ಮಗುವಿನ ಮಾರಕ ಕಾಯಿಲೆ ಚಿಕಿತ್ಸೆಗಾಗಿ ಮತಾಂತರ ನಿರ್ಧಾರ! ಟಿವಿ9 ವರದಿಯ ಬಳಿಕ ಬದಲಾಯ್ತು ಬಡ ಕುಟುಂಬದ ಜೀವನ

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದ ಈರಣ್ಣ ಹಾಗೂ ಸವಿತಾ ದಂಪತಿಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗು. ಈರಣ್ಣ ಡಾಬವೊಂದರಲ್ಲಿ ಕೆಲ್ಸ ಮಾಡ್ತಿದ್ರೆ, ಸವಿತಾ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಕಡುಬಡತನದಲ್ಲಿರೋ ಈ ದಂಪತಿಯ ಮೂರು ವರ್ಷದ ಮಗನಿಗೆ ಎದುರಾಗಿದ್ದು, ಥೆಲಿಸೇಮಿಯಾ ರೋಗ.

ಮಗುವಿನ ಮಾರಕ ಕಾಯಿಲೆ ಚಿಕಿತ್ಸೆಗಾಗಿ ಮತಾಂತರ ನಿರ್ಧಾರ! ಟಿವಿ9 ವರದಿಯ ಬಳಿಕ ಬದಲಾಯ್ತು ಬಡ ಕುಟುಂಬದ ಜೀವನ
ಬಡ ಕುಟುಂಬಕ್ಕೆ ಕಾಡಿದ ಮಾರಕ ಕಾಯಿಲೆಯ ಚಿಕಿತ್ಸೆಗಾಗಿ ಮತಾಂತರ ನಿರ್ಧಾರ! ಟಿವಿ9 ವರದಿಯ ಬಳಿಕ ಬದಲಾಯ್ತು ಬಡ ಕುಟುಂಬದ ಜೀವನ
Follow us
TV9 Web
| Updated By: ಆಯೇಷಾ ಬಾನು

Updated on:Mar 30, 2022 | 3:49 PM

ವಿಜಯಪುರ: ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ದಂಪತಿ ತಮ್ಮ ಮಗನ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಹೊಂದಿಸಲಾಗದೇ ನಿತ್ಯವೂ ಪರದಾಡುತ್ತಿದ್ದಾರೆ. ಈ ಕುಟುಂಬ ನಿತ್ಯ ದುಡಿದ್ರೇನೆ ಆ ದಿನದ ಸಂಸಾರ ಸಾಗೋದು. ಇಂತಹ ಸ್ಥಿತಿಯಲ್ಲೂ ಆ ದಂಪತಿಯ ಮಗನಿಗೆ ಬಂದೆರಗಿದ ಮಾರಕ ಕಾಯಿಲೆ, ಮತಾಂತರ ನಿರ್ಧಾರಕ್ಕೆ ತಂದು ನಿಲ್ಲಿಸಿತ್ತು. ಆದ್ರೆ ಟಿವಿ9 ಪ್ರಸಾರ ಮಾಡಿದ ವರದಿಯಿಂದ ಆ ಕುಟುಂಬವೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದ ಈರಣ್ಣ ಹಾಗೂ ಸವಿತಾ ದಂಪತಿಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗು. ಈರಣ್ಣ ಡಾಬವೊಂದರಲ್ಲಿ ಕೆಲ್ಸ ಮಾಡ್ತಿದ್ರೆ, ಸವಿತಾ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಕಡುಬಡತನದಲ್ಲಿರೋ ಈ ದಂಪತಿಯ ಮೂರು ವರ್ಷದ ಮಗನಿಗೆ ಎದುರಾಗಿದ್ದು, ಥೆಲಿಸೇಮಿಯಾ ರೋಗ. ಈ ರೋಗ ಗುಣಪಡಿಸಬೇಕು ಅಂದ್ರೆ ಸುಮಾರು 10 ರಿಂದ 15 ಲಕ್ಷ ರೂಪಾಯಿ ಖರ್ಚಾಗುತ್ತೆ ಅಂತ ವೈದ್ಯರು ಹೇಳಿದ್ದಾರೆ. ಹಣಕ್ಕಾಗಿ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಅಂಗಲಾಚಿದ್ದಾರೆ. ಯಾರಿದಂಲೂ ಹಣದ ಸಹಾಯವಾಗಿಲ್ಲ. ಕೊನೆಗೆ ಮತಾಂತರವಾದ್ರೆ ಹಣದ ಸಹಾಯ ಸಿಗುತ್ತೆ ಅಂತಾ ಅದ್ಯಾರೋ ಹೇಳಿದ ಮಾತು ಕೇಳಿ ಮಗನ ಚಿಕಿತ್ಸೆಗೆ ಹಣ ಹೊಂದಿಸುವ ಸಲುವಾಗಿ ಮತಾಂತರಕ್ಕೆ ಮುಂದಾಗಿದ್ರು.

ದಂಪತಿ ಹಣಕ್ಕಾಗಿ ಮತಾಂತರವಾಗ್ತಿರೋ ಬಗ್ಗೆ ಟಿವಿ9 ತಂಡ ಸುದ್ದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾಗ್ತಿದ್ದಂತೆ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆಧ್ಯಕ್ಷ, ಮಾಜಿ ಸಚಿವ ಎಂ.ಬಿ ಪಾಟೀಲ್, ಮಗುವಿಗೆ ತಮ್ಮ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ನೀಡಿ ಗುಣಪಡಿಸುವುದಾಗಿ ಭರವಸೆ ನೀಡಿದ್ರು. ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೂ ಸೂಚಿಸಿದ್ರು. ಸದ್ಯ ಪುಟ್ಟ ಬಾಲಕನಿಗೆ ಬಿ.ಎಂ ಪಾಟೀಲ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಗನಿಗೆ ಉಚಿತ ಚಿಕಿತ್ಸೆ ಸಿಗುತ್ತಿರೋದ್ರಿಂದ ದಂಪತಿ ನಿಟ್ಟುಸಿರು ಬಿಟ್ಟಿದ್ದು, ಮತಾಂತರವಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಒಟ್ನಲ್ಲಿ ಬಡತನದ ಬೇಗೆಯಿಂದ ಬಳಲಿಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಡುತ್ತಿದ್ದ ಕುಟುಂಬದಲ್ಲೀಗ ನಗು ಮೂಡಿದೆ. ಮಗ ಹುಷಾರಾಗ್ತಾನೆ. ಎಲ್ಲರಂತೆ ಈತ ಕೂಡ ಆಡಿ ನಲಿಯುತ್ತಾನೆ ಅನ್ನೋ ಆಶಾ ಭಾವ ದಂಪತಿಯಲ್ಲಿ ಮನೆ ಮಾಡಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇದನ್ನೂ ಓದಿ: Lakhimpur Kheri ನಿಮ್ಮ ನಿಲುವೇನು?; ಲಖಿಂಪುರ ಖೇರಿ ಪ್ರಕರಣದ ಆರೋಪಿಗೆ ಜಾಮೀನು ರದ್ದು ಕೋರಿ ಯುಪಿ ಸರ್ಕಾರ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ಬಿಜೆಪಿಗೆ ಮತ ಹಾಕಬೇಡಿ ಎಂದು ಬೆದರಿಕೆ ಹಾಕಿದ್ದ ಟಿಎಂಸಿ ಶಾಸಕನ ವಿರುದ್ಧ ಚುನಾವಣಾ ಆಯೋಗದ ಕ್ರಮ; ಪ್ರಚಾರದಿಂದ ನಿರ್ಬಂಧ

Published On - 3:42 pm, Wed, 30 March 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?