ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು! ಕನ್ನಡ ಬಾರದವರ ಜತೆ ಕಂಡಕ್ಟರ್​ಗಳು ಕಂಗಾಲು

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಈಗ ಕೇರಳದ ಮಲೆಯಾಳಿ ಹುಡುಗರು ಹೆಚ್ಚೆಚ್ಚು ಮಂದಿ ಚಾಲಕರಾಗಿ ನೇಮಕಗೊಳ್ಳುತ್ತಿದ್ದಾರೆ. ಇದರಿಂದ ಕಂಡಕ್ಟರ್​​ಗಳಿಗೂ ಸಮಸ್ಯೆ ಎದುರಾಗಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಅನನುಭವಿಗಳು ಚಾಲಕರಾಗಲು ಕಾರಣವೇನು? ಈ ಬಗ್ಗೆ ಸಿಬ್ಬಂದಿ, ಸಾರ್ವಜನಿಕರು ಹೇಳೋದೇನು? ಇಲ್ಲಿದೆ ವಿವರ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು! ಕನ್ನಡ ಬಾರದವರ ಜತೆ ಕಂಡಕ್ಟರ್​ಗಳು ಕಂಗಾಲು
ಬಿಎಂಟಿಸಿ ಎಲೆಕ್ಟ್ರಿಕ್ ಬಸ್​​ಗಳು
Follow us
Kiran Surya
| Updated By: Ganapathi Sharma

Updated on: May 30, 2024 | 7:18 AM

ಬೆಂಗಳೂರು, ಮೇ 30: ಬೆಂಗಳೂರಿನ ಸರ್ಕಾರಿ ಸಾರಿಗೆ ಸಂಸ್ಥೆ ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್​​ಗಳಿಗೆ (Electric Buses) ಗುತ್ತಿಗೆ ಆಧಾರದಲ್ಲಿ ಕನ್ನಡ ಬರದ ಮತ್ತು ಅನುಭವವೇ ಇಲ್ಲದ ಕೇರಳದ ಸಣ್ಣಪುಟ್ಟ ಹುಡುಗರನ್ನು ಚಾಲಕರನ್ನಾಗಿ ನೇಮಕ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಎಂಟಿಸಿಯಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಬಸ್​ಗಳಿವೆ. 648 ಬಸ್ಸುಗಳನ್ನು ಗುತ್ತಿಗೆ ಆಧಾರದಲ್ಲಿ ಮೂರು ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆ ಬಸ್​ಗಳಿಗೆ ಕಂಡಕ್ಟರ್​​ಗಳು ಬಿಎಂಟಿಸಿಯಿಂದ, ಚಾಲಕರನ್ನು ಮಾತ್ರ ಖಾಸಗಿ ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆದರೆ ಒಂದು ‌ಕಂಪನಿ ಮಾತ್ರ ಚಾಲಕರಿಗೆ 22500 ರೂ. ಹಾಗೂ ವಸತಿ ವ್ಯವಸ್ಥೆ ಮಾಡುತ್ತೇವೆ ಎಂದು ಕೆಲಸಕ್ಕೆ ತೆಗೆದುಕೊಂಡು ಈಗ 18 ಸಾವಿರ ರೂಪಾಯಿ ಮಾತ್ರ ನೀಡುತ್ತಿದೆ ಎನ್ನಲಾಗಿದೆ.

ಈ ಎಲ್ಲ ಕಾರಣಗಳಿಂದ ಚಾಲಕರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಈಗಾಗಲೇ ತುಂಬಾ ಚಾಲಕರು ಕೆಲಸ ಬಿಟ್ಟು ಹೋಗಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಸಮರ್ಪಕ ವೇತನ ಕೊಡದೆ ಕಡಿಮೆ ಸಂಬಳಕ್ಕೆ ಮಲಯಾಳಿ ಚಾಲಕರನ್ನು ನೇಮಕ ಮಾಡಲಾಗುತ್ತಿದೆ. ಬಿಎಂಟಿಸಿಯ ಕಂಡಕ್ಟರ್​​ಗಳಿಗೆ ಮಲೆಯಾಳಂ ಬರುವುದಿಲ್ಲ, ಕೇರಳದ ಮಲೆಯಾಳಿ ಡ್ರೈವರ್ ಗಳಿಗೆ ಕನ್ನಡ ಬರುವುದಿಲ್ಲ. ಇದು ಕಂಡಕ್ಟರ್​​ಗಳ ತಲೆನೋವಿಗೆ ಕಾರಣವಾಗಿದೆ. ಬಿಎಂಟಿಸಿಯ ಅಧಿಕಾರಿಗಳ ಕಮಿಷನ್ ಆಸೆಗೆ ಕಂಡಕ್ಟರ್​​ಗಳು ಹಾಗೂ ಪ್ರಯಾಣಿಕರು ಸಂಕಷ್ಟಕ್ಕೀಡಾಗುವಂತಾಗಿದೆ.

