AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಎಸ್ಎಲ್​ಸಿ ಪರೀಕ್ಷೆ: ಮೊದಲ ದಿನ 20 ಸಾವಿರ, 2ನೇ ದಿನ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಾರಣ ಏನು?

ಮೊದಲ ದಿನಕ್ಕಿಂತ ಇಂದು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿದ್ದಾರೆ. ಮೊದಲ ದಿನದ ಪರೀಕ್ಷೆಯಲ್ಲಿ 20,994 ವಿದ್ಯಾರ್ಥಿಗಳು ಗೈರಾಗಿದ್ದರು. ಇಂದು ಬರೋಬ್ಬರಿ 22,063 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾಹಿತಿ ನೀಡಿದೆ.

ಎಸ್ಎಸ್ಎಲ್​ಸಿ ಪರೀಕ್ಷೆ: ಮೊದಲ ದಿನ 20 ಸಾವಿರ, 2ನೇ ದಿನ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಾರಣ ಏನು?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 30, 2022 | 5:08 PM

Share

ಬೆಂಗಳೂರು: ಎರಡನೇ ದಿನದ ಎಸ್ಎಸ್ಎಲ್ಸಿ ಪರೀಕ್ಷೆಗೆ(SSLC Exam) ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ದ್ವಿತೀಯ ಭಾಷೆ ಪರೀಕ್ಷೆಗೆ 22,063 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಮೊದಲ ದಿನಕ್ಕಿಂತ ಇಂದು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿದ್ದಾರೆ. ಅನಾರೋಗ್ಯ ಹಿನ್ನೆಲೆ 195 ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಬಾಕಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವ ಮಾಹಿತಿ ಸಿಕ್ಕಿದೆ. ಮೊದಲ ದಿನದ ಪರೀಕ್ಷೆಯಲ್ಲಿ 20,994 ವಿದ್ಯಾರ್ಥಿಗಳು ಗೈರಾಗಿದ್ದರು. ಇಂದು ಬರೋಬ್ಬರಿ 22,063 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾಹಿತಿ ನೀಡಿದೆ.

ವಿದ್ಯಾರ್ಥಿಗಳು ಯಾವುದೇ ಗೊಂದಲ ಇಲ್ಲದೇ ಪರೀಕ್ಷೆ ಬರೆಯುತ್ತಿದ್ದಾರೆ ಇನ್ನು ಬಳ್ಳಾರಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿದ್ದಾರೆ. ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ SSLCಯಲ್ಲಿ 23 ಸಾವಿರ ವಿದ್ಯಾರ್ಥಿಗಳಿದ್ದಾರೆ. ಯಾವುದೇ ಗೊಂದಲ ಇಲ್ಲದೇ ಪರೀಕ್ಷೆ ಬರೆಯುತ್ತಿದ್ದಾರೆ. ಹಿಜಾಬ್ ಸೇರಿದಂತೆ ಯಾವುದೇ ಗೊಂದಲ ಇಲ್ಲ ಎಂದರು.

ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರಾಗಿದ್ದಕ್ಕೆ ಹಿಜಾಬ್ ಕಾರಣಾನಾ? ಮಾರ್ಚ್ 28ರಿಂದ ಆರಂಭವಾಗಿರೋ ಎಸ್ಎಸ್ಎಲ್ಸಿ ಪರೀಕ್ಷೆ ಮೊದಲ ದಿನವೇ ಶಾಕ್ ಕಾದಿತ್ತು. ವಿದ್ಯಾರ್ಥಿಗಳ ಭವಿಷ್ಯವನ್ನೇ ನಿರ್ಧರಿಸೋ ಎಸ್ಎಸ್ಎಲ್ಸಿ ಎಕ್ಸಾಂಗೆ ಸಾವಿರಾರು ಸ್ಟೂಡೆಂಟ್ಸ್ ಚಕ್ಕರ್ ಹೊಡೆದಿದ್ರು. ಅದ್ರಲ್ಲೂ ರಾಜ್ಯದಲ್ಲಿ ಪರೀಕ್ಷೆಗೆ ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಸ್ಟೂಡೆಂಟ್ಸ್ ಹಾಜರಾಗಿಲ್ಲವಂತೆ. ಇಷ್ಟೊಂದು ವಿದ್ಯಾರ್ಥಿಗಳು ವೈಯಕ್ತಿಕ ಕಾರಣದಿಂದ ಎಕ್ಸಾಂಗೆ ಗೈರಾದ್ರಾ? ಇಲ್ಲ ಹಿಜಾಬ್ ಕಾರಣದಿಂದ ಏನಾದ್ರೂ ಬಂದಿಲ್ವಾ ಅನ್ನೋ ಚರ್ಚೆ ಈಗ ಹೆಚ್ಚಾಗಿದೆ.

