ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿವೆ. ಇದನ್ನು ತಡೆಯಲು ಸಾರಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಅಪಘಾತ ಕಡಿಮೆಯಾಗಿಲ್ಲ. ಇದೀಗ ಇಲಾಖೆ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ. ಏನದು ಪ್ರಯೋಗ? ಇಲ್ಲಿದೆ ಮಾಹಿತಿ

Bengaluru: ಅಪಘಾತ ತಪ್ಪಿಸಲು ಬಿಎಂಟಿಸಿ ಬಸ್​ ಚಾಲಕರಿಗೆ ವಿಶೇಷ ತರಬೇತಿ
ಚಾಲಕರಿಗೆ ವಿಶೇಷ ತರಬೇತಿ
Follow us
| Updated By: ವಿವೇಕ ಬಿರಾದಾರ

Updated on: Jun 02, 2024 | 8:16 AM

ಬೆಂಗಳೂರು, ಜೂನ್​ 02: ಬೃಹತ್ ಬೆಂಗಳೂರು ಮಹಾನಗರ ಸಾರಿಗೆ (BMTC) ಅಂದರೆ ನಂಬಿಕೆ, ಬಿಎಂಟಿಸಿ ಬೆಂಗಳೂರಿಗರ (Bengaluru) ಹಾರ್ಟ್​​ ಫೇವರೇಟ್. ಆದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಅಂದರೆ ವಾಹನ ಸವಾರರು ಭಯ ಬೀಳುತ್ತಿದ್ದಾರೆ. ಇದಕ್ಕೆ ಕಾರಣ ಬಿಎಂಟಿಸಿ ಬಸ್​ಗಳಿಂದ ಆಗುತ್ತಿರುವ ಅಪಘಾತಗಳು. ಇದನ್ನು ತಪ್ಪಿಸಲು ಬಿಎಂಟಿಸಿ ಬಸ್​ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ನಗರದಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಬಿಎಂಟಿಸಿ ಸಿಮ್ಯುಲೇಟರ್‌ ಮೂಲಕ ಚಾಲಕರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಇದು ಬಸ್‌ ಚಲಾಯಿಸಿದ ಅನುಭವವನ್ನೇ ನೀಡುವ ಡಿಜಿಟಲ್ ವ್ಯವಸ್ಥೆಯ ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿರುವ ಯಂತ್ರವಾಗಿದೆ. ಈ ಸಿಮ್ಯುಲೇಟರ್‌ ಯಂತ್ರ ಬಿಎಂಟಿಸಿಯ ವಡ್ಡರಹಳ್ಳಿ ಚಾಲಕರ ತರಬೇತಿ ಕೇಂದ್ರದಲ್ಲಿದೆ. ಬಸ್ ಮಾದರಿಯಲ್ಲಿಯೇ ಚಕ್ರ, ಸೀಟು, ಸೀಟ್ ಬೆಲ್ಟ್, ಆಯಕ್ಸಿಲೇಟರ್, ಬ್ರೇಕ್, ಕ್ಲಚ್ ಹೊಂದಿದ್ದು ಎದುರಿಗೆ ಎಲ್.ಇ.ಡಿ ಸ್ಕ್ರೀನ್‌ ಇರುತ್ತದೆ.

ಇದನ್ನೂ ಓದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು! ಕನ್ನಡ ಬಾರದವರ ಜತೆ ಕಂಡಕ್ಟರ್​ಗಳು ಕಂಗಾಲು

ಸಿಮ್ಯುಲೇಟರ್​ನಲ್ಲಿ ರಸ್ತೆ ಮೇಲೆ ಬಸ್‌ ಚಲಾಯಿಸಿದ ಅನುಭವ ಆಗುತ್ತದೆ. ದಿಣ್ಣೆಗಳನ್ನು ಏರುವಾಗ, ಇಳಿಯುವಾಗ, ತಿರುವುಗಳಲ್ಲಿ ಹೇಗೆ ವಾಹನ ಚಲಾಯಿಸಬೇಕು ಅತಿ ವಾಹನ ದಟ್ಟಣೆ ಇರುವ ಬೆಂಗಳೂರಿನಂತಹ ನಗರದಲ್ಲಿ ಹಿಂದೆ ಮುಂದೆ ವಾಹನಗಳು ಇರುವಾಗ ಹೇಗೆ ಚಾಲನೆ ಮಾಡಬೇಕು? ಎಂಬುದನ್ನೆಲ್ಲ ಹೇಳಿ ಕೊಡಲಾಗುತ್ತದೆ. ಚಾಲನಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಸಲಾಗುತ್ತದೆ.

ವಿಶೇಷತ ತರಬೇತಿ ಕೇಂದ್ರ

ಮೊದಲಿಗೆ ಚಾಲಕರಿಗೆ ಕೈ ಮೂಲಕ ನೀಡಬೇಕಾದ ಸೂಚನೆಗಳ ಬಗ್ಗೆ, ಸಂಚಾರ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಿರುವ ಚಿಹ್ನೆಗಳ ಮಾಹಿತಿ, ಕ್ಲಚ್‌, ಗೇರ್‌, ಬ್ರೇಕ್‌, ಆಯಕ್ಸಿಲೇಟರ್‌ಗಳ ಬಗ್ಗೆ ತಜ್ಞರು ಹೇಳಿಕೊಡುತ್ತಾರೆ. ಬಳಿಕ ಸಿಮ್ಯುಲೇಟರ್‌ ಕೊಠಡಿಯಲ್ಲಿ ಚಾಲನೆ ಕಲಿಸುತ್ತಾರೆ. ನಂತರ ಬಸ್​ಗಳಲ್ಲೂ ತರಬೇತಿ ನೀಡುತ್ತಾರೆ. ಇಂಧನ ಉಳಿತಾಯ ಮಾಡಬೇಕಿದ್ದರೆ ಆಕ್ಸಿಲೇಟರ್‌ ಹೇಗೆ ಬಳಸಬೇಕು, ಕ್ಲಚ್‌, ಗೇರ್‌ಗಳನ್ನು ಹೇಗೆ ಬಳಸಿದರೆ ಇಂಧನ ಉಳಿಸಬಹುದು ಎಂಬುದನ್ನು ಕೂಡ ತಜ್ಞರು ಹೇಳಿಕೊಡುತ್ತಾರೆ. ಸೀಟ್‌ಬೆಲ್ಟ್‌ನಿಂದ ಹಿಡಿದು ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಈ ಯಂತ್ರ ಚಾಲನೆಯಾಗುವುದಿಲ್ಲ. ಆನಂತರವೂ ಸಣ್ಣ ತಪ್ಪಾದರೂ ಗುರುತು ಆಗುವುದರಿಂದ ತಿದ್ದಿಕೊಳ್ಳಲು ಸುಲಭವಾಗುತ್ತದೆ. ಹೊಸಬರಿಗೆ ಮತ್ತು ಚಾಲನೆಯಲ್ಲಿ ಪದೇ ಪದೇ ತಪ್ಪು ಮಾಡುವವರಿಗೂ ‘ಸಿಮ್ಯುಲೇಟರ್‌’ ಡಿಜಿಟಲ್‌ ಯಂತ್ರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಬಿಎಂಟಿಸಿ ಡ್ರೈವಿಂಗ್ ಸ್ಕೂಲ್ ಸೂಪರ್ವೈಸರ್ ಮಧು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಬಿಜೆಪಿಗೆ ವಾಪಸ್ಸಾಗುವಂತೆ ಕರೆ ಬರುತ್ತಿವೆ ಎಂದು ಪುನಃ ಹೇಳಿದ ಈಶ್ವರಪ್ಪ
ಬಿಜೆಪಿಗೆ ವಾಪಸ್ಸಾಗುವಂತೆ ಕರೆ ಬರುತ್ತಿವೆ ಎಂದು ಪುನಃ ಹೇಳಿದ ಈಶ್ವರಪ್ಪ
ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ
ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ
ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ
ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ
ಮಾಧ್ಯಮಗಳಿಗಾಗಿ ತನಿಖೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಪರಮೇಶ್ವರ್
ಮಾಧ್ಯಮಗಳಿಗಾಗಿ ತನಿಖೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಪರಮೇಶ್ವರ್
ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುಕನ ಹುಚ್ಚಾಟ, ವಾಹನ ಸವಾರಿಗೆ ಸಮಸ್ಯೆ
ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುಕನ ಹುಚ್ಚಾಟ, ವಾಹನ ಸವಾರಿಗೆ ಸಮಸ್ಯೆ
ಅವೈಜ್ಞಾನಿಕ ಕಾಮಗಾರಿಯಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ನಷ್ಟ
ಅವೈಜ್ಞಾನಿಕ ಕಾಮಗಾರಿಯಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ನಷ್ಟ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?