ಅನನುಭವಿ ಚಾಲಕರಿಂದ ಅಪಘಾತ ಹೆಚ್ಚಳ

ಅನನುಭವಿ ಎಲೆಕ್ಟ್ರಿಕ್ ಬಸ್ ಚಾಲಕರಿಂದ ಸಾಕಷ್ಟು ಅಪಘಾತಗಳೂ ಆಗುತ್ತಿವೆ. ಇದರಿಂದ ಬಿಎಂಟಿಸಿಗೆ ಕೆಟ್ಟ ಹೆಸರು ಎಂದು ಕಂಡಕ್ಟರ್​​ಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಎಂಟಿಸಿಯಲ್ಲಿ ಎಲ್ಲಾ ಕಂಡಕ್ಟರ್​​ಗಳಿಗೂ ಬೆಂಗಳೂರಿನ ರೂಟ್​ಗಳು ತಿಳಿದಿವೆ. ಆದರೆ ಈ ಕೇರಳದ ಮಲಯಾಳಿ ಚಾಲಕರಿಗೆ ಬಲಕ್ಕೆ ಎಂದರೂ ಗೊತ್ತಾಗುತ್ತಿಲ್ಲ, ಎಡಕ್ಕೆ ಅಂದರೂ ಗೊತ್ತಿಲ್ಲ ಎಂದು ಕಂಡಕ್ಟರ್​​ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಯಮ ಉಲ್ಲಂಘಿಸಿ ಚಾಲಕರ ನೇಮಕ

ಎರಡು ವಾರಗಳ ಹಿಂದಷ್ಟೇ, ಸರಿಯಾಗಿ ಸಂಬಳ ನೀಡಿಲ್ಲ ಎಂದು ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​​ಗಳನ್ನು ನಿಲ್ಲಿಸಿ ಚಾಲಕರು ಮುಷ್ಕರ ಮಾಡಿದ್ದರು. ಈಗ ಎಲೆಕ್ಟ್ರಿಕ್ ಬಸ್ ಕಂಪನಿಗಳು ಹದಿನೈದು ಸಾವಿರ ಸಂಬಳಕ್ಕೆ ಕೇರಳದ ಯುವಕರನ್ನು ಕರೆದುಕೊಂಡು ಬಂದು ಎಲೆಕ್ಟ್ರಿಕ್ ಬಸ್​​ಗಳ ಚಾಲನೆಯ ಹೊಣೆ ನೀಡಿವೆ. ಇತ್ತ ಬಿಎಂಟಿಸಿಯಲ್ಲಿ ಚಾಲಕರಾಗಬೇಕು ಎಂದರೆ ನಿಯಮ ಪ್ರಕಾರ ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು. ಹೆವಿ ಡ್ರೈವಿಂಗ್ ಲೈಸನ್ಸ್ ಇರಬೇಕು ಮತ್ತು ಎರಡು ವರ್ಷ ಅನುಭವ ಇರಬೇಕು. ಆದರೆ ಖಾಸಗಿ ಎಲೆಕ್ಟ್ರಿಕ್ ಬಸ್ ಕಂಪನಿಗಳು ನಿಯಮ ಉಲ್ಲಂಘಿಸಿ ಅನುಭವವೇ ಇಲ್ಲದ ಸಣ್ಣಪುಟ್ಟ ಹುಡುಗರನ್ನು ನೇಮಕ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಗ್ರೀನ್ ಮತ್ತು ಕ್ಲೀನ್ ಬೆಂಗಳೂರಿಗಾಗಿ ತಂತ್ರಜ್ಞಾನದ ಮೊರೆ: ಸಮಸ್ಯೆ ಪತ್ತೆಹಚ್ಚಿ ರಿಪೋರ್ಟ್ ನೀಡಲಿದೆ ಎಐ

ಎಲೆಕ್ಟ್ರಿಕ್ ಬಸ್ ಕಂಪನಿಗಳು ಕಡಿಮೆ ವೇತನಕ್ಕೆ ಕನ್ನಡ ಭಾಷೆ ಬರದ ಸಣ್ಣಪುಟ್ಟ ಯುವಕರಿಗೆ ನೂರಾರು ಜನ‌ ಪ್ರಯಾಣ ಮಾಡುವ ಬಸ್ ಕೊಟ್ಟು ಕರ್ತವ್ಯ ಮಾಡಿಸಲು ಮುಂದಾಗಿರುವುದು ನಿಜಕ್ಕೂ ದುರಂತ. ಬಿಎಂಟಿಸಿ ಎಂಡಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಕಂಡಕ್ಟರ್​ಗಳು, ಪ್ರಯಾಣಿಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