2021ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದ ರಾಜ್ಯ ಸರ್ಕಾರ; 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್

| Updated By: preethi shettigar

Updated on: Mar 30, 2022 | 7:10 PM

ಸಿಐಡಿ ಡಿವೈಎಸ್​ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್​ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್​ಪೆಕ್ಟರ್​ಗಳಾದ ಗೋವಿಂದಪುರ ಠಾಣೆ ಪಿಐ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಮಾಡಲಾಗಿದೆ.

2021ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದ ರಾಜ್ಯ ಸರ್ಕಾರ; 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್
ವಿಧಾನಸೌಧ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ (State Government) ಪ್ರಕಟಿಸಿದೆ. 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್ ಪ್ರಕಟವಾಗಿದೆ. ಪೊಲೀಸ್ ಇಲಾಖೆಯಲ್ಲಿ(Police department) ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್​ಪಿ, ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗೆ ಪದಕ ನೀಡಲಾಗುತ್ತಿದೆ. ಸಿಐಡಿ ಡಿವೈಎಸ್​ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್​ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್​ಪೆಕ್ಟರ್​ಗಳಾದ ಗೋವಿಂದಪುರ ಠಾಣೆ ಪಿಐ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಮಾಡಲಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕ (Medal) ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಪೊಲೀಸ್​ ಇಲಾಖೆಯಲ್ಲಿ ವೇತನ ತಾರತಮ್ಯ ಸರಿ ಮಾಡುವ ಬಗ್ಗೆ ಸಿಎಂ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾತನಾಡುತ್ತೇನೆ: ಸಚಿವ ಆರಗ ಜ್ಞಾನೇಂದ್ರ

ವಿಧಾನಪರಿಷತ್​​: ಪೊಲೀಸ್​ ಇಲಾಖೆಯಲ್ಲಿ ವೇತನ ತಾರತಮ್ಯ ಸರಿ ಮಾಡುವ ಬಗ್ಗೆ ಸಿಎಂ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ. ಭತ್ಯೆಗಳನ್ನ ಈಗಾಗಲೇ ಹೆಚ್ಚಳ ಮಾಡಲಾಗಿದೆ. ಸಮವಸ್ತ್ರ ಭತ್ಯೆ, ಸಾರಿಗೆ ಭತ್ಯೆ, ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, 2016 ರಲ್ಲಿ ಔರಾದ್ಕರ್ ಸಮಿತಿ ನೇಮಕ ಮಾಡಲಾಗಿತ್ತು. 2019 ರಿಂದ ವರದಿ ಜಾರಿ ಮಾಡಲಾಗಿದೆ. ಈ ವರದಿಯಿಂದ 80536 ಸಿಬ್ಬಂದಿಗೆ ಅನುಕೂಲ ಆಗಿದೆ. ಯಾರಿಗೆ ತಾರತಮ್ಯ ಆಗಿದೆ ಅದನ್ನ ಸರಿ ಮಾಡಲು ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಶೀಘ್ರವೇ ಈ ಬಗ್ಗೆ ಪರಿಹಾರ ಕ್ರಮ ತೆಗೆದುಕೊಳ್ತೀವಿ. ಭತ್ಯೆಗಳನ್ನ ಈಗಾಗಲೇ ಹೆಚ್ಚಳ ಮಾಡಲಾಗಿದೆ. ಯಾರಿಗೆ ತಾರತಮ್ಯ ಆಗಿದೆ ಅದನ್ನ ಸರಿ ಮಾಡೋ ಕೆಲಸ ಸಿಎಂ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀನಿ ಎಂದು ಹೇಳಿದ್ದಾರೆ.

ಪೊಲೀಸ್​ ಇಲಾಖೆ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಚರ್ಚೆಗೆ ಸರ್ಕಾರದ ಪರ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ

ಪೊಲೀಸ್​ ಇಲಾಖೆ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಚರ್ಚೆಗೆ ಸರ್ಕಾರದ ಪರ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ. ಪೊಲೀಸ್ ಇಲಾಖೆಯನ್ನು ಹಾಳುಮಾಡಿದ್ದು ಯಾರು? ಕೆಂಪಯ್ಯ ಎಂಬ ನಿವೃತ್ತ ಪೊಲೀಸ್ ಅಧಿಕಾರಿ ಕೈಯಲ್ಲಿ ಕೊಟ್ಟಿದ್ರಲ್ಲ ಅಧಿಕಾರಾನಾ, ಅತ್ಯುತ್ತಮ ಆಡಳಿತಗಾರರಾಗಿದ್ದ ಡಾ.ಪರಮೇಶ್ವರ್, ಕೆ.ಜೆ.ಜಾರ್ಜ್​ರನ್ನು ನೀವು ಡಮ್ಮಿ ಮಾಡಿಬಿಟ್ರಲ್ಲ. ಪುನೀತ್ ಅಂತಿಮ ದರ್ಶನಕ್ಕೆ 25 ಲಕ್ಷ ಜನ ಬಂದಿದ್ದರು. ಒಂದೇ ಒಂದು ಕಡೆಯೂ ಕೂಡ ಪೊಲೀಸರ ವೈಫಲ್ಯ ಆಗಲಿಲ್ಲ. ಆದರೆ ರಾಜಕುಮಾರ್ ಅಂತಿಮ ದರ್ಶನ ವೇಳೆ ಏನು ಪರಿಸ್ಥಿತಿ ಆಗಿತ್ತು ಅಂತ ನಮಗೆಲ್ಲ ಗೊತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

Padma Awards 2022: ನೀರಜ್ ಚೋಪ್ರಾ, ಸೋನು ನಿಗಮ್, ಕರ್ನಾಟಕದ ಅಬ್ದುಲ್ ಖಾದರ್​ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

Kannada Rajyotsava: 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವರ ಇಲ್ಲಿದೆ

Published On - 6:58 pm, Wed, 30 March 22