ವಾಸ್ತವ್ಯ ಪ್ರಮಾಣ ಪತ್ರ ಇಲ್ಲದವರಿಗೂ ವಿದ್ಯುತ್ ಸಂಪರ್ಕ; ಬೆಂಗಳೂರಿಗರಿಗೆ ಗುಡ್​ ನ್ಯೂಸ್​ ಕೊಟ್ಟ ರಾಜ್ಯ ಸರ್ಕಾರ

| Updated By: preethi shettigar

Updated on: Mar 23, 2022 | 9:42 PM

ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿಯಿಂದ ವಾಸ್ತವ್ಯ ಪ್ರಮಾಣ ಪತ್ರ ನಿರಾಕರಿಸಿದ್ದರೆ ಅಂತಹ ಮನೆ ಹಾಗೂ ಫ್ಲ್ಯಾಟ್​ಗಳಿಗೆ ನಿರಾಕರಿಸಲ್ಪಟ್ಟಿದ್ದ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ವಾಸ್ತವ್ಯ ಪ್ರಮಾಣ ಪತ್ರ ಇಲ್ಲದವರಿಗೂ ವಿದ್ಯುತ್ ಸಂಪರ್ಕ; ಬೆಂಗಳೂರಿಗರಿಗೆ ಗುಡ್​ ನ್ಯೂಸ್​ ಕೊಟ್ಟ ರಾಜ್ಯ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವಾಸ್ತವ್ಯ ಪ್ರಮಾಣ ಪತ್ರ (OC) ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಿಸಲ್ಪಟ್ಟಿದ್ದ ಬೆಂಗಳೂರಿನ ನಾಗರಿಕರಿಗೆ ರಾಜ್ಯ ಸರ್ಕಾರ(State Government) ಗುಡ್ ನ್ಯೂಸ್ ನೀಡಿದೆ. ಓಸಿ‌ ಇಲ್ಲದವರಿಗೂ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದ್ದು, ಸುಮಾರು ಐದು ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ನಿರ್ಧಾರ ಮಾಡಿದೆ. ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿಯಿಂದ(BBMP) ವಾಸ್ತವ್ಯ ಪ್ರಮಾಣ ಪತ್ರ ನಿರಾಕರಿಸಿದ್ದರೆ ಅಂತಹ ಮನೆ ಹಾಗೂ ಫ್ಲ್ಯಾಟ್​ಗಳಿಗೆ ನಿರಾಕರಿಸಲ್ಪಟ್ಟಿದ್ದ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ವಿದ್ಯುತ್ ಸಂಪರ್ಕ ನೀಡದಂತೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆದೇಶ ನೀಡಿದ್ದರು. ಕೆಲವು ದಿನಗಳ ಹಿಂದೆ‌ ಇಂಧನ ಸಚಿವ‌ ಸುನೀಲ್ ಕುಮಾರ್ ಭೇಟಿ ಮಾಡಿ, ನಿಯಮ‌ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಬೆಂಗಳೂರಿನ ಬಿಜೆಪಿ ಶಾಸಕರು, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಇಂಧನ ಸಚಿವ ಸುನೀಲ್ ಕುಮಾರ್ ಚರ್ಚೆ ನಡೆಸಿದ್ದರು. ವಾಸ್ತವ್ಯ ಪ್ರಮಾಣ ಪತ್ರ ಇಲ್ಲದೇ‌ ಇರುವವರಿಗೂ ವಿದ್ಯುತ್ ಸಂಪರ್ಕ ನೀಡುವ ಪ್ರಸ್ತಾಪಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ನಿನ್ನೆ ಸಂಬಂಧಪಟ್ಟ ಕಡತ ಕೆಇಆರ್​ಸಿಗೆ ರವಾನೆ ಮಾಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬೀಳಲಿದೆ.

ಇದನ್ನೂ ಓದಿ:
ಪದವೀಧರನಿಂದ ಕೃಷಿಯಲ್ಲಿ ಕ್ರಾಂತಿ; ಕೈ ಕೊಡುತ್ತಿದ್ದ ವಿದ್ಯುತ್​ಗೆ ಪರ್ಯಾಯವಾಗಿ ಸೌರಶಕ್ತಿಯ ಮೊರೆ

ಸಿಕಂದರಾಬಾದ್​ನ ಮಿಲಿಟರಿ ವಾಸ್ತವ್ಯದ ಪ್ರದೇಶಕ್ಕೆ ನೀರು, ವಿದ್ಯುತ್​ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ ಸಚಿವ ಕೆಟಿಆರ್​

Published On - 9:41 pm, Wed, 23 March 22