SSLC ಎಕ್ಸಾಂಗೆ ಗೈರಾದವರು ರಾಜ್ಯಾದ್ಯಂತ ಮಾರ್ಚ್ 28ರಂದು ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ಮೊದಲ ದಿನವೇ 20,994 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ 585 ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣದಲ್ಲಿ 1142, ಬೆಂ.ಗ್ರಾಮಾಂತರ ಭಾಗದಲ್ಲಿ 132 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಚಿತ್ರದುರ್ಗದಲ್ಲಿ 510, ಬೆಳಗಾವಿಯಲ್ಲಿ 430, ಬಾಗಲಕೋಟೆಯಲ್ಲಿ 522, ರಾಮನಗರ ಜಿಲ್ಲೆಯಲ್ಲಿ 303, ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ 267 ಸ್ಟೂಡೆಂಟ್ಸ್ ಫಸ್ಟ್ ಡೇ SSLC ಪರೀಕ್ಷೆಗೆ ಬಂದಿಲ್ಲ. ಇನ್ನು, ತುಮಕೂರಲ್ಲಿ 611, ಕೋಲಾರದಲ್ಲಿ 310, ವಿಜಯಪುರದಲ್ಲಿ 702 ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿಲ್ಲ. ಹಾವೇರಿಯಲ್ಲಿ 490, ದಾವಣಗೆರೆಯಲ್ಲಿ 286 ಸ್ಟೂಡೆಂಟ್ಸ್ ಗೈರಾಗಿದ್ದಾರೆ ಎನ್ನಲಾಗಿದೆ.. ಇನ್ನು, ಕಳೆದ ವರ್ಷ SSLC ಎಕ್ಸಾಂಗೆ ಕೇವಲ 3,769 ವಿದ್ಯಾರ್ಥಿಗಳಷ್ಟೇ ಗೈರಾಗಿದ್ರಂತೆ.

‘ವಿದ್ಯಾರ್ಥಿಗಳ ಗೈರಿಗೂ, ಹಿಜಾಬ್ಗೂ ಸಂಬಂಧವಿಲ್ಲ’ ಮೊದಲ ದಿನದ SSLC ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಗೈರಾಗಿರೋ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ರು. ಕಳೆದ ವರ್ಷದಂತೆ ಈ ವರ್ಷವೂ ಪಾಸ್ ಮಾಡ್ತಾರೆ ಅನ್ನೋದು ಕೆಲವರ ನಂಬಿಕೆಯಾಗಿತ್ತು. ಅನಾರೋಗ್ಯ ಸಮಸ್ಯೆ, ಇತರ ತೊಂದರೆಯಿಂದ ಗೈರಾಗಿರಬಹುದು.. ಇದಕ್ಕೂ ಹಿಜಾಬ್ಗೂ ಯಾವ ಸಂಬಂಧವಿಲ್ಲ ಅಂತಾ ಹೇಳಿದ್ರು.

ಇದನ್ನೂ ಓದಿ: ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ: 3444 ಕೇಂದ್ರಗಳಲ್ಲಿ ಸಕಲ ಸಿದ್ಧತೆ

ಬೆಂಗಳೂರಿನ ಈ ಗೌಡಾಸ್ ಹೋಟೆಲ್ ನಲ್ಲಿ ಹಲಾಲ್ ಕಟ್ ಮಾಂಸಕ್ಕೆ ಆಸ್ಪದವೇ ಇಲ್ಲ ಅನ್ನುತ್ತಾರೆ ಗ್ರಾಹಕರು

Published On - 5:06 pm, Wed, 30 March 22