ಯುವತಿಯರ ಪೊಟೋ ಪಡೆದು, ಆನ್ ಲೈನ್ ಮೂಲಕ ಒಳ್ಳೆಯ ಸಂಬಳ‌ ಕೊಡಿಸೋದಾಗಿ ನಂಬಿಸಿ ಬ್ಲಾಕ್ ಮೇಲ್, ಅರೆಸ್ಟ್

ದೂರು ಹಿನ್ನೆಲೆ ತಮಿಳುನಾಡಿನಲ್ಲಿದ್ದ ಆರೋಪಿಯನ್ನ‌ ಕಾಡುಗೋಡಿ ಪೊಲೀಸರು ಬಂಧಿಸಿ, ಕರೆತಂದಿದ್ದಾರೆ. ವಿಚಾರಣೆ ವೇಳೆ ಇನ್ನೂ ಹಲವು ಅಮಾಯಕ‌ ಯುವತಿಯರಿಗೆ ಇದೇ ರೀತಿ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವತಿಯರ ಪೊಟೋ ಪಡೆದು,  ಆನ್ ಲೈನ್ ಮೂಲಕ ಒಳ್ಳೆಯ ಸಂಬಳ‌ ಕೊಡಿಸೋದಾಗಿ ನಂಬಿಸಿ ಬ್ಲಾಕ್ ಮೇಲ್, ಅರೆಸ್ಟ್
ಯುವತಿಯರ ಪೊಟೋ ಪಡೆದು, ಆನ್ ಲೈನ್ ಮೂಲಕ ಒಳ್ಳೆಯ ಸಂಬಳ‌ ಕೊಡಿಸೋದಾಗಿ ನಂಬಿಸಿ ಬ್ಲಾಕ್ ಮೇಲ್, ಅರೆಸ್ಟ್
TV9kannada Web Team

| Edited By: sadhu srinath

Mar 30, 2022 | 5:54 PM

ಬೆಂಗಳೂರು: ಆನ್ ಲೈನ್ ಮೂಲಕ ಸಾವಿರಾರು‌ ರೂಪಾಯಿ ಸಂಬಳ‌ ಕೊಡಿಸೋದಾಗಿ ನಂಬಿಸಿ, ಯುವತಿಯರಿಗೆ ಬ್ಲಾಕ್ ಮೇಲ್ ಮಾಡಿದ್ದ ತಮಿಳುನಾಡಿನ ಹೊಸೂರು ಮೂಲದ ಗಣೇಶ್ ಎಂಬ ಯುವಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಕೆಲಸ ಕೊಡಿಸುವೆ ಎಂದು ಯುವತಿಯ ಪೊಟೋಗಳನ್ನ ಪಡೆದು, ಆನಂತರ ಲಕ್ಷ ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದ ಖತರ್ನಾಕ್ ಆಸಾಮಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಹೊಸೂರು ಮೂಲದ ಗಣೇಶ್ ಬಂಧಿತ ಆರೋಪಿ (Tamilnadu youth blackmail). ಆರಂಭದಲ್ಲಿ, ಮನೆಯಲ್ಲೆ ಕುಳಿತು ಆನ್ ಲೈನ್ ಚಾಟಿಂಗ್ ಆ್ಯಪ್ ನಲ್ಲಿ ಕೆಲಸ ಕೊಡಿಸಿದ್ದ ಆರೋಪಿ. ಒಂದಷ್ಟು ತಿಂಗಳು ಸಾವಿರಾರು ರೂಪಾಯಿ ಸಂಬಳ‌ವನ್ನೂ ಕೊಡಿಸಿ ನಂಬಿಕೆ ಗಳಿಸಿದ್ದ. ನಂತರ ಯುವತಿಯರಿಂದ ಬೇಕಾದ ರೀತಿ ಪೊಟೋಗಳನ್ನ ಪಡೆದು ಅವರಿಗೆ ಬ್ಲಾಕ್ ಮೇಲ್ ಮಾಡತೊಡಗಿದ್ದ (kadugodi police).

ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿಬಿಟ್ಟಿದ್ದೆ ಎಂದ ನೊಂದ ಮಹಿಳೆ: ಅದೇ ರೀತಿ, ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕಿನ ಆವಲಹಳ್ಳಿ ಗ್ರಾಮ‌ದ ಯುವತಿಗೂ ಬ್ಲಾಕ್ ಮೇಲ್ ಮಾಡಿದ್ದು, ಮೂರು ಲಕ್ಷ ಹಣ ಕೊಡದಿದಲ್ಲಿ ಪೊಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡೋದಾಗಿ ಬೆದರಿಕೆಯೊಡ್ಡಿದ್ದ. ಈ ಕುರಿತು ಕಾಡುಗೋಡಿ ಪೊಲೀಸರಿಗೆ ಯುವತಿಯೊಬ್ಬರು ದೂರು ನೀಡಿದ್ದರು. ತನ್ನ9ದ 3 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದ. ಅಷ್ಟು ಹಣ ಕೊಡಲು ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೂ ಕಾಟ ಕೊಡತೊಡಗಿದ್ದ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೂ ನಿರ್ಧರಿಸಿಬಿಟ್ಟಿದ್ದೆ. ಕೊನೆಗೆ, ನನ್ನ ಪತಿಗೆ ವಿಷಯ ತಿಳಿಸಿದೆ. ಅವರು ಧೈರ್ಯ ತುಂಬಿ, ಪೊಲೀಸರಿಗೆ ದೂರು ಕೊಡಲು ಮುಂದಾದರು. ಪೊಲೀಸರು ಸಂಪೂರ್ಣಸಹಕಾರ ನೀಡಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ನೊಂದ ಮಹಿಳೆ ಟಿವಿ9 ಗೆ ತಿಳಿಸಿದ್ದಾರೆ.

ದೂರು ಹಿನ್ನೆಲೆ ತಮಿಳುನಾಡಿನಲ್ಲಿದ್ದ ಆರೋಪಿಯನ್ನ‌ ಕಾಡುಗೋಡಿ ಪೊಲೀಸರು ಬಂಧಿಸಿ, ಕರೆತಂದಿದ್ದಾರೆ. ವಿಚಾರಣೆ ವೇಳೆ ಇನ್ನೂ ಹಲವು ಅಮಾಯಕ‌ ಯುವತಿಯರಿಗೆ ಇದೇ ರೀತಿ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

500 ರೂಗೆ ವೈನ್ ಆರ್ಡರ್​ ಮಾಡಿ, 50 ಸಾವಿರ ರೂಪಾಯಿ ಕಳೆದುಕೊಂಡ ಬೆಂಗಳೂರು ಯುವತಿ! ಬೆಂಗಳೂರು ಯುವತಿಯೊಬ್ಬಳು 500 ರೂಪಾಯಿಗೆ ವೈನ್ ಆರ್ಡರ್​ ಮಾಡಿ 49,323 ರೂಪಾಯಿ ಕಳೆದುಕೊಂಡ ಪ್ರಸಂಗ ನಗರದಲ್ಲಿ ನಡೆದಿದೆ. ಉತ್ತರ ಭಾರತದ ಗೃಹಿಣಿಯೊಬ್ಬರು 2 ದಿನದ ಹಿಂದೆ ‘wines home delivery’ನಲ್ಲಿ ಆರ್ಡರ್​ ಮಾಡಿದ್ದರು. ಈ ವೇಳೆ ವೈನ್​ಗೆ 540 ರೂಪಾಯಿ ಪಾವತಿ ಮಾಡುವಂತೆ ಆ ಹಸರಿನಲ್ಲಿ ಕೇಳಲಾಗಿತ್ತು. ಅದಕ್ಕೂ ಮುನ್ನ ಡೆಲಿವರಿ ಫೀಸ್ ಎಂದು​ 10 ರೂಪಾಯಿ ಕಳಿಸುವಂತೆ ಹೇಳಿ ವೈನ್ಸ್​ ಹೋಮ್​ ಡೆಲಿವರಿ ವ್ಯಕ್ತಿ ಒಟಿಪಿ ಪಡೆದಿದ್ದ. ಒಟಿಪಿ ಪಡೆದು ಯುವತಿ ಬ್ಯಾಂಕ್​ ಖಾತೆಯಲ್ಲಿನ​ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಮಹಿಳೆಯ ಬ್ಯಾಂಕ್​ ಖಾತೆಯಿಂದ 49,323 ರೂಪಾಯಿ ವರ್ಗಾವಣೆಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಸಿಇಎನ್​ ಠಾಣೆಗೆ ಯುವತಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಮಗುವಿನ ಮಾರಕ ಕಾಯಿಲೆ ಚಿಕಿತ್ಸೆಗಾಗಿ ಮತಾಂತರ ನಿರ್ಧಾರ! ಟಿವಿ9 ವರದಿಯ ಬಳಿಕ ಬದಲಾಯ್ತು ಬಡ ಕುಟುಂಬದ ಜೀವನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada