AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಬಸ್​ಗಳಲ್ಲೂ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಟಿವಿ ಅಳವಡಿಸಲು ಸರ್ಕಾರ ಆದೇಶ; ಸಿಡಿದೆದ್ದ ಬಸ್ ಮಾಲೀಕರು

ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಖಾಸಗಿ ಬಸ್​ಗಳಲ್ಲೂ ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಖಾಸಗಿ ಬಸ್‌ಗಳಲ್ಲೂ ಜಿಪಿಎಸ್ ಟ್ರ್ಯಾಕ್ ಸಿಸ್ಟಂ, ಬಸ್ ನ ಡೋರ್ ಆಟೋ ಮ್ಯಾಟಿಕ್ ಮೂಲಕ ಪ್ಯಾನಿಕ್ ಬಟನ್ ಸಿಸ್ಟಂ ಅಳವಡಿಕೆಗೆ ಆದೇಶ ಹೊರಡಿಸಿದೆ.

ಖಾಸಗಿ ಬಸ್​ಗಳಲ್ಲೂ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಟಿವಿ ಅಳವಡಿಸಲು ಸರ್ಕಾರ ಆದೇಶ; ಸಿಡಿದೆದ್ದ ಬಸ್ ಮಾಲೀಕರು
ಪ್ಯಾನಿಕ್ ಬಟನ್
Kiran Surya
| Updated By: ಆಯೇಷಾ ಬಾನು|

Updated on: Sep 05, 2023 | 2:46 PM

Share

ಬೆಂಗಳೂರು, ಸೆ.05: ಇಡೀ ದೇಶಕ್ಕೆ ದೇಶವೇ ಬೆಚ್ಚಿಬಿದ್ದಿದ್ದ ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್​ನಲ್ಲಿ ನಡೆದ ಅತ್ಯಾಚಾರ(Delhi Gang Rape) ಪ್ರಕರಣ ಬಳಿಕ ಕೇಂದ್ರ ಸರ್ಕಾರ ಎಲ್ಲಾ ಖಾಸಗಿ, ಸರ್ಕಾರಿ ಬಸ್ಸುಗಳಲ್ಲೂ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಟಿವಿ ಅವಳವಡಿಸಲೇಬೇಕೆಂದು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಎಂಟಿಸಿಯಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ(State Government) ಇದೀಗ ಖಾಸಗಿ ಬಸ್ಸುಗಳಲ್ಲೂ ಕಡ್ಡಾಯವಾಗಿ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಟಿವಿ ಅಳವಡಿಸಲು ಆದೇಶ ಮಾಡಿದೆ. ಇದಕ್ಕೆ ಕೆರಳಿರುವ ಖಾಸಗಿ ಬಸ್ ಮಾಲೀಕರು ಈಗಾಗಲೇ ನಿಮ್ಮ ಶಕ್ತಿ ಯೋಜನೆಯಿಂದ ಪ್ರಯಾಣಿಕರಿಲ್ಲದೆ ನಾವು ಬೀದಿಗೆ ಬಿದ್ದಿದ್ದೇವೆ ಇಂತಹ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಪ್ಯಾನಿಕ್ ಬಟ್ಟನ್ನು, ಜಿಪಿಎಸ್ಸು ಅಂದರೆ ನಮ್ಮ ಕೈಯಲ್ಲಿ ಆಗಲ್ಲ, ಬೇಕಾದ್ರೆ ಹಣ ಕೊಡಿ ಹಾಕಿಸ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬಸ್ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ

ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಖಾಸಗಿ ಬಸ್​ಗಳಲ್ಲೂ ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಖಾಸಗಿ ಬಸ್‌ಗಳಲ್ಲೂ ಜಿಪಿಎಸ್ ಟ್ರ್ಯಾಕ್ ಸಿಸ್ಟಂ, ಬಸ್ ನ ಡೋರ್ ಆಟೋ ಮ್ಯಾಟಿಕ್ ಮೂಲಕ ಪ್ಯಾನಿಕ್ ಬಟನ್ ಸಿಸ್ಟಂ ಅಳವಡಿಕೆಗೆ ಆದೇಶ ಹೊರಡಿಸಿದೆ. ಈ ಮೂಲಕ ಬಸ್ ಎಲ್ಲೆಲ್ಲಿ ಸಂಚಾರ ಮಾಡುತ್ತೆ, ಯಾವ ಮಾರ್ಗದಲ್ಲಿ ಓಡುತ್ತಿದೆ ಎಂಬ ಮಾಹಿತಿ ಕಲೆ ಹಾಕಲಿದೆ.

ಸರ್ಕಾರಕ್ಕೆ ಕಮೀಷನ್ ಸಿಗುತ್ತೇನೊ ಅದುಕ್ಕೆ ಈ ಆದೇಶ

ಸ್ಟೇಟ್ ಕಂಟ್ರೋಲ್ ರೂಂ ನಿಂದ ಬಸ್ ಗಳ ಬಗ್ಗೆ ಮಾಹಿತಿ ಕಲೆಹಾಕಲಿರುವ ಸಾರಿಗೆ ಇಲಾಖೆ ದೆಹಲಿ ನಿರ್ಭಯ ಕೇಸ್ ಬಳಿಕ ಇದೀಗ ರಾಜ್ಯದಲ್ಲಿ ಖಾಸಗಿ ಬಸ್​ಗಳನ್ನ ಟ್ರ್ಯಾಕ್ ಮಾಡಲು ಸಿದ್ದತೆ ನಡೆಸಿದೆ. ಆದರೆ ಖಾಸಗಿ ಬಸ್ ಗಳಲ್ಲಿ ಪ್ಯಾನಿಕ್‌ ಬಟನ್ ಮತ್ತು ಜಿಪಿಎಸ್ ಟ್ರ್ಯಾಕ್ ಅಳವಡಿಕೆಗೆ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು ಈಗಾಗಲೇ ಶಕ್ತಿ ಯೋಜನೆಯಿಂದ ನಮ್ಮ ಉದ್ಯಮ ನೆಲಕಚ್ಚಿದೆ. ಈ ಟೈಮಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಲು ಆಗೋದಿಲ್ಲ. ಸತ್ತ ಹೆಣ್ಣಕ್ಕೆ ಶೃಂಗಾರ ಮಾಡಲು ನಮ್ಮ ಕೈಯಲ್ಲಿ ಆಗಲ್ಲ. ಇದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಪಿಎಸ್, ಪ್ಯಾನಿಕ್ ಬಟ್ಟನ್ನು, ಸಿಸಿ ಕ್ಯಾಮರಾ ಕಂಪನಿಗಳಿಂದ ಕಮೀಷನ್ ಸಿಗುತ್ತವೆ ಅನ್ಸು‌ತ್ತೆ. ಅದಕ್ಕೆ ಈ ಆದೇಶವನ್ನು ಈಗ ಹೊರಡಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಗಲಾಟೆಗೆ ಮುಕ್ತಿ: ಯುಪಿಐ ಸ್ಕ್ಯಾನ್‌ ಮಾಡಿ ಟಿಕೆಟ್‌ ತಗೊಳ್ಳಿ

ಇನ್ನು ಇತ್ತ ಸಾರಿಗೆ ಇಲಾಖೆಯ ಸುತ್ತೋಲೆಗೆ ಖಾಸಗಿ ಬಸ್​ಗಳ ಮಾಲೀಕರಿಂದ ಆಕ್ರೋಶ ವ್ಯಕ್ತವಾಗಿದ್ದು ಪ್ಯಾನಿಕ್ ಬಟನ್, ಜಿಪಿಎಸ್ ಟ್ರ್ಯಾಕ್ ಸಿಸ್ಟಮ್ ಸೇರಿ ಇನ್ನಿತರ ಪರಿಕರಗಳು ಬಸ್ ಮಾಲೀಕರೇ ಭರಿಸಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಹೀಗಾಗಿ ಖಾಸಗಿ ಬಸ್ ಮಾಲೀಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಖಾಸಗಿ ಬಸ್ ಗಳು ಲಾಸ್ ನಲ್ಲಿವೆ ಪ್ರತಿನಿತ್ಯ ಖಾಲಿ ಖಾಲಿ ಬಸ್ ಗಳ ಸಂಚಾರ ಆಗ್ತಿದೆ. ಇದ್ರ ನಡುವೆ ಹೊಸ ಹೊಸ ಪ್ರಯೋಗಗಳು ನಮ್ಮ ತಲೆ ಮೇಲೆ ಹೇರುವ ಕೆಲಸ ಮಾಡಲಾಗ್ತಿದೆ ಎಂದು ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಇದು ನಾವು ಹೊರಡಿಸಿರುವ ಆದೇಶವಲ್ಲ 2016 ರಲ್ಲಿ ಕೇಂದ್ರ ‌ಸರ್ಕಾರ ಹೊರಡಿಸಿರುವ ಆದೇಶ. ಈಗ ಮತ್ತೆ ಕೇಂದ್ರ ಸರ್ಕಾರ ನಮಗೆ ರಿಮೈಂಡ್ ಮಾಡಿದೆ ನಾವು ಹಾಕಿಕೊಳ್ಳಲು ಹೇಳಿದ್ದೀವಿ ಅಷ್ಟೇ ಎಂದರು.

ಇನ್ನು ಮತ್ತೊಂದೆಡೆ ಈ ಬಗ್ಗೆ ಪ್ರಯಾಣಿಕರಾದ ನಂದಿನಿ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಒಳ್ಳೆಯ ಆದೇಶ ರಾತ್ರಿ ವೇಳೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡಲು ಭಯ ಆಗುತ್ತದೆ. ಈ ಜಿಪಿಎಸ್ಸು, ಪ್ಯಾನಿಕ್ ಬಟ್ಟನ್ನು, ಸಿಸಿ ಕ್ಯಾಮರಾ ಹಾಕುವುದು ನಮಗೆ ತುಂಬಾ ಧೈರ್ಯ ತರುತ್ತದೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನ ಓದಲು ಇದರ ಮೇಲೆ ಕ್ಲಿಕ್ ಮಾಡಿ

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